ಉತ್ತರಪ್ರಭ ಸುದ್ದಿ: ಗದಗ
ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಪಟ್ಟಾ ಇತರಣೆ ಮಾಡದೇ ಇರುವುದು ಹಾಗೂ ಅವರಿಗೆ ಕಿರುಕುಳ ನಿಡುತ್ತಿರುವ ಅಧಿಕಾರಿಗಳ ವಿರುದ್ಧ ಆ.10 ರಂದು ಸಸ್ಯಕಾಶಿ ಕಪ್ಪತ್ತಗುಡ್ಡದಿಂದ ಕಡಕೋಳ, ಜಲ್ಲಿಗೇರಿ, ಜಲ್ಲಿಗೇರಿ ತಾಂಡಾ, ಮೂಲಕ ಶಿರಹಟ್ಟಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಬಗರಹುಕುಂ ಜಿಲ್ಲಾ ಘಟಕ ಅದ್ಯಕ್ಷ ರವಿಕಾಂತ ಅಂಗಡಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೋಂದಿಗೆ ಮಾತನಾಡಿ, ಹಲವು ದಶಕಗಳ ಕಾಲ ಪರಿಶಿಷ್ಟ ಜಾತಿ, ಪರಿಶಷ್ಟ ಪಂಗಡ, ಹಾಗೂ ಹಿಂದುಳಿದ ವರ್ಗಗಳ ಬಡ ರೈತರು ತಲೆತಲಾಂತರದಿ0ದ ಉಳುಮೆ ಮಾಡಿ ಜೀವನ ಕಂಡುಕೊ0ಡಿದ್ದು. ಮುಖ್ಯವಾಗಿ ಬಿತ್ತನೆ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ತೊಂದರೆ ಕೋಡುತ್ತಿರುವುದು ಖಂಡನಾರ್ಹವಾಗುವುದು ಬಗರಹುಕುಂ ಜಿಲ್ಲಾ ಘಟಕ ಅದ್ಯಕ್ಷ ರವಿಕಾಂತ ಅಂಗಡಿ ಹೇಳಿದರು. ಸಮಾಜ ಕಲ್ಯಾಣ ಅಧಿಕಾರಿಗಳು ಹೆಚ್ಚುವರಿ ಕೆಲಸ ಆಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಅರ್ಜಿಗಳನ್ನು ವಪಸ್ ಕಳುಹಿಸಿದ್ದು ಅವರ ಮೇಲೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಕೃಷಿ ಕಾಯಕ ಮಾಡುತ್ತಿರುವ ರೈತರಿಗೆ ಹಲವು ವಿಧದ ಕಿರುಕುಳ ನೀಡುತ್ತಿದ್ದಾರೆ. ಹಲವು ಬಾರಿ ಗ್ರಾಮಸಭೆ, ಅರಣ್ಯ ಸಮಿತಿ ಹಾಗೂ ಪಂಚಾಯ್ತಿ ಅಡಿಯಲ್ಲಿ ಠರಾವು ಪಾಸ್ ಮಾಡಿ ಸಮಾಜ ಕಲ್ಯಾಣ ಇಲಾಖೆಗೆ ಕಡತಗಳನ್ನು ಕಳುಹಿಸಿದರೂ ಇಲ್ಲಿಯವರೆಗೆ ಯಾವುದೇ ಪ್ರಗತಿ ಹೊಂದಿಲ್ಲ ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ರೈತರ ಅರ್ಜಿಗಳನ್ನು ಪಡೆಯಲು ಒಪ್ಪುತ್ತಿಲ್ಲ ಹೆಚ್ಚುವರಿ ಕೆಲಸ ಆಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಅರ್ಜಿಗಳನ್ನು ವಾಪಸ್ ಕಳುಹಿಸಿದ್ದು, ಅವರ ಮೇಲೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು. ಅಧಿಕಾರಿಗಳಿಂದ ಶೋಷಣೆಗೆ ಒಳಗಾಗಿರುವ ಜಿಲ್ಲೆಯ ಎಲ್ಲ ಅರಣ್ಯ ಜಮಿನಿನಲ್ಲಿ ಕೃಷಿ ಮಾಡುತ್ತಿರುವ ರೈತರ ಪರ ಆ. 10 ರಂದು ಕಪ್ಪತ್ತಗುಡ್ಡದಲ್ಲಿ ಎಲ್ಲ ರೈತರು ಜೊತೆಗೂಡಿ ಬೃಹತ್ ಪ್ರತಿಭಟನೆ ಜಾತಾ ನಡೆಸಲಿದ್ದು, ಸಾವಿರಾರು ಜನ ಪಾಲ್ಗೋಳ್ಳಲಿದ್ದಾರೆಂದು ತಿಳಿಸಿದರು.
ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿರುವ ಪ್ರತಿಭಟನಾ ಪಾದಯಾತ್ರೆಯ ಮೂಲಕ ಶಿರಹಟ್ಟಿ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದು ಪಕ್ಷಾತಿತ ಹಾಗೂ ಜಾತ್ಯಾತಿತವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಂಡರಗಿ,ನರಗುAದ,ರೋಣ ಹಾಗೂ ಲಕ್ಷೆ0ಶ್ವರ ತಾಲೂಕಿನ ರೈತರು ಆಗಮಿಸಲಿದ್ದಾರೆ ಎಮದು ತಿಳಿಸಿದರು. ಎನ್.ಟಿ. ಪೂಜಾರ, ಶ್ರೀನಿವಾಸ ಬಾರ್ಬರ, ಸಿಂದೋಗೆಪ್ಪಾ ಕರಿಗಾರ ಭರಮಪ್ಪ ಕಂಬಳಿ, ಕಾಶಪ್ಪ ಕಟ್ಟೇಕಾರ, ಈರಣ್ಣ ಚವ್ಹಾಣ, ಮಾಂಡ್ರೆ,ಶಿವಪ್ಪ, ಈರಣ್ಣ ಕುರಿ ಇದ್ದರು.

