ನಿಡಗುಂದಿ: ರಸ್ತೆ ದಾಟುತ್ತಿದ್ದ ಕುರಿ ಹಿಂಡಿನ ಮೇಲೆ ಆಕಸ್ಮಿಕವಾಗಿ ಕಾರು ಹರಿದ ಪರಿಣಾಮ 8 ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆರು ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಸಮೀಪದ ಅಬ್ಬಿಹಾಳ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಬುಧವಾರ ಸಂಜೆ ನಡೆದಿದೆ. ಬೇನಾಳ ಎನ್ ಎಚ್ ಗ್ರಾಮದ ಅಶೋಕ ಬೆಳ್ಳೆಪ್ಪ ದಿಂಡವಾರ ಅವರಿಗೆ ಸೇರಿದ ಈ 14 ಕುರಿಗಳ ಹಿಂಡು ಮೇಯಲು ಹೊಲಕ್ಕೆ ಹೋಗಿದ್ದವು. ಹೆದ್ದಾರಿ ದಾಟುವಾಗ ಏಕಾಏಕಿ ಈ ಘಟನೆ ಸಂಭವಿಸಿದೆ.
ಆರು ಕುರಿಗಳಿಗೆ ಗಂಭೀರ ಗಾಯವಾಗಿದ್ದು, ಅವು ಕೂಡಾ ಬದಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಮೊದಲಿಗೆ ಬೈಕ್ ಸವಾರನೊಬ್ಬ ಒಂದು ಕುರಿಗೆ ಡಿಕ್ಕಿ ಹೊಡೆಸಿದಾಗ, ಇನ್ನುಳಿದ ಕುರಿಗಳು ಬೆದರಿ ಏಕಾಏಕಿ ರಸ್ತೆಗೆ ಬಂದ ಕಾರಣ ರಭಸದಿಂದ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆಯಿತು ಎನ್ನಲಾಗಿದ ನಿಡಗುಂದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಕುರಿ ಅಭಿವೃದ್ದಿ ನಿಗಮದಿಂದ ಕುರಿ ಮಾಲೀಕರಿಗೆ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
.

Leave a Reply

Your email address will not be published. Required fields are marked *

You May Also Like

ಡಿವೈಎಸ್ ಪಿ ವೆಂಕಟಪ್ಪ ನಾಯಕಗೆ ಸನ್ಮಾನ.

ವರದಿ: ವಿಠಲ ಕೆಳೂತ್ಮಸ್ಕಿ: ರಾಷ್ಟ್ರಪತಿ ಪ್ರಶಸ್ತಿ ಪಡೆದ ಸಿಂಧನೂರಿನ ಡಿವೈಎಸ್ ಪಿ ವೆಂಕಟಪ್ಪ ನಾಯಕಗೆ ಮಾಜಿ…

ರಾಯಣ್ಣ ಮೂರ್ತಿಗೆ ಅವಮಾನ: ರಾಯಣ್ಣ ಯುವಶಕ್ತಿ ವೇದಿಕೆ ಖಂಡನೆ

ಬೆಳಗಾವಿ ಜಿಲ್ಲೆ ಪೀರಣವಾಡಿ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಸಂಗೋಳ್ಳಿ ರಾಯಣ್ಣ ಯುವಶಕ್ತಿ ವೇದಿಕೆ ಲಕ್ಷ್ಮೇಶ್ವರ ತಾಲೂಕ ಘಟಕದ ವತಿಯಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಆಸ್ತಿ ವಿಷಯ ಸಂಬಂಧ ತನ್ನ ಪತ್ನಿಯನ್ನು ಕೊಂದ ಗಂಡನಿಗೆ ಜೀವಾವಧಿ ಶಿಕ್ಷೆ

ಆಸ್ತಿ ವಿಷಯ ಸಂಬಂಧ ತನ್ನ ಪತ್ನಿಯನ್ನು ಕೊಂದ ಗಂಡನಿಗೆ ಜೀವಾವಧಿ ಶಿಕ್ಷೆ