ಪ್ರೀತಿ ಕುರುಡು, ಪ್ರೇಮಕ್ಕೆ ಕಣ್ಣಿಲ್ಲ ಅಂತಾರ. ಅದು ಖರೆನಾ ಅನಿಸುತ್ತ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಿದ್ದ ಪ್ರೇಯಸಿಯ ಸಮಾಧಿ ಎದುರು ಆತ್ಮಹತ್ಯೆ ಮಾಡಿಕೊಂಡು ಘಟನೆ ನಡದೈತಿ.

ಬಿಳಿ ಹಾಳಿಯಂಗಿರೋ ಪ್ರೀತಿಗೆ ಪ್ರಾಣದ ಹಂಗಿಲ್ಲ ಅಂತಾರ. ಆದ್ರ ಈ ಜೋಡಿ ಈ ಮಾತು ಖರೆ ಮಾಡ್ಯಾರ.
ಪ್ರೀತಿಯ ವಿಷಯದೊಳಗ ಮಾದರಿಯಾಗಿ ಕುಟುಂಬಸ್ಥರಿಗೆ ಶಾಶ್ವತ ದು:ಖ ನೀಡ್ಯಾರ.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರೇಯಸಿ ಅಗಲಿದ್ದಕ್ಕ್ ನೊಂದ ಯುವಕ ಪ್ರೇಯಸಿಯ ಸಮಾಧಿ ಮುಂದ, ಆತ್ಮಹತ್ಯೆಗೆ ಶರಣಾಗ್ಯಾನ. ನಿಜವಾಗ್ಲೂ ಇದೊಂದು ಮನಕಲುವಂತಹದ್ದು.
ಅಂದ್ಹಂಗ ಈ ಘಟನೆ ಆಂಧ್ರಪ್ರದೇಶದ ಮಹಾದೇವ್‍ ಪುರ ಮಂಡಲದ ಕುದುರುಪಲ್ಲಿ ಅನ್ನೋ ಊರಾಗ ನಡದೈತಿ.

ಮಹೇಶ್ ಅನ್ನೋ ಯುವಕ ಆತ್ಮಹತ್ಯೆ ಮಾಡಿಕೊಂಡಾಂವ. ಮೃತ ಮಹೇಶ್ ತನ್ನೂರೊಳಗ ಒಂದ್ ಹುಡುಗೀನ ಪ್ರೀತಿಸ್ತಿದ್ದ. ಆದರೆ, ಅನಾರೋಗ್ಯಕ್ಕೀಡಾಗಿದ್ದ ಆ ಹುಡುಗಿ ಇತ್ತೀಚೆಗೆ ತೀರಿಕೊಂಡಿದ್ಲಂತ. ಇದರಿಂದಾಗಿ ಭಾಳ್ ನೋವಿನಲ್ಲಿದ್ದ ಯುವಕ, ಸಮಾಧಿಯ ಬಳಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಾನ.

ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ರಿಂದ, ಮದುವೆಯಾಗಾಕ ಹ್ಯಾಂಗೋ ಕಷ್ಟಪಟ್ಟ ಮನಿಮಂದಿನ್ನ ಕೂಡ ಒಪ್ಪಿಸಿದ್ರಂತ. ಹೀಗಾಗಿ ಮದುವೀಗೆ ತಯಾರಿ ಕೂಡ ನಡದಿತ್ತಂತ. ಆದ್ರ ಆ ಹುಡುಗೀಗೆ ಏಕಾಏಕಿ ಆರೋಗ್ಯ ಹದಗೆಟ್ಟೈತಿ. ಹಿಂಗಾಗಿ ಪಾಪ ಆಯುವತಿ ಕೊನೆಯುಸಿರೆಳೆದ್ಲಂತ. ಕೊನಿಗೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಿದ್ದ ಮನದಿನಿಯನನ್ನ ಒಂಟಿ ಮಾಡಿ ಹೊಂಟಹ್ವಾದ್ಳು.

ಏನೋ ಒಂದೆರೆಡು ದಿನ. ಮುಂದ ಹ್ಯಾಂಗೂ ದಿನಾ ಕಳದಂಗ ಎಲ್ಲ ಮರಿತಾನ ಅಂತ ಪಾಪ, ಈ ಹುಡುಗನ್ ಮನಿಯವ್ರು ಲೆಕ್ಕಾಚಾರ ಹಾಕಿದ್ರು. ಆದ್ರೆ ಇಲ್ಲಿ ಆಗಿದ್ದಾ ಬ್ಯಾರೆ. ಪ್ರೇಯಸಿಯ ಸಾವಿನಿಂದ ಕಂಗೆಟ್ಟ ಹುಡುಗ ಅಕಿ ಸಮಾಧಿ ಮುಂದ ಆತ್ಮಹತ್ಯೆ ಮಾಡಿಕೊಂಡಾನ!

ದೇಶದೊಳಗ ಅದೆಷ್ಟೋ ಜನ ನಿಜ ಪ್ರೇಮಕ್ಕ ಸಾಕ್ಷಿ ಆಗ್ಯಾರ. ಪವಿತ್ರ ಪ್ರೇಮದ ಪಾವಿತ್ರ್ಯತೆ ಕಾಪಾಡಿಕೊಂಡಾರ. ಹಂಗ ಇವರದ್ದು ಒಂದು ನಿಜವಾದ ಪ್ರೇಮ ಅಂದ್ರು ತಪ್ಪಿಲ್ಲ.

