ಹಾಸನ: ಪಿಜಿ ಬಾಡಿಗೆ ನೀಡಿಲ್ಲವೆಂಬ ಕಾರಣಕ್ಕೆ ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

ಇಲ್ಲಿಯ ಖಾಸಗಿ ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ಯುವತಿಯರಿಬ್ಬರು, ಯುಗಾದಿ ಹಬ್ಬಕ್ಕೆಂದು ಮೈಸೂರಿನಲ್ಲಿರುವ ಮನೆಗೆ ತೆರಳಿದ್ದರು. ನಂತರ ಲಾಕ್ಡೌತನ್ ಆದ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಪಿಜಿಗೆ ಬಂದಿರಲಿಲ್ಲ.

ಇಂದು ಬಟ್ಟೆ, ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಬಾಡಿಗೆ ಕಾರು ಮಾಡಿಕೊಂಡು ಪಿಜಿಗೆ ಬಂದಿದ್ದಾರೆ. ಈ ವೇಳೆ ಎರಡು ತಿಂಗಳ ಬಾಡಿಗೆ ಹಣ ನೀಡಲೇಬೇಕು ಎಂದು ಪಿಜಿ ಮಾಲೀಕ ಒತ್ತಾಯಿಸಿದ್ದಾನೆ. ಈ ವೇಳೆ ಯುವತಿಯರು ಹಣವಿಲ್ಲ ಎಂದು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಅವರ ಮಾತಿಗೆ ಗೌರವ ನೀಡದ ಪಿಜಿ ಮಾಲೀಕ ಇಬ್ಬರನ್ನೂ ಪಿಜಿಯಲ್ಲೇ ಕೂಡಿ ಹಾಕಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಡಾವಣೆ ಪೊಲೀಸರು ಯುವತಿಯರಿಬ್ಬರನ್ನು ಬಿಡುಗಡೆಗೊಳಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೂತುಹಲ ಕೆರಳಿಸಿದ ಸಿದ್ದರಾಮಯ್ಯ ದೆಹಲಿ ಬೇಟಿ

ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಿಢೀರ್‌ ದೆಹಲಿ ಭೇಟಿಗೆ ಮುಂದಾಗಿದ್ದಾರೆ.

ಮನೆಗೆ ಕನ್ನ : ಲಕ್ಷಾಂತರ ನಗದು ದೋಚಿ ಪರಾರಿಯಾದ ಕಳ್ಳರು

ಮುಳಗುಂದ: ರೈತ ಸೋಮಣ್ಣ ಸುಂಕದ ಅವರ ಮನೆಯ ಬಾಗಿಲ ಲಾಕ್ ಮುರಿದು ಒಳ ನುಗ್ಗಿದ್ದ ಕಳ್ಳರು…

ರಕ್ತದಾನ ಮಾಡಿ ಜೀವ ಉಳಿಸಿ

ಆರೋಗ್ಯವಂತ ಯುವಕ ಯುವತಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕೆಂದು ಐಎಂಎ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಆರ್.ಟಿ. ಪವಾಡಶೆಟ್ಟರ್ ಹೇಳಿದರು.

15 ದಿನದಲ್ಲಿ ಬಾಕಿ ತೆರಿಗೆ ವಸೂಲಿ ಮಾಡಿ : ನಗರಸಭೆಗೆ ಡಿಸಿ ಸೂಚನೆ

ಗದಗ ಬೆಟಗೇರಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಂ. ಸುಂದರೇಶಬಾಬು ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅವಳಿ ನಗರದ ಎಲ್ಲ ಮುಖ್ಯ ರಸ್ತೆಗಳ ತೆರೆದ ಗುಂಡಿಗಳನ್ನು ತಕ್ಷಣವೇ ಮುಚ್ಚಲು ನಿರ್ದೇಶನ ನೀಡಿದರು.