ಉತ್ತರಪ್ರಭ ಸುದ್ದಿ
ಬೆಂಗಳೂರು:
ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಸಿಬ್ಬಂದಿಗಳನ್ನು ನೇಮಕವಾದ ಹಾಗೂ ಅನುಮೋದನೆಯಾದ ಮೂಲ ಗ್ರಾಮ ಪಂಚಾಯತಿದ ಅನ್ಯ ತಾಲ್ಲೂಕು/ಗ್ರಾಮ ಪಂಚಾಯತಿಗಳಿಗೆ ನಿಯೋಜನೆ ಅಥವಾ ವರ್ಗಾವಣೆಯನ್ನು ಮಾಡಲಾಗಿದ್ದು, ಸದರಿ ಆದೇಶಗಳನ್ನು ರದ್ದುಪಡಿಸಿ ನೇಮಕವಾದ ಮೂಲ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸುವಂತೆ ಕರ್ನಾಟಕ ಗ್ರಾಮ ಪಂಚಾಯತ್ ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್ ನೌಕರರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಭೀಮರಡಿ ಪೋ ಪಾಟೀಲ್, ಅವರು ದಿನಾಂಕ 21-03-2021 ರಂದು ಮನವಿಯಲ್ಲಿ ಮನವಿ ಸಲ್ಲಿಸಲಾಗಿತ್ತು,
ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವರೂಪ ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳು) ನಿಯಮಗಳು, 2020ನ್ನು ಹೊರಡಿಸಲಾಗಿದ್ದು, ಗ್ರಾಮ ಪಂಚಾಯತಿಯ ಸಿಬ್ಬಂದಿಗಳ ನೇಮಕಾತಿ ಆಯಾ ಗ್ರಾಮ ಪಂಚಾಯತಿಗಳಾಗಿರುತ್ತದೆ ಹಾಗೂ ಶಿಸ್ತು ಪ್ರಾಧಿಕಾರವು ಆಯಾ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಿರುತ್ತಾರೆ. ಗ್ರಾಮ ಪಂಚಾಯತಿಯ ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್ ಹುದ್ದೆಯು ಗ್ರಾಮ ಪಂಚಾಯತಿಯ ಸಿಬ್ಬಂದಿ ಮಾದರಿಯಲ್ಲಿ ಒಂದು ಹುದ್ದೆಯಾಗಿರುವುದರಿಂದ ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ನೇಮಕವಾದ ಮೂಲ ಗ್ರಾಮ ಪಂಚಾಯತಿಯಿAದ ಅನ್ಯ ಜಿಲ್ಲಾ/ತಾಲ್ಲೂಕು/ಗ್ರಾಮ ಪಂಚಾಯತಿಗೆ ವರ್ಗಾಯಿಸಲು ಅಥವಾ ನಿಯೋಜಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ನೇಮಕವಾದ ನೌಕರರು ಅವರು ನೇಮಕಗೊಂಡ ಮೂಲ ಗ್ರಾಮ ಪಂಚಾಯತಿಯಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಒಂದು ವೇಳೆ, ಇಂತಹ ಸಿಬ್ಬಂದಿಗಳನ್ನು ಅನ್ಯ ಜಿಲ್ಲಾ/ ತಾಲ್ಲೂಕು/ ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಿದಲ್ಲಿ ಅಥವಾ ನಿಯೋಜಿಸಿದಲ್ಲಿ ಅಂತಹ ಆದೇಶಗಳನ್ನು ಕೂಡಲೇ ರದ್ದುಪಡಿಸಿ, ನೌಕರರು ನೇಮಕವಾದ ಮೂಲ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ಕ್ರಮ ವಹಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಶಿರಹಟ್ಟಿ: ನೂತನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಉದ್ಘಾಟನೆ

ಕಳೆದ ಹತ್ತು ತಿಂಗಳಿನಿಂದ ನೆನೆಗುದಿಗೆ ಬಿದಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ನೂತನ ಕೇಂದ್ರ ಕಚೇರಿಯನ್ನು ಮಂಗಳವಾರ ಶಾಸಕ ರಾಮಣ್ಣ ಲಮಾಣಿ ಉದ್ಘಾಟಿಸಿದರು.

ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ : 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Two Day Heavy Rains in the State: Yellow Alert in 6 Districts

ಅಕ್ರಮ ಮಣ್ಣು ಲೂಟಿ ಆರೋಪ : ಶಾಸಕ ಬಂಡಿ ರಾಜಿನಾಮೆಗೆ ಒತ್ತಾಯ

ಕೆರೆಯ ಗರಸು ಮಣ್ಣನ್ನು ಅಕ್ರಮವಾಗಿ ಲೂಟಿ ಮಾಡಿದ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಕಳಕಪ್ಪ ಬಂಡಿ ಕೂಡಲೇ ರಾಜಿನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಮೀಟಿ ವಕ್ತಾರ ಬಿ.ಎಸ್.ಶೀಲವಂತರ ಆಗ್ರಹಿಸಿದ್ದಾರೆ.

ಪ್ರೇಯಸಿಯ ಸಮಾಧಿ ಮುಂದ.. ಆತ್ಮಹತ್ಯೆ ಮಾಡಿಕೊಂಡ ಹುಡುಗ..!

ತಿ ಕುರುಡು, ಪ್ರೇಮಕ್ಕೆ ಕಣ್ಣಿಲ್ಲ ಅಂತಾರ. ಅದು ಖರೆನಾ ಅನಿಸುತ್ತ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಿದ್ದ ಪ್ರೇಯಸಿಯ ಸಮಾಧಿ ಎದುರು ಆತ್ಮಹತ್ಯೆ ಮಾಡಿಕೊಂಡು ಘಟನೆ ನಡದೈತಿ. ಬಿಳಿ ಹಾಳಿಯಂಗಿರೋ ಪ್ರೀತಿಗೆ ಪ್ರಾಣದ ಹಂಗಿಲ್ಲ ಅಂತಾರ. ಆದ್ರ ಈ ಜೋಡಿ ಈ ಮಾತು ಖರೆ ಮಾಡ್ಯಾರ. ಪ್ರೀತಿಯ ವಿಷಯದೊಳಗ ಮಾದರಿಯಾಗಿ ಕುಟುಂಬಸ್ಥರಿಗೆ ಶಾಶ್ವತ ದು:ಖ ನೀಡ್ಯಾರ.