ರಿಯಾಜ ಮನಿಯಾರ

ನರಗುಂದ: ಬೇಸಿಗೆ ಅವಧಿಯಲ್ಲಿ ತಾಲೂಕೀನ ಗ್ರಾಮೀಣ ಪ್ರದೇಶದ ಜನರಿಗೆ ಕೆಲಸ ಒದಗಿಸುವ ಉದ್ದೇಶದಿಂದ ಮಹಾತ್ಮಗಾಂಧಿ ರಾಷ್ಟಿಯ ಉದ್ದಯೋಗ ಖಾತರಿ ಯೋಜನೆಯಡಿ ಮಾರ್ಚ 15 ರಿಂದ ಮೂರು ತಿಂಗಳವರೆಗೆ ದುಡಿಯೋಣ ಬಾ ಅಭಿಯಾನ ಹಮ್ಮಿಕೋಳ್ಳಲಾಗಿದೆ.

ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು. ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು. ಸ್ಥಳಿಯವಾವಾಗಿ ಉದ್ಯೋಗ ನೀಡಿ ಸ್ವಾವಲಂಭಿಗಳಾಗುವAತೆ ಮಾಡುವುದು. ಕೆಲಸ ಅಥವಾ ಕಾಮಗಾರಿಗೆ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ ಅವರು ತಿಳಿಸಿದ್ದಾರೆ.

ಜನಜಾಗೃತಿ ಕಾರ್ಯಕ್ರಮ :- ಮಾರ್ಚ 15 ರಿಂದ ಮಾರ್ಚ 22 ರವರೆಗೆ ದುಡಿಯೋಣ ಬಾ ಅಭಿಯಾನ ಕುರಿತು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಒಂದು ಕುಟುಂಬವು ವರ್ಷದಲ್ಲಿ 100 ದಿನಗಳ ಕೆಲಸ ಮಾಡಲು ಅವಕಾಶ ಇದ್ದು ಬೇಸಿಗೆ ಅವಧಿಯಲ್ಲಿ 60 ದಿನಗಳು ಕೆಲಸ ಮಾಡಿದರೆ 16500 ರೂ ಗಳಿಸಬಹುದು. ಇದರಿಂದ ಮುಂಬರುವ ಕೃಷಿ ಚಟುವಟಿಕೆಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಖರೀದಿ, ಮಕ್ಕಳ ಶಾಲಾ ಕಾಲೇಜು ಶುಲ್ಕ ಭರಿಸಲು ಅನುಕೂಲವಾಗುತ್ತದೆ ಎಂಬ ಅಂಶದ ಬಗ್ಗೆ ಗ್ರಾಮೀಣ ಜನರಲ್ಲಿ ಜನಜಾಗೃತಿ ಮೂಡಿಸಲಾಗುವುದು.

ಇದೇ ವೇಳೆ ಉದ್ಯೋಗ ಚೀಟಿ ಹೊಂದಿಲ್ಲದ ಕುಟುಂಬಗಳಿಗೆ ನಮೂನೆ-1 ರಲ್ಲಿ ಉದ್ಯೋಗಚೀಟಿಗಾಗಿ ಅರ್ಜಿ ಮತ್ತು ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳುವುದು, ನೊಂದಾಯಿತ ಕೂಲಿಕಾರರಿಂದ ನಮೂನೆ-6ರಲ್ಲಿ ಒಂದೇ ಬಾರಿಗೆ 3 ತಿಂಗಳ ಕೆಲಸದ ಬೇಡಿಕೆ ಪಡೆಯುವುದು ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಕೆಲಸದ ಬೇಡಿಕೆ ಪಡೆಯಲು ಬೇಡಿಕೆ ಪೆಟ್ಟಿಗೆಗಳನ್ನು ಇಡುವುದು ಈ ಜನಜಾಗೃತಿ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ ಎಂದು ಹೇಳಿದ್ದಾರೆ.

