ಆಲಮಟ್ಟಿ:
ಬಿ.ಎಸ್.ಯಡಿಯೂರಪ್ಪ, ರಾಜಕಾರಣದಿಂದ ನಿವೃತ್ತಿಯಾಗಲ್ಲ, ಅವರು ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತರಾಗುತ್ತಾರೆ, ಪಕ್ಷಕ್ಕೆ ಕೋಚ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಸುರಪುರ ಶಾಸಕ ನರಸಿಂಹ (ರಾಜುಗೌಡ) ನಾಯಕ ಹೇಳಿದರು. ಆಲಮಟ್ಟಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. 75 ವರ್ಷ ಪೂರೈಸಿದವರಿಗೆ ರಾಜಕಾರಣದಿಂದ ನಿವೃತ್ತಿ, ಕುಟುಂಬ ರಾಜಕಾರಣ ಎಂಬ ಬಿಜೆಪಿ ತತ್ವ ಎಲ್ಲರಿಗೂ ಅನ್ವಯಿಸುತ್ತದೆ, ಆದರೆ ಯಡಿಯೂರಪ್ಪ ಅವರ ಕುಟುಂಬಕ್ಕೆ ಇದು ಅನ್ವಯಿಸುವುದಿಲ್ಲ, ಬಿ.ಎಸ್. ವಿಜಯೇಂದ್ರ ಯುವಕರ ಐಕಾನ್ ಆಗಿದ್ದಾರೆ ಎಂದರು. ಕಾoಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಾಗಿ ನಡೆಯುತ್ತಿರುವ ಪೈಪೋಟಿ, ದಿನನಿತ್ಯದ ಗೊಂದಲ ಹೇಳಿಕೆಗಳಿಂದ ಕಾಮಿಡಿ ಶೋ ಎಂಬoತೆ ಬಿಂಬಿತವಾಗುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.

ಭದ್ರತೆ:
ಆಲಮಟ್ಟಿಯ ಎಂಡಿ ಕಚೇರಿಯಲ್ಲಿ ಮಂಗಳವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಗೆ ಭಾರಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಗೇಟ್ ಗೆ ಸ್ವತಃ ಡಿ.ವೈ.ಎಸ್. ಪಿ. ಅರುಣಕುಮಾರ ಕೋಳುರ ಹಾಗೂ ಸಿಪಿಐ ಸೋಮಶೇಖರ ಜುಟ್ಟಲ ನಿಂತೂ ಯಾರನ್ನೂ ಒಳಗಡೆ ಬಿಡಲಿಲ್ಲ. ಸಭೆಗೆ ಪತ್ರಕರ್ತರನ್ನು ಸೇರಿ ಸದಸ್ಯರಲ್ಲದ ಯಾರನ್ನೂ ಬಿಡಲಿಲ್ಲ. ಒಬ್ಬ ಡಿ.ವೈ.ಎಸ್.ಪಿ, ಇಬ್ಬರೂ ಸಿಪಿಐ, 5 ಜನ ಪಿಎಸ್ ಐ, 10 ಜನ ಎ.ಎಸ್.ಐ, 16 ಜನ ಹೆಡ್ ಕಾನ್ಸ್ ಟೇಬಲ್, 44 ಕಾನ್ಸ್ ಟೇಬಲ್, 8 ಮಹಿಳಾ ಕಾನ್ಸ್ ಟೇಬಲ್, 2 ಡಿ.ಆರ್. ವಾಹನ ಸೇರಿ ಸುಮಾರು 100 ಜನ ಪೊಲೀಸ್ ರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.