1 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ , 50 ಕಲಾ ತಂಡಗಳಿಂದ ಸಾಂಸ್ಕೃತಿಕ ಕಲರವ
ಉತ್ತರಪ್ರಭ
ಆಲಮಟ್ಟಿ:
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಮಹತ್ವಾಕಾಂಕ್ಷೆಯ ಸಶಕ್ತ ಭಾರತ ಪರಿಕಲ್ಪನೆಯ ಯುವಜನ ಸಂಕಲ್ಪ ನಡಿಗೆ ಯಾತ್ರೆಗೆ ಶುಕ್ರವಾರ ವೈಭವೋಪೇತ ಚಾಲನೆ ದೊರೆಯಲಿದೆ. 75 ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಯುವಜನ ಸಂಕಲ್ಪ ಯಾತ್ರೆಯ ಪೂರ್ವ ಸಿದ್ದತಾ ತಯಾರಿ ಗುರುವಾರ ಸಂಜೆ ಅಧಿಕಾರಿಗಳೊಂದಿಗೆ ಇಲ್ಲಿನ ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪ ಸ್ಮಾರಕ ಭವನದಲ್ಲಿ ಶಾಸಕ ನಡಹಳ್ಳಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಂಟು ದಿನಗಳಕಾಲ ನಡೆಯಲಿರುವ ನಡಿಗೆ ಯಾತ್ರೆಯ ರೂಪರೇಷೆಗಳ ಮಾಹಿತಿ ನೀಡಿದರು.

ಆಲಮಟ್ಟಿಯ ಮಂಜಪ್ಪ ಹಡೇ೯ಕರ ಸ್ಮಾರಕ ಭವನದಲ್ಲಿ ಗುರುವಾರ ಸಂಜೆ ಯುವಜನ ಸಂಕಲ್ಪ ನಡಿಗೆ ಯಾತ್ರೆ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿದರು.


ಆಲಮಟ್ಟಿಯಿಂದ ತಾಳಿಕೋಟೆವರೆಗೆ 75 ಕಿಮೀ 8 ದಿನಗಳಕಾಲ ಸಾಗುವ ನಡಿಗೆಯಲ್ಲಿ 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಚಾಲನಾ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಯುವಜನತೆ ಭಾಗವಹಿಸಲ್ಲಿದ್ದಾರೆ.
ಜನಸಾಮಾನ್ಯರ ಈ ನಡಿಗೆಯಲ್ಲಿ ಭಾಗವಹಿಸಲು ಆನ್ ಲೈನ್ ಮೂಲಕ 15229 ಯುವಜನತೆ ನಿನ್ನೆಯವರೆಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. 11 ಸಾವಿರಕ್ಕೂ ಹೆಚ್ಚು ಯುವತಿಯರು ಹೆಸರು ನೋಂದಾಯಿಸಿ ನಡಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ಈ ಭಾಗದಲ್ಲಿ ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಗಲಿದೆ. ಶುಕ್ರವಾರ ಬೆಳಿಗ್ಗೆವರೆಗೂ ಆ ಸಂಖ್ಯೆ ಹೆಚ್ಚಾಗಲಿದೆ ಎಂದರು. ಬೆಳಿಗ್ಗೆ ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪನವರ ಸ್ಮಾರಕ ಭವನದ ಪವಿತ್ರ ಸ್ಥಳದಲ್ಲಿ ಈ ಐತಿಹಾಸಿಕ, ವೀರೋಚಿತ ಸಂಕಲ್ಪ ನಡಿಗೆ ಯಾತ್ರೆ ಮಕ್ಕಳಿಂದಲೇ ಉದ್ಘಾಟನೆಗೊಳ್ಳಲಿದೆ.‌ ಮಂಜಪ್ಪನವರಿಗೆ ಪುಷ್ಪನಮನ, ಪೂಜೆಯೊಂದಿಗೆ ಗೌರವ ಸಲ್ಲಿಸಿ ನಡಿಗೆ ಯಾತ್ರೆ ಪ್ರಾರಂಭಿಸಲಾಗುವುದು.

