ಆಲಮಟ್ಟಿ : ರಾಷ್ಟ್ರಧರ್ಮ ದೃಷ್ಟಾರ,ನೈಷ್ಟಿಕ ಬ್ರಮ್ಮಚಾರಿ,ಸಮಾಜಮುಖಿಯ ಅದಮ್ಯ ಚೇತನ, ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪನವರ ಕರ್ಮಭೂಮಿಯಲ್ಲಿಂದು ಐತಿಹಾಸಿಕ ದೇಶಭಕ್ತಿಯ ನಿನಾದ ಮೊಳಗಿದವು. ಯುವಜನತೆ ತಿರಂಗಾ ಕಲರವದಲ್ಲಿ ಮಿಂದೆದ್ದು ದೇಶಾಭಿಮಾನದ ವಿರಾಟ್ ರೂಪ ಪ್ರದಶಿ೯ಸಿದರು. ಜನಪದ ಸೊಗಡಿನ ಝೇಂಕಾರದ ಸದ್ದು ಮಾರ್ದನಿಸಿದವು.


ಆಲಮಟ್ಟಿಯ ಹಡೇ೯ಕರ ಮಂಜಪ್ಪ ಸ್ಮಾರಕದ ಅಂಗಳದಲ್ಲಿ ಶುಕ್ರವಾರ ಕಂಡು ಬಂದ ವೈಭವಯುತ ದೃಶ್ಯಗಳು ನಿಜಕ್ಕೂ ಮೈಮನಗಳು ನಿಬ್ಬೆರಾಗುವಂತೆ ಬೆರಗುಗೊಳಿಸಿದವು. ದೇಶಭಕ್ತಿಯ ಸವಿರುಚಿಯಲ್ಲಿ ಅಪಾರ ಸಂಖ್ಯೆಯ ಯುವಜನ ಸಮೂಹ ಸೇರಿದಂತೆ ಅಸಂಖ್ಯಾತ ಜನತೆ ತೇಲುವಂತೆ ಮಾಡಿದವು.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು 75 ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸದೃಢ ಭಾರತಕ್ಕಾಗಿ ಆಲಮಟ್ಟಿಯಿಂದ ತಾಳಿಕೋಟಿವರೆಗೆ ಸಂಘಟಿಸಿರುವ 8 ದಿನದ ಯುವಜನ ಸಂಕಲ್ಪ ನಡಿಗೆ 75 ಕಿಮೀ ಉದ್ದದ ಪಾದಯಾತ್ರೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಈ ಅಭೂತಪೂರ್ವ ಸವಿಭಾವಗಳು ಮೂಡಿಬಂದವು.
ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಮಹನೀಯರ ಸ್ಮರಣೆ ಯುವ ಮನಗಳಲ್ಲಿ ಹರಿದಾಡಿದವು. ಅವರ ತ್ಯಾಗದ ಕಥಾ ಹಂದರ ಯುವಕರ ಮೊಗದಲ್ಲಿ ನುಸುಳಿ ದೇಶಾಭಿಮಾನದ ಕಿಚ್ಚು ಹುಟ್ಟಿಸಿದವು.


ಸಾವಿರಾರು ಸಂಖ್ಯೆಯಲ್ಲಿ ಯುವಕ,ಯುವತಿಯರು ರಾಷ್ಟ್ರಧ್ವಜದ ವಿಶೇಷ ಉಡುಗೆಯಲ್ಲಿ ತ್ರಿವರ್ಣ ಧ್ವಜದ ಪೇಟಾ ತಲೆಗೆ ಸುತ್ತಿಕೊಂಡು ನಡಿಗೆಯಲ್ಲಿ ಭಾಗಿಯಾದರು. ರಾಷ್ಟ್ರ ನಾಯಕರ ಸ್ತಬ್ಧ ಚಿತ್ರಗಳು, ಕರಾವಳಿ ಭಾಗದ ಜನಾಕರ್ಷಕ ಕೌಂಶಾಳೆ ಸೇರಿದಂತೆ ವಿವಿಧ ಯಕ್ಷಗಾನಗಳ ನೃತ್ಯ, ದೇಶಾಭಿಮಾನದ ಗೀತರಾಗಗಳು ಗಮನ ಸೆಳೆದವು. ಮಂಜಪ್ಪನವರ ಪುತ್ಥಳಿಗೆ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಶಾಲಾ,ಕಾಲೇಜು ಮಕ್ಕಳು ಮೊದಲು ದಿನದ ಆರಂಭ ನಡಿಗೆಯಲ್ಲಿ ಉತ್ಸಹದಿಂದ ಪಾಲ್ಗೊಂಡಿದ್ದರು.


ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಉದ್ಯಮಿ ಭರತಗೌಡ ಪಾಟೀಲ, ಎಸ್.ವಿ.ವಿ.ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟಿ, ನಿಡಗುಂದಿ ಶ್ರೀ ರುದ್ರಮುನಿ ಶಿವಾಚಾರ್ಯ ಸಾಮೀಜಿ, ಮಾಜಿ ಸೈನಿಕರು, ಹಲ ಗಣ್ಯಾತೀತ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಈಶಾನ್ಯ ದೆಹಲಿ ಹೊರತು ಪಡಿಸಿ ದೇಶದಲ್ಲಿ 10ನೇ ತರಗತಿ ಸಿಬಿಎಸ್ಇ ಪರೀಕ್ಷೆಗೆ ತಾತ್ಕಾಲಿಕ ತಡೆ

ಹತ್ತನೇ ತರಗತಿ ಸಿಬಿಎಸ್ಇ ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದುಡಿಯೋಣ ಬಾ ಅಭಿಯಾನ

ಬೇಸಿಗೆ ಅವಧಿಯಲ್ಲಿ ತಾಲೂಕೀನ ಗ್ರಾಮೀಣ ಪ್ರದೇಶದ ಜನರಿಗೆ ಕೆಲಸ ಒದಗಿಸುವ ಉದ್ದೇಶದಿಂದ ಮಹಾತ್ಮಗಾಂಧಿ ರಾಷ್ಟಿಯ ಉದ್ದಯೋಗ ಖಾತರಿ ಯೋಜನೆಯಡಿ ಮಾರ್ಚ 15 ರಿಂದ ಮೂರು ತಿಂಗಳವರೆಗೆ ದುಡಿಯೋಣ ಬಾ ಅಭಿಯಾನ ಹಮ್ಮಿಕೋಳ್ಳಲಾಗಿದೆ.

ಪಿಜಿ ಬಾಡಿಗೆ ಹಣ ಕೊಡದಿದ್ದಕ್ಕೆ ಮಾಲಿಕ ಮಾಡಿದ್ದೇನು?

ಪಿಜಿ ಬಾಡಿಗೆ ನೀಡಿಲ್ಲವೆಂಬ ಕಾರಣಕ್ಕೆ ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

ಪೊಲೀಸ್ ಸಿಬ್ಬಂದಿಗೂ ಕೊರೊನಾ – ಹಲವು ಠಾಣೆಗಳು ಸೀಲ್ ಡೌನ್!

ಬೆಂಗಳೂರು:  ನಗರದಲ್ಲಿ ಪೊಲೀಸ್ ಸಿಬ್ಬಂದಿಗೂ ಕೊರೊನಾ ಮಹಾಮಾರಿ ಬೆನ್ನು ಬಿದ್ದಿರುವುದಕ್ಕೆ ಇಲಾಖೆ ವಿಷಾದ ವ್ಯಕ್ತಪಡಿಸುತ್ತಿದೆ. ಸಶಸ್ತ್ರ…