ಕೂಲಿಕಾರರಿಗೆ ನಿರಂತರ ಕೆಲಸ:-ಏಪ್ರೀಲ್1 ರಿಂದ ಜೂನ್ 15 ರವರೆಗೆ ಪ್ರತಿ ಸೋಮವಾರ ಕೆಲಸದ ಬೇಡಿಕೆ ಪೆಟ್ಟಿಗೆ ತೆರೆದು ಕೆಲಸದ ಬೇಡಿಕೆ ಸಲ್ಲಿಸಿದ ಕೂಲಿಕಾರರ ವಿವರಗಳನ್ನು ಎಂ,ಐ,ಎಸ್ ನಲ್ಲಿ ದಾಖಲಿಸುವುದು ಮತ್ತು 2 ದಿನಗಳೊಳಗೆ ಕೆಲಸ ಒದಗಿಸುವುದು. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಶಿಶುಪಾಲನೆ ಸೌಲಭ್ಯಗಳನ್ನು ಕಲ್ಪಿಸುವುದು, ಕೂಲಿಕಾರಿಗೆ ನಿರಂತರವಾಗಿ ಕೆಸಲ ಒದಗಿಸಲು ಕ್ರಮಕೈಗೊಳ್ಳಲಾಗಿದೆ.

ರಾಯಭಾರಿ ನೇಮಕಕ್ಕೂ ಅವಕಾಶ :- ದುಡಿಯೋಣ ಬಾ ಅಭಿಯಾನದ ಅನುಷ್ಟಾನ ಮತ್ತು ಮೇಲ್ವಚಾರಣೆಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿಯಾನದ ಕಾಲಾವಧಿಗೆ ರಾಯಭಾರಿಯನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ನೇಮಕ ಮಾಡಿಕೊಳ್ಳಬಹುದು. ನರೇಗಾ ಕೂಲಿ ಕೆಲಸದಲ್ಲಿ ದೀರ್ಘಕಾಲ ಮೇಟ್ ಆಗಿ ಕಾರ್ಯನಿರ್ವಹಿಸಿ ಅನುಭವ ಇರುವವರಿಗೆ ರಾಯಭಾರಿಯಾಗಿ ನೇಮಿಸಬಹುದಾಗಿದೆ. ಬೇಸಿಗೆ ಕಾಲದಲ್ಲಿ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೃಷಿ ಚಟುವಟಿಕೆಗಳಲ್ಲಿ ಕೂಲಿಯ ಅವಕಾಶ ಕಡಿಮೆ ಇರುವುದರಿಂದ ಅಗತ್ವಿರುವ ಎಲ್ಲಾ ಜನರೂ ಗ್ರಾಮ ಪಂಚಾಯತಿಯಿಂದ ಉದ್ಯೋಗ ಚೀಟಿ ಪಡೆದು ಕೆಲಸಕ್ಕಾಗಿ ಬೇಡಿಕೆ ಅರ್ಜಿ ಸಲ್ಲಿಸಿ ನರೇಗಾ ಯೋಜನೆಯಿಂದ ಅನುಕೂಲ ಪಡೆಯುವಂತೆ ನರಗುಂದ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ ತಿಳಿಸಿದ್ದಾರೆ.

2 comments
  1. ಗ್ರಾಮೀಣ ಭಾಗದಲ್ಲಿ ಇನ್ನೂ ಸರಿಯಾಗಿ ಮಳೆಯಾಗದ ಕಾರಣ ಕೃಷಿ ಕೂಲಿ ಕಾರ್ಮಿಕರಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ವಿಕಲಚೇತನರಿಗೆ ಸರ್ಕಾರ ಕೊಡಮಾಡುವ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಈ ಉದ್ಯೋಗದಿಂದ ಬರುವ ಕೂಲಿ ಬದುಕಿಗೆ ಸಂಪೂರ್ಣ ಆಸರೆ ಆಗಬಹುದು ಅನ್ನುವುದು ಕ್ಲಿಷ್ಟಕರ ಸಮಯದಲ್ಲಿ ಬರುವ ಹಣ ಬಹಳ ಸದುಪಯೋಗವಾಗುತ್ತದೆ ಆದ್ದರಿಂದ ದುಡಿಯೋಣ ದುಡಿಯೋನು ಬಾ ಅನ್ನುವ ಯೋಜನೆ ಕೆಲಸ ಬಹಳ ಅಚ್ಚುಕಟ್ಟಾಗಿ ಕೂಲಿ ಕಾರ್ಮಿಕರು ಗ್ರಾಮೀಣ ಭಾಗದಲ್ಲಿ ಬಹಳ ಅನುಕೂಲಕರ ಆಗಿದೆ ಅಂತ ಈ ಸಂದರ್ಭದಲ್ಲಿ ಹೇಳಬಹುದು ಸರ್ಕಾರ ಕೋರೋಣದ ಮಧ್ಯ ಈ ಕೆಲಸ ಕೊಡುತ್ತಿರುವುದು ಗ್ರಾಮೀಣ ಭಾಗದ ಜನತೆಗೆ ಬಾಳ ಖುಷಿ ಅನಿಸಿದೆ ಸರ್ಕಾರಕ್ಕೆ ಧನ್ಯವಾದಗಳು

