ಬೆಂಗಳೂರು:  ನಗರದಲ್ಲಿ ಪೊಲೀಸ್ ಸಿಬ್ಬಂದಿಗೂ ಕೊರೊನಾ ಮಹಾಮಾರಿ ಬೆನ್ನು ಬಿದ್ದಿರುವುದಕ್ಕೆ ಇಲಾಖೆ ವಿಷಾದ ವ್ಯಕ್ತಪಡಿಸುತ್ತಿದೆ. ಸಶಸ್ತ್ರ ಮೀಸಲು ಪಡೆಯ ಒಬ್ಬರು ಸೇರಿದಂತೆ 6 ಜನರಿಗೆ ಸೋಂಕು ತಗುಲಿದೆ.

ಹೊಸದಾಗಿ ಕೆ.ಆರ್‌.ಮಾರ್ಕೆಟ್‌ ಸಿಬ್ಬಂದಿಯೊಬ್ಬರಿಗೆ ಮಂಗಳವಾರ ಸೋಂಕು ತಗುಲಿದ್ದು, ಆ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಮವಾರವಷ್ಟೇ ಸೋಲದೇವನಹಳ್ಳಿ ಠಾಣೆಯ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಆ ಠಾಣೆಯನ್ನು ಸಹ ಬಂದ್‌ ಮಾಡಲಾಗಿದೆ.

ರಾಷ್ಟ್ರ ಮತ್ತು ರಾಜ್ಯದಲ್ಲಿ ಕ್ವಾರಂಟೈನ್‌ಗೆ ಒಳಪಟ್ಟವರಲ್ಲಿ ಸರಾಸರಿ ಶೇ.3ರಷ್ಟು ಮಂದಿಗೆ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ನಗರದಲ್ಲಿ ಅಪರಾಧಿಗಳು ಸೇರಿದಂತೆ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಲವು ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ, ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಹೆಬ್ಬಗೋಡಿ ಠಾಣೆಯಲ್ಲಿ 30 ಸಿಬ್ಬಂದಿ, ಚಾಮರಾಜಪೇಟೆ ಠಾಣೆಯಲ್ಲಿ 23 ಸಿಬ್ಬಂದಿ, ಫ್ರೇಜರ್‌ಟೌನ್‌ ಠಾಣೆಯಲ್ಲಿ 40 ಸಿಬ್ಬಂದಿ, ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ 16 ಸಿಬ್ಬಂದಿ, ಸೋಲದೇವನಹಳ್ಳಿ ಠಾಣೆಯಲ್ಲಿ 15 ಸಿಬ್ಬಂದಿ, ಜೆ.ಜೆ. ನಗರ ಠಾಣೆಯಲ್ಲಿ 33 ಸಿಬ್ಬಂದಿ, ಜೆ.ಬಿ ನಗರ ಠಾಣೆಯಲ್ಲಿ 20 ಸಿಬ್ಬಂದಿ,ಕೆ.ಆರ್‌.ಮಾರ್ಕೆಟ್‌ ಠಾಣೆಯಲ್ಲಿ 8 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಮುಂಡರಗಿ: ಸೇತುವೆ ಕುಸಿತ ಸಂಚಾರ ವ್ಯತ್ಯಯ!

ತಾಲೂಕಿನ ಕೊರ್ಲಹಳ್ಳಿ ಬಳಿಯ ಸೇತುವೆ ಇಂದು ಬೆಳಗಿನ ಜಾವ ಕುಸಿತಗೊಂಡಿದ್ದು ಬೆಳಕಿಗೆ ಬಂದಿದೆ. ಅದೃಷ್ಟವಶಾತ್​ ಈ ಸಮಯದಲ್ಲಿ ಹೆಚ್ಚಿನ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿಲ್ಲ. ಆದರೆ ಘಟನೆಯಿಂದ ಬೆಳಿಗ್ಗೆ ಕಾರೊಂದು ಜಖಂಗೊಂಡಿದೆ ಎನ್ನಲಾಗಿದೆ.

ಸಿಎಂ ಗಳಿಗೆ ಪಾಠ ಮಾಡುವುದರಿಂದ ಸೋಂಕು ನಿಯಂತ್ರಣವಾಗಲ್ಲ

ಪರದೆಯಲ್ಲಿ ಮುಖ ತೋರಿಸಿದರೆ ದೇಶದಲ್ಲಿ ಕೊರೊನಾ ಸೋಂಕು ಓಡಿಹೋಗಲ್ಲ ಎಂದು ಸಿದ್ದರಾಮಯ್ಯ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಧಾನಿ ಮೋದ ಅವರನ್ನು ಟೀಕಿಸಿದ್ದಾರೆ.

ಸಚಿವ ನಾಗೇಶ ನಾಯಕತ್ವ: ಅಭಿವೃದ್ಧಿ ಪಥದಲ್ಲಿ ಶಿಕ್ಷಣ ಇಲಾಖೆ- ಸ್ಪಂದನಾಭಾವದಿಂದ ಸಮಸ್ಯೆಗಳು ಕ್ಷೀಣ…!

ಉತ್ತರಪ್ರಭ ಸುದ್ದಿಆಲಮಟ್ಟಿ: ಶಿಕ್ಷಣ ಇಲಾಖೆಯ ಅಭಿವೃದ್ಧಿ ಕಾರ್ಯಕ್ಕೆ ಇಡೀ ಇಲಾಖೆ, ಶಿಕ್ಷಕರು, ಮಕ್ಕಳು, ಸಂಘಟನೆಗಳು, ಪಾಲಕರು-ಪೋಷಕರು,…