ಅರ್ಥಪೂರ್ಣವಾಗಿ ಬೆಳಿಗ್ಗೆ 11 ಗಂಟೆಗೆ ನಡಿಗೆ ಯಾತ್ರೆಗೆ ವಿಶೇಷವಾಗಿ ಚಾಲನೆಗೆ ಸಂಕಲ್ಪ ಕೈಗೊಳ್ಳಲಾಗಿದ್ದು ಇಲ್ಲಿ 5 ಸಾವಿರಕ್ಕೂ ಅಧಿಕ ಯುವಜನತೆ ವಿಶಿಷ್ಟ ಉಡುಗೆ ತೋಡುಗೆಯಲ್ಲಿ ದೇಶಭಕ್ತಿಯ ರಣಕಹಳೆ ಮೊಳಗಿಸಲ್ಲಿದ್ದಾರೆ. ತ್ರಿವರ್ಣ ಪೇಟಾ ತಲೆಗೆ ಹಾಕಿಕೊಂಡು ರಾಷ್ಟ್ರಧ್ವಜದ ಸಮವಸ್ತ್ರ ಧರಿಸಿಕೊಂಡು ಪ್ರತಿಯೊಬ್ಬರೂ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಶಿಸ್ತಿನಿಂದ ನಡೆಗೆ ಯಾತ್ರೆಯಲ್ಲಿ ಯುವ ಮನಗಳು ಹೆಜ್ಜೆ ಹಾಕಲ್ಲಿದ್ದಾರೆ. ಯಾತ್ರೆ ಮಧ್ಯೆ ಸಾಯಂಕಾಲ ಹೊಳಿಗೆಊಟ,ಉಟೋಪಚಾರ, ಅಲ್ಪೋಹಾರ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮಾರ್ಗಮಧ್ಯೆ ವಿವಿಧೆಡೆ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಣರಾಜ್ಯೋತ್ಸವದ ಪಥ ಸಂಚಲನ ಮಾದರಿಯಲ್ಲಿ ಟ್ಯಾಬ್ಲೋ ಯಾತ್ರೆಯ ಬಹು ವಿಶೇಷವಾಗಿದೆ.

ಸ್ವಾತಂತ್ರ್ಯ ಖೋಧರ, ದೇಶಭಕ್ತರ,ದೇಶಕ್ಕಾಗಿ ದುಡಿದು ಮಡಿದ ವೀರರ,ಮಹಾತ್ಮರ ಭಾವಚಿತ್ರ ಹೊಂದಿದೆ. ಮುಂಭಾಗದಲ್ಲಿ ಭಾರತ ಮಾತೆ ನಾಡದೇವಿಯ ಪುತ್ಥಳಿ ಅಳವಡಿಸಲಾಗಿದ್ದು ಟ್ಯಾಬ್ಲೋ ಸುತ್ತ ಕನಾ೯ಟಕ ಗಾಂಧಿ ಮಂಜಪ್ಪ ಹಡೇ೯ಕರ ಚಿತ್ರದರ್ಪಣ ಕಾಣಲಿದೆ. ಯಾತ್ರೆ ಉದ್ದಕ್ಕೂ ಧ್ವನಿವರ್ಧಕ ಮೂಲಕ ದೇಶಭಕ್ತಿ ಗೀತೆಗಳು ಅವ್ಯಾಹತವಾಗಿ ತೇಲಿ ಬರಲಿವೆ. ಈ ನಡಿಗೆಯಾತ್ರೆ ಜನಸಾಮಾನ್ಯರ ನಡಿಗೆ ಯಾತ್ರೆವಾಗಿದ್ದು ಜನಸಾಮಾನ್ಯರ ಮಕ್ಕಳೇ ಇದರಲ್ಲಿ ಭಾಗಿಯಾಗಲ್ಲಿದ್ದಾರೆ ಎಂದರು.