ಹಾಂ..! ಅಂದ್ಹಂಗ ಪ್ರೇಯಸಿ ಅದ್ಹೇಗೋ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ಳು. ಆದ್ರೆ ಆರಾಮಾಗಿದ್ದಾಂವ, ತನ್ನ ಮನದಾಂಗಿಯನ್ ಬಿಟ್ಟು ಏಕಾಂಗಿಯಾಗಿ ಬದುಕೋಕಾಗಲಾರ್ದ, ಸತ್ ಹೋಗಿಟ್ಟಾ? ಆದ್ರ ಇವನನ್ನ ನಂಬಿಕೊಂಡ ಇರೋ ಮನಿ ಮಂದಿವಪಾಡೇನು? ಒಂಭತ್ತು ತಿಂಗಳ ಹೊತ್ತು, ಹೆತ್ತು, ಪೋಷಣಾ ಮಾಡಿ, ಇಷ್ಟ ಮಟ್ಟಕ್ ನಮ್ಮನ್ನ ಬೆಳಸಿದ ತಂದಿ-ತಾಯಿ, ಕುಟುಂಬಸ್ಥರ ಸ್ಥಿತಿ ಹ್ಯಾಂಗ?

ಮಗನ್ ಕಳಕೊಂಡಾಗ ಅವರ ಸ್ಥಿತಿ ಹ್ಯಾಂಗಾಗಿರಬಾರ್ದು? ಎಲ್ಲವೂ ಸಹಜ. ಆದ್ರ ಬಂದಿದ್ ಬರ್ಲಿ ಎದಿರಿಸೋಣ ಅನ್ನೋ ಆತ್ಮವಿಶ್ವಾಸ ನಮ್ಮೊಳಗ ಮನಿ ಮಾಡಬೇಕಾಗೈತಿ. ಅಂದ್ಹಾಗ ಮಾತ್ರ ಬದುಕಿನಲ್ಲಿ ಬಾಳಿ, ಬದುಕಿ, ಬದುಕನ್ನು ಅನುಭವಿಸಿ, ಬದುಕನ್ನು ರೂಪಿಸಿಕೊಂಡು, ಬದುಕನ್ನು ಬೆಳಗಿಸಿಕೊಳ್ಳೋದು ಸಾಧ್ಯ ಆಗತೈತಿ.
ಪ್ರೀತಿ, ಪ್ರೇಮ ಅವರವರ ವಯಕ್ತಿಕ ವಿಚಾರ. ಆದ್ರ ಪ್ರೇಮ ಕೇಡು ಬಯಸಲ್ಲ, ಒಳಿತು ಬಯಸತೈತಿ. ಪ್ರೀತಿ ಪ್ರಾಣ ಬಯಸಲ್ಲ, ನಿಜವಾದ ಪ್ರೀತಿ ಬೇಕಂತೈತಿ. ಈ ಘಟನೆ ಒಂದು ಕಡೆ ಈಗಿನ ಕಾಲದಾಗ ಎಂಥ ಪ್ರೇಮಿಪಾ ಅಂತ ಹುಬ್ಬಿ ಏರಿಸುವಂಗ್ ಮಾಡತೈತಿ. ಆದರೆ ಒಂದು ಕ್ಷಣದಾಗ ಯಾಕ ಈ ಹುಡುಗ್ರು, ಹುಡುಗ್ಯಾರು ಇಂಥ ಆತುರದ್ ನಿರ್ಧಾರ ತಗೋತಾರ ಅಂತ ಅನಿಸುತ್ತ.

Leave a Reply

Your email address will not be published. Required fields are marked *

You May Also Like

ಹೋಂ ಕ್ವಾರಂಟೈನ್ ಉಲ್ಲಂಘಿಸಿದವರು ಸಾಂಸ್ಥಿಕ ಕ್ವಾರಂಟೈನ್ ಗೆ..!

ಗದಗ: ಹೋಂ ಕ್ವಾರಂಟೈನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ ನಡೆಸಿದ್ದವರ ವಿರುದ್ಧ ಇಂದು ತಹಶೀಲ್ದಾರ್ ಗರಂ ಆದರು.…

ಪುರಸಭೆ ಸದಸ್ಯನಿಗೆ ಕೊರೊನಾ ಪಾಸಿಟಿವ್

ಪಟ್ಟಣದ ಪುರಸಭೆ ಸದಸ್ಯರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದ ಮಾಸಂಗಿಪುರದ ನಾಗರಿಕರಲ್ಲಿ ಆತಂಕ ಮನೆಮಾಡಿದೆ.

ಸಾರಿಗೆ ನೌಕರರಿಗೆ ಅಭದ್ರತೆ: ಉದ್ಯೋಗ ಕಡಿತಕ್ಕೆ ಸ್ವಯಂ ನಿವೃತ್ತಿಯ ಮಾಸ್ಟರ್ ಪ್ಲ್ಯಾನ್..!

ಬೆಂಗಳೂರು: ಈಗಾಗಲೇ ಸಾರಿಗೆ ಇಲಾಖೆಯ 2000 ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸುತ್ತಿದೆ. ಇದರಿಂದ ಖಾಯಂ ನೌಕರರಿಗೂ…

ಶಿರಹಟ್ಟಿ ತಾಲೂಕಿನಲ್ಲಿ ಗಣರಾಜ್ಯೋತ್ಸವ ಆಚರಣೆ ಬಗ್ಗೆ ತಹಶೀಲ್ದಾರ ನೀಡಿದ ಮಾಹಿತಿ

ಶಿರಹಟ್ಟಿ: ಪ್ರಸ್ತುತ ವರ್ಷದಲ್ಲಿ ಕೊರೊನಾ ನಿಯಮಾನುಸಾರ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ತಹಶೀಲ್ದಾರ ಯಲ್ಲಪ್ಪ…