ಹನಮಪ್ಪ @ ಹನುಮಂತಪ್ಪ ಸಿದ್ದಪ್ಪ ಮೇವುಂಡಿ ಸಾ: ಅಸುಂಡಿ ತಾ:ಜಿ:ಗದಗ ಇವನು ಆಸ್ತಿ ವಿಷಯದ ಬಗ್ಗೆ ತನ್ನ ಹೆಂಡತಿ ವಿನೋದಾ ಇವಳನ್ನು ದಿನಾಂಕ: 10-08-2018 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಗದಗ ಗ್ರಾಮೀಣ ಪೋಲೀಸ್ ಠಾಣಾ ಹದ್ದಿ ಪೈಕಿ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ಹದ್ದಿಯಲ್ಲಿ ಆರೋಪಿತನು ಟ್ರಾö್ಯಕ್ಟರ್ ಟ್ರೇಲರ್‌ಕ್ಕೆ ಸಿಕ್ಕಿಸಿದ ಕಟ್ಟಿಗೆಯಿಂದ ತನ್ನ ಪತ್ನಿ ವಿನೋದಾ ಇವಳ ತಲೆಗೆ, ಮುಖಕ್ಕೆ, ಕೈಕಾಲುಗಳಿಗೆ ಬಲವಾಗಿ ಹೊಡೆದು ಭಾರೀ ಗಾಯ ಪಡಿಸಿ ಕೋಲೆ ಮಾಡಿದ ಅಪರಾಧ ಕುರಿತು ಕಲಂ: 302 ಭಾ.ದಂ.ಸ ರಡಿಯಲ್ಲಿ ಅಪರಾಧ ಮಾಡಿದ್ದಕ್ಕೆ ಗದಗ ಗ್ರಾಮೀಣ ಸಿ.ಪಿ.ಐ ಸಿದ್ದಲಿಂಗಪ್ಪಗೌಡ ಪಾಟೀಲ ಇವರು ತನಿಖೆ ಮಾಡಿ ಆರೋಪಿ ವಿರುದ್ದ ಆರೋಪಣಾ ಪತ್ರವನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು.

ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಎಸ್ ಮಹಾಲಕ್ಷಿ ನೇರಳೆ ಇವರು ಸದರ ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ ಆರೋಪಿತನಾದ ಹನಮಪ್ಪ @ ಹನುಮಂತಪ್ಪ ಸಿದ್ದಪ್ಪ ಮೇವುಂಡಿ ಇತನಿಗೆೆ ದಿನಾಂಕ-29-10-2021 ರಂದು ಭಾ.ದಂ.ಸA 302 ರಡಿ ಜೀವಾವಧಿ ಶಿಕ್ಷೆ ಹಾಗೂ 5,000/- ರೂ ದಂಡ, ದಂಡ ತುಂಬಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶೀಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಸವಿತಾ ಎಂ ಶಿಗ್ಲಿ ಸರಕಾರಿ ಅಭಿಯೋಜಕರು, ಗದಗ ಇವರು ಸಾಕ್ಷಿ ವಿಚಾರಣೆ ಮಾಡಿ ವಾದವನ್ನು ಮಂಡಿಸಿದರು.

Leave a Reply

Your email address will not be published. Required fields are marked *

You May Also Like

ಏಲಕ್ಕಿ ನಾಡಿನಲ್ಲೂ ಖಾತೆ ತೆರೆದ ಕೊರೋನಾ

ಈವರೆಗೂ ಯಾವುದೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗದ ಹಿನ್ನೆಲೆ ಹಾವೇರಿ ಜಿಲ್ಲೆ ಗ್ರೀನ್ ಝೋನ್‌ನಲ್ಲಿತ್ತು. ಆದರೆ ಇದೀಗ ಹಾವೇರಿಯಲ್ಲೂ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ ಏಲಕ್ಕಿ ನಾಡಿನಲ್ಲಿ ಮಹಾಮಾರಿ ಕೊರೋನಾ ಖಾತೆ ತೆರೆದಿದೆ.

ಗದಗನಲ್ಲಿ ಮತ್ತೆ ಇಬ್ಬರಿಗೆ ಕೊರೋನಾ ಪಾಸಿಟಿವ್

ಗದಗ: ಜಿಲ್ಲೆಯಲ್ಲಿ ಮತ್ತೆ ಎರಡು ಕೊರೋನಾ ಪಾಸಿಟಿವ್ ದೃಢಪಟ್ಟಿವೆ‌. ಈ ಮೂಲಕ ಸೋಂಕಿತರ ಸಂಖ್ಯೆ 20…

ಗದಗ ಜಿಲ್ಲೆಯಲ್ಲಿಂದು ಶತಕ ದಾಟಿದ ಸೋಂಕಿತರ ಸಂಖ್ಯೆ !

ಜಿಲ್ಲೆಯಲ್ಲಿಂದು 108 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 882 ಸೋಂಕಿತರು ಪತ್ತೆಯಾದಂತಾಗಿದೆ. ಇಂದು 11 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