ಶಿರಹಟ್ಟಿ: ಕಳೆದ ಹತ್ತು ತಿಂಗಳಿನಿಂದ ನೆನೆಗುದಿಗೆ ಬಿದಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ನೂತನ ಕೇಂದ್ರ ಕಚೇರಿಯನ್ನು ಮಂಗಳವಾರ ಶಾಸಕ ರಾಮಣ್ಣ ಲಮಾಣಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸ್ಥಳೀಯವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೇಂದ್ರವು ಕೆಲ ಕಾರಾಣಾಂತರಗಳಿಂದ ಲೋಕಾರ್ಪಣೆಗೊಳ್ಳುವುದು ತಡವಾಯಿತು. ಇದು ಅತ್ಯಂತ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದ್ದು, ಅಧಿಕಾರಿಗಳು ಸುಕ್ತ ರೀತಿಯ ಆಡಳಿತ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮೀಣ ಪ್ರದೇಶದ ಪ್ರತಿಭೆಗಳು ಈ ಇಲಾಖೆಯಿಂದ ಸಿಗುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಉಜ್ವಲವಾದ ಭವಿಷ್ಯ ರೂಪಿಸಿಕೊಳ್ಳಬೇಕು. ನನ್ನ ಮತಕ್ಷೇತ್ರ ಹಾಗೂ ತಾಲುಕಾ ಕೇಂದ್ರಕ್ಕೆ ಅವಶ್ಯವಿರುವ ಇನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ವಿಸ್ತಾರಣಾಧಿಕಾರಿ ರತ್ನಮ್ಮ ಹೊಸಮನಿ, ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ, ತಾಲೂಕಾ ವಿಸ್ತರಣಾಧಿಕಾರಿ ಬಸವರಾಜ ಬಳ್ಳಾರಿ, ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ಸುನಿಲಕುಮಾರ ನಾಯಕ್, ಜಿಪಂ ಮಾಜಿ‌ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಫಕ್ಕಿರೇಶ ರಟ್ಟಿಹಳ್ಳಿ, ದೇವಪ್ಪ ಲಮಾಣಿ, ತಿಪ್ಪಣ್ಣ ಕೊಂಚಿಗೇರಿ, ರೇಖಾ ಅಳವಂಡಿ, ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ಪರಮೇಶ ಪರಬ, ಸಿ.ಸಿ.ನೂರಶೆಟ್ಟರ, ರಾಮಣ್ಣ ಡಂಬಳ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಅಗಸ್ಟ್ 5 ರಂದು ಸಂಕಲ್ಪ ಯಾತ್ರೆಗೆ ಆಲಮಟ್ಟಿಯಲ್ಲಿ ಚಾಲನೆ

ಉತ್ತರಪ್ರಭಆಲಮಟ್ಟಿ : ದೇಶ, ನಾಡು ಕಟ್ಟುವಗೊಸ್ಕರ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಮಹನೀಯರ ಸ್ಮರಣೆಗಾಗಿ…

ಗದಗ-ಬೆಟಗೆರಿ ನಗರ ಸಭೆ ಕಾಂಗ್ರೆಸ್ ರಿಟ್ ಅರ್ಜಿ ವಜಾ ಉಷಾ ದಾಸರ ಅಧ್ಯಕ್ಷರಾಗಿ ಮುಂದುವರಿಕೆ

ಉತ್ತರಪ್ರಭ ಗದಗ: ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು ನ್ಯಾಯಾಲಯದಲ್ಲಿ…

ಲಕ್ಷ್ಮೇಶ್ವರದಲ್ಲಿ ಆಹಾರ ಕಿಟ್ ವಿತರಿಸಿದ ಶಾಸಕ ಲಮಾಣಿ

ಲಕ್ಷ್ಮೇಶ್ವರ: ಶಾಸಕ ರಾಮಣ್ಣ ಲಮಾಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರು ಬೇಗ ಗುಣಮುಖರಾಗಲೆಂದು ಪೌಷ್ಟಿಕ ಆಹಾರ ಕಿಟ್ ಹಾಗೂ ಮಾಸ್ಕ್ ವಿತರಣೆ ಮಾಡಿದರು.