Leave a Reply

Your email address will not be published. Required fields are marked *

You May Also Like

ಹಳದಿ ರೋಗ ಹಾಗೂ ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಮಾಡುವುದು ಹೇಗೆ.?

ಗದಗ: ಹೆಸರು ಹಾಗೂ ಗೋವಿನ ಜೋಳ ಬಿತ್ತನೆಯಾಗಿದ್ದು, ಈಗಾಗಲೇ ಹೆಸರು ಹೂವಾಡುವ ಹಂತ ಹಾಗೂ ಗೋವಿನ ಜೋಳ ಸುಮಾರು 30 ರಿಂದ 40 ದಿವಸದ ಬೆಳೆ ಇರುತ್ತವೆ. ಹೆಸರು ಬೆಳೆಯಲ್ಲಿ ವಿವಿದೆಡೆ ಹಳದಿ ರೋಗ ಮತ್ತು ಗೋವಿನ ಜೋಳದಲ್ಲಿ ಸೈನಿಕ ಹುಳುವಿನ ಬಾಧೇ ಹೆಚ್ಚಿದೆ. ಗದಗ ತಾಲೂಕಿನ ಉಪ ಕೃಷಿ ನಿರ್ದೇಶಕ ವೀರೇಶ ಹುನಗುಂದ ನೇತೃತ್ವದ ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಅಡವಿ ಸೋಮಾಪೂರ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿತು. ಹೆಸರು ಬೆಳೆಯಲ್ಲಿ ಹಳದಿ ರೋಗ ಹಾಗೂ ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕೋವಿಡ್‌ ಚಿಕಿತ್ಸೆ, ಸೌಲಭ್ಯಗಳಲ್ಲಿ ಲೋಪಗಳಾದರೆ ಸಂಸ್ಥೆಯ ಮುಖ್ಯಸ್ಥರೆ ಹೊಣೆ: ಸಚಿವ ಸುಧಾಕರ್

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ನೀಡುವ ವಿಷಯದಲ್ಲಿ ಲೋಪ ಅಥವಾ ದೂರುಗಳು ಕಂಡುಬಂದಲ್ಲಿ…

ಮಗನಿಗೆ ‌ಪರೀಕ್ಷೆಗೆ ಕರೆದೊಯ್ಯುವಾಗ ಅಪಘಾತ: ಸ್ಥಳದಲ್ಲೆ ತಂದೆ ಸಾವು.!

ರಾಯಚೂರು: ಮಗನನ್ನು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಕರೆದೊಯ್ಯುವ ವೇಳೆ ಅಪಘಾತ ಸಂಭವಿಸಿ ತಂದೆ ಸ್ಥಳದಲ್ಲೇ…

ಸರ್ಕಾರದ ನಡೆಯಿಂದ ನಮ್ಮ ಭಾಗದ ಯುವಕರಿಗೆ ಅನ್ಯಾಯ -ಮೋಹನ ದೊಡಕುಂಡಿ

ಉತ್ತರಪ್ರಭ ಸುದ್ದಿಗದಗ: 545 ಪಿ.ಎಸ್.ಐ ಹುದ್ದೆಗಳಿಗೆ ನೇಮಕಾತಿ ಕರೆದಿದ್ದ ಸರ್ಕಾರ ಸದ್ಯ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಯಾಗಿದ್ದರೂ…