ಮುಂದಿನ 25-30 ವರ್ಷದಲ್ಲಿ ಸಮಾಜ,ದೇಶವನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಯುವಜನತೆ ಮೇಲಿದೆ. ನಿಭಾಯಿಸುವ ದಾರಿಯ ಪರಿಕಲ್ಪನೆ ಯುವಕರಲ್ಲಿ ಮೂಡಿಸಲು ಹಾಗು ದೇಶಕ್ಕಾಗಿ ತ್ಯಾಗ, ಬಲಿದಾನ ಗೈದಿರುವ ಸ್ವಾತಂತ್ರ್ಯ ಹೋರಾಟಗಾರರ,ವೀರಯೋಧರ ಸ್ಮರಣೆಗಾಗಿ ಈ ನಡಿಗೆ ಯಾತ್ರೆ ಹಮ್ಮಿಕೊಳ್ಳಲಾಗಿದೆ. 6500 ಸಕಾ೯ರಿ ನೌಕರರು ಭಾಗಿ : ಆ 7 ರಂದು ಈ ನಡಿಗೆ ಯಾತ್ರೆ ಮುದ್ದೇಬಿಹಾಳಕ್ಕೆ ಬಂದಾಗ ತಾಲೂಕಿನ ಸುಮಾರು 6500 ಸಕಾ೯ರಿ ನೌಕರರು ಭಾಗಿಯಾಗಲ್ಲಿದ್ದಾರೆ.ಸ್ವತಃ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಕೂಡಾ ನಡಿಗೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.ಈ ನಡಿಗೆಯ ನೇತೃತ್ವವನ್ನು ಯುವ ಉದ್ಯಮಿ ಭರತಗೌಡ ಪಾಟೀಲ ವಹಿಸಲ್ಲಿದ್ದಾರೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು.
ಈ ಚಾರಿತ್ರಿಕ ಯಾತ್ರೆ ಸಾಮಾನ್ಯ ಮಕ್ಕಳ ಕೈಗಳ ಸ್ಪರ್ಶದಿಂದ ಅಧಿಕೃತವಾಗಿ ಚಾಲನೆಗೊಳಿಸಲಾಗುತ್ತಿದೆ. ಸಾತ್ವಿಕ ಶರಣ,ಕರುನಾಡುರತ್ನ ಮಂಜಪ್ಪನವರಂಥ ವ್ಯಕ್ತಿತ ಅಪರೂಪ. ಅಂಥ ಮಹಾನುಭಾವನ ಸನ್ನಿಧಿಯಿಂದ ನಡಿಗೆ ಯಾತ್ರೆ ಹೊರಟಿರುವುದು ನಮ್ಮೆಲ್ಲರ ಭಾಗ್ಯ. ಮಂಜಪ್ಪನವರ ಚರಿತ್ರೆ ಯಶೋಗಾಥೆ ಮೈನವಿರೇಳಿಸುವಂತಿದೆ. ಯುವಜನತೆ ಅವರ ಹೆಜ್ಜೆ ಗುರುತುಗಳನ್ನು ಸ್ಮರಿಸಿಕೊಳ್ಳಬೇಕು. ಅವರ ಕಾಯಕ ಚರಿತ್ರೆ ಅಮೋಘಮಯ. ಅವರ ದಿವ್ಯ ವ್ಯಕ್ತಿತ್ವಕ್ಕೆ ಹತ್ತಿರವಾಗಿರುವಂಥ ವ್ಯಕ್ತಿತ್ವ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರನ್ನು ಬಿಟ್ಟರೆ ಬೇರೆಲ್ಲೂ ಕಾಣದು ಎಂದರು. ಸಿದ್ದೇಶ್ವರ ಶ್ರೀಗಳವರನ್ನು ಕಾರ್ಯಕ್ರಮದ ಚಾಲನೆಗೆ ಆಹ್ವಾನಿಸಲಾಗಿತ್ತು. ಆದರೆ ಅನಾರೋಗ್ಯದ ಕಾರಣದಿಂದ ಪೂಜ್ಯರು ಒಪ್ಪಿಕೊಳ್ಳಲಿಲ್ಲ ಎಂದರು. ಪ್ರತಿಯೊಬ್ಬ ಯುವಜನತೆಯಿಂದ ಸ್ಪಂದನೆ,ಜನರಿಂದ ಮನ್ನಣೆ ಯಾತ್ರೆಗೆ ದೊರೆತಿದೆ. ದೇಶಾಭಿಮಾನದ ಪ್ರೇರಣೆಗಾಗಿ ಉತ್ಕ್ರಷ್ಟ ಸಂಕಲ್ಪದೊಂದಿಗೆ ಸಾಗಲಿರುವ ಯುವಜನ ನಡಿಗೆ ಸಂಕಲ್ಪ ಯಾತ್ರೆ ಸಾಕಾರಕ್ಕೆ ಎಲ್ಲರೂ ಕೈಜೋಡಿಸಿ ಯಶಸ್ವಿಗೊಶಿಸಬೇಕು ಎಂದು ಶಾಸಕ ನಡಹಳ್ಳಿ ಕೇಳಿಕೊಂಡರು.


