ವಚನ ಸಾಹಿತ್ಯಕ್ಕೆ ಅಂಟಿದ ರಾಜಾಶ್ರಯ ಕಿತ್ತೆಸೆದ ಶರಣರು

ನಿಡಗುಂದಿ: ವಚನ ಸಾಹಿತ್ಯ ಸೃಷ್ಟಿಸುವಾಗ ಯಾರಿಗೂ ಮಣಿಯದೇ, ಯಾರ ಹಂಗಿನಲ್ಲಿರದೇ, ಅಂಜಿಕೆಯ ಭೀತಿ ಇಲ್ಲದೇ ರಾಜಾಶ್ರಯವನ್ನು ಕಿತ್ತೆಸೆದು ಸ್ವತಂತ್ರ ವಿಚಾರಗಳನ್ನು ವಚನಗಳ ಮೂಲಕ ಬಿಂಬಿಸಿದ ಅಂದಿನ ಶರಣರ ಧೈರ್ಯ ನಿಜಕ್ಕೂ ಮೆಚ್ಚಲೇ ಬೇಕು.ಮೂಡನಂಬಿಕೆ,ಕಂದಾಚಾರ ಇತರೆ ವಿಷಯಗಳನ್ನು ಮುಲಾಜಿಲ್ಲದೇ ಶರಣರು ಖಂಡಿಸುತ್ತಿದ್ದರು ಎಂದು ಮಕ್ಕಳ ಸಾಹಿತಿ ಡಾ.ಫ.ಗು.ಸಿದ್ದಾಪುರ ಹೇಳಿದರು. ಸಮೀಪದ ಗೊಳಸಂಗಿಯ ಚ.ಚ.ಹೆಬ್ಬಾಳ ಸಕಾ೯ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುರಗೇಶ ಹೆಬ್ಬಾಳ ಸ್ಮರಣಾರ್ಥ ಬಸವನ ಬಾಗೇವಾಡಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಘಟಕದ ಆಶ್ರಯದಲ್ಲಿ ಸಂಘಟಿಸಿದ ದತ್ತಿ ಉಪನ್ಯಾಸ ಹಾಗು ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು,12 ನೇ ಶತಮಾನದಲ್ಲಿ ಶರಣರು ನೀಡಿದ ವಚನಗಳು ಕನ್ನಡ ಸಾಹಿತ್ಯವನ್ನು ಅತ್ಯಂತ ಎತ್ತರಮಟ್ಟಕ್ಕೆ ಕೊಂಡೊಯ್ದು ಶ್ರೀಮಂತಗೊಳಿಸಿವೆ ಎಂದರು ಉಪನ್ಯಾಸಕ, ಸಾಹಿತಿ ಸಿ.ಎಂ.ಜೋಶಿ ಮಾತನಾಡಿ, ಗ್ರಾಮದ ಮುಖಂಡ, ಕೊಡುಗೈ ದಾನಿ, ಗ್ರಾಮದ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದ ದಿವಂಗತ ಮುರಗೇಶ ಹೆಬ್ಬಾಳ ಅವರ ಕೊಡುಗೆ ಅಪಾರ, ಪ್ರತಿಯೊಂದಕ್ಕೂ ಸ್ಪಂದಿಸುವ ಗುಣದ ಕಾರಣ ಡಿಸಿಸಿ ಬ್ಯಾಂಕ್ ನಿರ್ದೇಶಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೇರಿ ನಾನಾ ಹುದ್ದೆಗಳು ಅವರಿಗೆ ಆರಿಸಿ ಬಂದವು ಎಂದರು. ಹಿರಿಯ ಶರಣ ಜೀವಿ ಎಸ್.ಎಸ್. ಝಳಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಬಸವನಬಾಗೇವಾಡಿ ತಾಲ್ಲೂಕು ಘಟಕದ ಅಧ್ಯಕ್ಷ ವೀರಣ್ಣ ಮರ್ತೂರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ ಕಾಳಿಂಗ ಗೊಳಸಂಗಿ, ರಾಜೇಶ್ವರಿ ಹೆಬ್ಬಾಳ, ಕದಳಿ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಎಂ.ಆರ್. ಹೆಬ್ಬಾಳ, ಪ್ರೊ. ಎಸ್.ಎಸ್. ರಾಜಮಾನೆ, ಪ್ರೊ ಚಂದ್ರಶೇಖರ ಹಂಗರಗಿ, ಡಾ ಯುವರಾಜ ಮಾದನಶೆಟ್ಟಿ, ಪ್ರೊ ಸುಭಾಸ, ಕೆ.ಎಸ್. ಹಿರೇಮಠ, ಶರಣು ಬಸ್ತಾಳ, ನೇಹಾ ಕಮತಗಿ, ಆರ್.ಜಿ. ಅಳ್ಳಗಿ ಇತರರು ಇದ್ದರು.

Exit mobile version