ಆಲಮಟ್ಟಿ : ಕನ್ನಡ ನೆಲದ ಕಾವಿಕಂಪು,ತ್ರಿವಿಧ ದಾಸೋಹಿ ತೋಂಟದ ಲಿಂ,ಡಾ.ಸಿದ್ದಲಿಂಗ ಮಹಾಸ್ವಾಮಿಗಳವರ ಸಮಾಜಮುಖಿ ಚಿಂತನೆ,ಆಲೋಚನಾ ಲಹರಿಯ ಶಕ್ತಿ ಅದ್ಭುತವಾಗಿ ಮೆರೆದಿವೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು.
ಸೋಮವಾರ ಸ್ಥಳೀಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಲಿಂ,ಡಾ.ತೋಂಟದ ಸಿದ್ದಲಿಂಗ ಶ್ರೀಗಳವರ 73 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮರಸ್ಯತೆಯ ನಾಡಿ ಮಿಡಿತದ ಸಿದ್ದಲಿಂಗ ಶ್ರೀಗಳು ಸದಾಕಾಲ ಅಜರಾಮರು ಎಂದರು.

ಕಾವಿಧಾರಿ ಸ್ವಾಮೀಜಿಯವರಲ್ಲೇ ವಿಶೇಷ, ಅಪರೂಪದ ಸ್ವಾಮೀಜಿಗಳಾಗಿ ಅಪಾರ ಸಾಮಾಜಿಕ ಸತ್ಕಾರ್ಯಗಳನ್ನು ಗೈದಿದ್ದಾರೆ. ಕನ್ನಡ ನೆಲ,ಜಲ,ಸಂಸ್ಕೃತಿ ಎಂದರೆ ಎಲ್ಲಿಲ್ಲದ ಅಭಿಮಾನ, ದೇಶಿ ಪ್ರೀತಿ ಅನನ್ಯ. ಶ್ರೀಗಳ ಉಕ್ತಿಗಳೆಲ್ಲ ವಿಶೇಷ. ಸ್ವಸ್ಥ, ಶುದ್ಧ ಕಾಯಕ ಸತ್ವಯುತವಾಗಿವೆ. ನಮಗೆಲ್ಲ ಚೈತನ್ಯದಾಯಕವಾಗಿ ಎಂದರು.

ಎಂ.ಎಚ್.ಎಂ.ಪ.ಪೂ.ಕಾಲೇಜಿನಲ್ಲಿ ಆಚರಿಸಲಾದ ಭಾವೈಕ್ಯತೆ ದಿನಾಚರಣೆಯಲ್ಲಿ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಮಾತನಾಡಿ, ಕನ್ನಡ ಜಗದ್ಗುರು ಲಿಂ,ತೋಂಟದ ಸಿದ್ದಲಿಂಗ ಶ್ರೀಗಳಿಗೆ ಲಭಿಸಿರು ಅಭಿಧಾನಗಳೇ ವ್ಯಕ್ತಿತ್ವ ಬಣ್ಣಿಸುತ್ತವೆ. ಪ್ರಖರ ಸೂರ್ಯನಂತೆ ಹೊಳೆದು ಸರ್ವಜನಾಂಗದ ಮನಸ್ಸುಗಳಿಗೆ ಸ್ಪೂರ್ತಿಯ ಸೆಲೆಯಾಗಿ ನಿಂತಿದ್ದಾರೆ. ಪೂಜ್ಯರ ಜ್ಞಾನ ಭಂಡಾರ ತರ್ಕಕ್ಕೆ ನಿಲುಕದು. ಹೆಜ್ಜೆ ಗುರುತುಗಳು ಅಮೋಘ ಮಯ, ಧಾಮಿ೯ಕ, ಸಾಮಾಜಿಕ ಕೈಂಕರ್ಯಕ್ಕೆ ನವದಿಸೆ ತೋರಿದ್ದಾರೆ. ಗೊಡ್ಡು ಸಂಪ್ರದಾಯ, ಕಂದಾಚಾರಗಳನ್ನು ನೇರವಾಗಿ ಖಂಡಿಸುತ್ತಾ ದಿಟ್ಟತೆ ಮೆರೆದ ಸಿದ್ದಲಿಂಗ ಶ್ರೀಗಳು ಬಹು ವಿಧದ ಮಹಾತ್ಕಾರ್ಯ ಮಾಡಿದ್ದಾರೆ. ಕಾಯಕ ತತ್ವಗಳ ಶ್ರೇಷ್ಠಯಿಂದ ಶ್ರೀಸಾಮಾನ್ಯ ಸ್ವಾಮೀಜಿಗಳಾಗಿ ಭಕ್ತರ ಮನದಲ್ಲಿ ಪೂಜ್ಯತೆ ಹರಿಸಿ ಕಂಗೋಳಿಸಿದ್ದಾರೆ ಎಂದರು.





ಇಲ್ಲಿನ ಎಸ್.ವಿ.ವಿ.ಸಂಸ್ಥೆಯಡಿಯಲ್ಲಿನ ಎಲ್ಲ ಶಾಲಾ ,ಕಾಲೇಜುಗಳಲ್ಲಿ ಭಾವೈಕ್ಯತೆ ದಿನಾಚರಣೆ ಆಚರಿಸಿ ಶ್ರೀಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಿಬ್ಬಂದಿಗಳು, ಉಪನ್ಯಾಸಕರು,ಮಕ್ಕಳೆಲ್ಲ ಉಪಸ್ಥಿತರಿದ್ದರು.
ಪೋಟೋ ಆಲಮಟ್ಟಿಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ತೋಂಟದ ಲಿಂ,ಡಾ.ಸಿದ್ದಲಿಂಗ ಶ್ರೀಗಳ ಜಯಂತಿ ನಿಮಿತ್ಯ ಭಾವೈಕ್ಯತೆ ದಿನಾಚರಣೆ ಆಚರಿಸಿ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.