Leave a Reply

Your email address will not be published. Required fields are marked *

You May Also Like

ಆರೋಗ್ಯ ಸಚಿವರಿಂದಲೇ ಲಾಕ್ ಡೌನ್ ಉಲ್ಲಂಘನೆ: ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ…?

ಕೋರೋನಾ ಲಾಕ್ ಡೌನ್ ನಡುವೆಯೇ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರೇ ಲಾಕ್ ಡೌನ್ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ತಾವು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನೂರಾರು ಜನರು ಸೇರಿ ಸಚಿವ ಶ್ರೀರಾಮುಲು ಅವರಿಗೆ ಹೂಮಳೆ ಗೈದಿದ್ದಾರೆ.

ಇನ್ಮುಂದೆ ಮಾವು ಬೆಳೆದ ರೈತನೇ ಬೆಲೆ ನಿಗದಿ ಮಾಡ್ತಾನೆ

ಬೆಂಗಳೂರು: ಬೆಳೆಗಾರನೇ ಬೆಲೆ ನಿಗದಿಮಾಡುತ್ತಾನೆ. ಇತಿಹಾಸದಲ್ಲೆ ಮೊದಲಬಾರಿಗೆ ಇಂತಹ ಅವಕಾಶ ರೈತರಿಗೆ ಒದಗಿಸಲಾಗಿದೆ. ಈ ಹಿಂದೆ…

ಅಸಮರ್ಪಕ ಬಸ್ ಸೌಲಭ್ಯ: ವಿದ್ಯಾರ್ಥಿಗಳ ಪ್ರತಿಭಟನೆ

ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ಹೋಗಲು ಬಸ್ ಸರಿಯಾದ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದು, ಸಮಪರ್ಕಕ ಸಾರಿಗೆ ಕಲ್ಪಿಸುವಂತೆ‌ ಒತ್ತಾಯಿಸಿ ಸ್ಥಳೀಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಮುಂಜಾನೆ ಬಸ್ ಗಳನ್ನು ತಡೆದು ದಿಢೀರ್ ಪ್ರತಿಭಟನೆ ಕೈಗೊಂಡ ಘಟನೆ ನಡೆಯಿತು.