ಉತ್ತರಪ್ರಭ ಸುದ್ದಿ
ಆಲಮಟ್ಟಿ: ರಾಷ್ಟ್ರಧರ್ಮ ದೃಷ್ಟಾರ, ನೈಷ್ಟಿಕ ಬ್ರಮ್ಮಚಾರಿ, ಸಮಾಜಮುಖಿಯ ಅದಮ್ಯ ಚೇತನ, ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪನವರ ಕರ್ಮಭೂಮಿಯಲ್ಲಿಂದು ಐತಿಹಾಸಿಕ ದೇಶಭಕ್ತಿಯ ನಿನಾದ ಮೊಳಗಿದವು. ಯುವಜನತೆ ತಿರಂಗಾ ಕಲರವದಲ್ಲಿ ಮಿಂದೆದ್ದು ದೇಶಾಭಿಮಾನದ ವಿರಾಟ್ ರೂಪ ಪ್ರದಶಿ೯ಸಿದರು. ಜನಪದ ಸೊಗಡಿನ ಝೇಂಕಾರದ ಸದ್ದು ಮಾರ್ದನಿಸಿದವು. ಆಲಮಟ್ಟಿಯ ಹಡೇ೯ಕರ ಮಂಜಪ್ಪ ಸ್ಮಾರಕದ ಅಂಗಳದಲ್ಲಿ ಶುಕ್ರವಾರ ಕಂಡು ಬಂದ ವೈಭವಯುತ ದೃಶ್ಯಗಳು ನಿಜಕ್ಕೂ ಮೈಮನಗಳು ನಿಬ್ಬೆರಾಗುವಂತೆ ಬೆರಗುಗೊಳಿಸಿದವು. ದೇಶಭಕ್ತಿಯ ಸವಿರುಚಿಯಲ್ಲಿ ಅಪಾರ ಸಂಖ್ಯೆಯ ಯುವಜನ ಸಮೂಹ ಸೇರಿದಂತೆ ಅಸಂಖ್ಯಾತ ಜನತೆ ತೇಲುವಂತೆ ಮಾಡಿದವು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು 75 ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸದೃಢ ಭಾರತಕ್ಕಾಗಿ ಆಲಮಟ್ಟಿಯಿಂದ ತಾಳಿಕೋಟಿವರೆಗೆ ಸಂಘಟಿಸಿರುವ 8 ದಿನದ ಯುವಜನ ಸಂಕಲ್ಪ ನಡಿಗೆ 75 ಕಿಮೀ ಉದ್ದದ ಪಾದಯಾತ್ರೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಈ ಅಭೂತಪೂರ್ವ ಸವಿಭಾವಗಳು ಮೂಡಿಬಂದವು. ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಮಹನೀಯರ ಸ್ಮರಣೆ ಯುವ ಮನಗಳಲ್ಲಿ ಹರಿದಾಡಿದವು. ಅವರ ತ್ಯಾಗದ ಕಥಾ ಹಂದರ ಯುವಕರ ಮೊಗದಲ್ಲಿ ನುಸುಳಿ ದೇಶಾಭಿಮಾನದ ಕಿಚ್ಚು ಹುಟ್ಟಿಸಿದವು.