ಸುದ್ದಿಗೋಷ್ಟಿಯಲ್ಲಿ ಎಸಿ ಬಲರಾಮ ನಾಯಕ,ಡಿವೈಎಸ್ ಪಿ ಅರುಣಕುಮಾರ ಕೋಳೂರ, ಚನ್ನಬಸು ಚೆನ್ನಿಗಾವಿ,ಪತ್ರಕರ್ತ ಡಿ.ಬಿ.ವಡವಡಗಿ, ವಿ.ಎಂ.ಪಟ್ಟಣಶೆಟ್ಟಿ, ಜಿ.ಎಂ.ಕೋಟ್ಯಾಳ, ಎಂ.ಸಿ.ಗೌಡರ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You May Also Like

ಮಹನೀಯರ ಕೊಡುಗೆ ನೆನಹು ಅಗತ್ಯ- ನುಗ್ಗಲಿ

ಉತ್ತರಪ್ರಭಆಲಮಟ್ಟಿ; ಪ್ರತಿಯೊಬ್ಬ ಭಾರತೀಯನಿಗೆ ಸಂವಿಧಾನವೇ ಶ್ರೇಷ್ಠ, ಅಂತಿಮ ಗ್ರಂಥ, ಅದರ ಪ್ರಕಾರ ನಾವು ನಡೆಯುವುದೇ ಅದಕ್ಕೆ…

ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹ: ಒಂದು ವರ್ಷ ಕಾಲ ಕುಡಿಯುವ ನೀರಿಗೆ ಸಮಸ್ಯೆ ಅಗದು- ಸಚಿವ ಸಿ.ಸಿ.ಪಾಟೀಲ

ಆಲಮಟ್ಟಿ: ಆಲಮಟ್ಟಿ ಜಲಾಶಯದಲ್ಲಿಗ ಕಳೆದ ವರ್ಷಕ್ಕಿಂತಲೂ ಈ ಬಾರಿ ಈ ವೇಳೆ ಗರಿಷ್ಠ ಮಟ್ಟದಲ್ಲಿ ನೀರು…

ವಿಧಾನ ಮಂಡಲದಲ್ಲಿ ಶಿಕ್ಷಕರ ವರ್ಗಾವಣೆ ವಿಧೇಯಕ ಮಂಡನೆ-ಶಿಕ್ಷಕರ ಸಂಘ ಹರ್ಷ

ಉತ್ತರಪ್ರಭ ಸುದ್ದಿಆಲಮಟ್ಟಿ: ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕವು ವಿಧಾನಮಂಡಲದಲ್ಲಿ ಮಂಡನೆಯಾಗಿದ್ದು, ಇದರಿಂದ ರಾಜ್ಯದ ಶಿಕ್ಷಕರ…