ಬೆಂಗಳೂರು: ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 40,000ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿರುವ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅವರಿಗೆ ಇಂದು 73ನೇ ಜನ್ಮದಿನದ ಸಂಭ್ರಮ.
ಸಂಗೀತ ನಿರ್ದೇಶಕ ಮತ್ತು ಗಾಯಕನಿಗೆ ಟ್ವೀಟರ್ ನಲ್ಲಿ #SPBalasubrahmanyam ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಹಿಂದಿಯ ರೋಜಾ, ಸದ್ಮಾ, ಏಕ್ ದೂಜೇಕೆ ಲಿಯೆ, ಹಮ್ ಆಪ್ ಕೆ ಹೈ ಕೌನ್ ಸೇರಿದಂತೆ ಎಸ್.ಪಿ.ಬಿ. ಬಹುಭಾಷೆಯ ಚಲನಚಿತ್ರಗಳಿಗೆ ದನಿ ನೀಡಿದ್ದಾರೆ. ಜೊತೆಗೆ ಸಂಗೀತ ನಿರ್ದೇಶನದಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡದಲ್ಲಿ ಕರುನಾಡ ತಾಯಿ, ತಾಳಿ ಕಟ್ಟುವ ಶುಭವೇಳೆ, ಸುಂದರಿ ಸುಂದರಿ, ಓ ಚೆಲುವೆ ನಾಟ್ಯದ ಸರಿ ನವಿಲೇಯಂತಹ ವಿಶಿಷ್ಟ ಗೀತೆಗಳು, ವಚನಗಳು, ಭಕ್ತಿಗೀತೆಗಳು, ಭಾವಗೀತೆಗಳು ಅವರ ಕಂಠಸಿರಿಯಿಂದ ಮೂಡಿಬಂದು ಕನ್ನಡಿಗರನ್ನು ರಂಜಿಸಿವೆ.
ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ವಿಶೇಷತೆ ಎಂದರೆ, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್ ಮೊದಲಾದ ನಟರಿಗೆ ವಿವಿಧ ರೀತಿಯಲ್ಲಿ ದನಿ ನೀಡಿದ್ದಾರೆ. ಪ್ರತಿಯೊಬ್ಬ ನಾಯಕರಿಗೂ ವಿಭಿನ್ನ ರೀತಿಯ ದನಿ ನೀಡಿರುವ ವಿಶಿಷ್ಟ ದಾಖಲೆ ಎಸ್.ಪಿ.ಬಿ. ಅವರದು.

Leave a Reply

Your email address will not be published.

You May Also Like

ಕೊರೋನಾ ಕಾವ್ಯ-8

ನಂರುಶಿ ಅವರು ಗಜಲ್ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕರಾದ ಕೃತಿಗಳು ಈಗಾಗಲೇ ಹೊರತಂದಿದ್ದು, ತಮ್ಮ ಗಜಲ್ ಮೂಲಕ ಕೊರೋನಾ ವೈರಸ್ ನಿಂದಲೇ ಮಾತನಾಡಿಸಿದ್ದಾರೆ.

ಕೆರೆ, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಗದಗ: ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೆರೆಗಳ ಸರ್ವೇ ಕಾರ್ಯವನ್ನು ಕೈಗೊಂಡು ರಾಜಕಾಲುವೆಗಳ…

ಕೊರೊನಾ ಖರ್ಚು ವೆಚ್ಚದ ಕುರಿತು ಶ್ವೇತಪತ್ರ ಹೊರಡಿಸಿ: ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ಕರ್ನಾಟಕ ಸಿಎಂ ಬಿ.ಎಸ್.ಯಡಿಯೂರಪ್ಪ ಕೈಗೊಂಡ ಕ್ರಮಗಳು ಮತ್ತು ಮಾಡಿರುವ ಖರ್ಚು-ವೆಚ್ಚಗಳು…

ಕೊರೋನಾ ಯೋಧರಿಗೆ ಸಿಎಂ ಅಭಿನಂದನೆ ಸಲ್ಲಿಸಿದ್ದು ಏಕೆ?

ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆ ಹಾಗೂ ಮರಣ ಪ್ರಮಾಣ ತಗ್ಗಿಸುವಲ್ಲಿ ನಮ್ಮ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ಹೀಗಾಗಿ ಈ ಕಾರ್ಯದಲ್ಲಿ ಬಹಳಷ್ಟು ಕಾಳಜಿಯಿಂದ ಸೇವೆ ಸಲ್ಲಿಸಿದ ಕೊರೋನಾ ಯೋಧರ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.