ಸಾವಿರಾರು ಸಂಖ್ಯೆಯಲ್ಲಿ ಯುವಕ,ಯುವತಿಯರು ರಾಷ್ಟ್ರಧ್ವಜದ ವಿಶೇಷ ಉಡುಗೆಯಲ್ಲಿ ತ್ರಿವರ್ಣ ಧ್ವಜದ ಪೇಟಾ ತಲೆಗೆ ಸುತ್ತಿಕೊಂಡು ನಡಿಗೆಯಲ್ಲಿ ಭಾಗಿಯಾದರು. ರಾಷ್ಟ್ರ ನಾಯಕರ ಸ್ತಬ್ಧ ಚಿತ್ರಗಳು, ಕರಾವಳಿ ಭಾಗದ ಜನಾಕರ್ಷಕ ಕೌಂಶಾಳೆ ಸೇರಿದಂತೆ ವಿವಿಧ ಯಕ್ಷಗಾನಗಳ ನೃತ್ಯ, ದೇಶಾಭಿಮಾನದ ಗೀತರಾಗಗಳು ಗಮನ ಸೆಳೆದವು. ಮಂಜಪ್ಪನವರ ಪುತ್ಥಳಿಗೆ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಶಾಲಾ,ಕಾಲೇಜು ಮಕ್ಕಳು ಮೊದಲು ದಿನದ ಆರಂಭ ನಡಿಗೆಯಲ್ಲಿ ಉತ್ಸಹದಿಂದ ಪಾಲ್ಗೊಂಡಿದ್ದರು. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಉದ್ಯಮಿ ಭರತಗೌಡ ಪಾಟೀಲ, ಎಸ್.ವಿ.ವಿ.ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟಿ, ನಿಡಗುಂದಿ ಶ್ರೀ ರುದ್ರಮುನಿ ಶಿವಾಚಾರ್ಯ ಸಾಮೀಜಿ, ಮಾಜಿ ಸೈನಿಕರು, ಹಲ ಗಣ್ಯಾತೀತ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಸಂಶಯದ ಆಸಾಮಿಯಿಂದ ಪತ್ನಿ, ಮಗನಿಗೆ ಚಾಕು ಇರಿತ

ಉತ್ತರಪ್ರಭ ಸುದ್ದಿ ಗದಗ: ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ, ಆರು ವರ್ಷದ ಮಗನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ…

” ಶಿಕ್ಷಕ- ಮಕ್ಕಳಲ್ಲಿ ನವ ಚೇತನ ತುಂಬಿದ ವಿಷಯ ವೇದಿಕೆ ” ಚಿತ್ರಕಲೆ ಪಠ್ಯಗಳ ಜೀವಾಳ

ಉತ್ತರಪ್ರಭ ಸುದ್ದಿವಿಜಯಪುರ: ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಹಾಗು ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಸಹಕಾರಿಯಾಗಿದೆ ಅಲ್ಲದೇ ಪಠ್ಯಾಧಾರೀತ…

ಶಾಶ್ವತ ಚಿರನಿದ್ರೆಗೆ ಜಾರಿದ ಚಿರು..!

ತಮಿಳುನಾಡು ಅಂದ ತಕ್ಷಣವೇ ಕಾವೇರಿ ನದಿ ವಹಿವಾಟೆ ನಮ್ಮ ಕಣ್ಣೆದುರು ಬರುತ್ತದೆ. ಕಾವೇರಿ ಸಮಸ್ಯೆ ತೀವ್ರ ಇದ್ದ 1980ರ ದಶಕದಲ್ಲಿ ಈ ಹುಡುಗ ಹುಟ್ಟುತ್ತಾನೆ. ಬೆಂಗಳೂರಿನಲ್ಲೆ ಬೆಳೆಯುವ ಈ ಹುಡುಗನ ಸಿನಿಮಾ ಹುಚ್ಚಿಗೆ ಅವರ ಮಾವ ನೀರು ಎರೆಯುತ್ತಾರೆ.

ಬೀಗ ನಿರಾಣಿ ಪರ ಬ್ಯಾಟ್ ಬೀಸಿದ ಜಿ.ಎಂ.ಸಿದ್ದೇಶ್…!

ಬೆಂಗಳೂರು: ಇತ್ತಿಚೆಗಷ್ಟೆ ಬಿಜೆಪಿಯಲ್ಲಿ ರಾಜಕೀಯದಾಟದ ಸದ್ದು ಜೋರಾಗಿಯೇ ಕೇಳಿತ್ತು. ಶಾಸಕ ಉಮೇಶ್ ಕತ್ತಿ ಮನೆಯಲ್ಲಿನ ಶೀಕರಣಿ ಊಟ ಏನುಬಕರಾಮತ್ತು ಮಾಡುತ್ತದೆಯೋ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು‌. ಸಭೆ ನಡೆಸಿದರು ಎನ್ನಲಾದ ಅತೃಪ್ತರಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ಮಾಜಿ ಸಚಿವ ಮುರಗೇಶ್ ನಿರಾಣಿ ಕೂಡ ಇದ್ದರು ಎನ್ನಲಾಗಿದೆ.