ಉತ್ತರಪ್ರಭ ಸುದ್ದಿ

ಲಕ್ಷ್ಮೇಶ್ವರ: ತಾಲೂಕಿನ ಗುಲಗಂಜಿಕೊಪ್ಪ ಗ್ರಾಮದ ವಿದ್ಯಾರ್ಥಿಗಳಿಗೆ ಯಾರು ಬಸ್ ನಿಲ್ಲಸೊಲ್ಲ ವಿದ್ಯಾರ್ಥಿಗಳಿಗೆ ಏನು ಮಾಡಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಸದಸ್ಯರುಹಾಗೂ ಕರವೇ ಸ್ವಾಭಿಮಾನ ಬಣದಿಂದ ಲಕ್ಷ್ಮೇಶ್ವರ ಬಸ್ ಡಿಪೋದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಸ್ವಾಭಿಮಾನ ಬಣದ ತಾಲೂಕ ಅಧ್ಯಕ್ಷ ಸಿ ಎಫ್, ಗಡ್ಡದೇವರಮಠ ಹಾಗೂ ಪಂಚಾಯತ್ ಸದಸ್ಯರಾದ ಅಣ್ಣಪ್ಪ ರಾಮಗೇರಿ ಹಾವೇರಿಯಿಂದ ಗದಗ ಕಡೆ ಹೋಗುವ ಎಲ್ಲಾ ಬಸಗಳು ಗುಲಗಂಜಿಕೊಪ್ಪ ಗ್ರಾಮದ ಮುಖಂತರ ಹೋದರು ಒಂದು ಬಸ್ ನಿಲ್ಲಿಸೋಲ್ಲ ರಾಣೇಬೆನ್ನೂರ್, ಬ್ಯಾಡಗಿ, ಲಕ್ಷ್ಮೇಶ್ವರ, ಗದಗ,ಡೀಪೋಗಳ ಹೀಗೆ ಯಾವುದೇ ಬಸ್ ಹೋದರು ವಿದ್ಯಾರ್ಥಿಗಳು ಬಸ್ ಸ್ಟಾಂಡ್ ನಲ್ಲಿ ನಿಂತಿದ್ದರು ಬಸ್ ನಿಲ್ಲಿಸಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದ್ದು ನಮ್ಮ ಗ್ರಾಮವು ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ತೊಂದರೆ ಆಗುತ್ತಿದ್ದು ನಮ್ಮ ಊರಿಗೆ ಬಸ್ ನಿಲ್ದಾಣ ಇದ್ದರು ನಿಲ್ಲದೆ ಹೋಗತಾ ಇವೆ ಆದ್ದರಿಂದ ಇದೆ ದಿನಾಂಕ 23-11-2021 ರ ಒಳಗೆ ಈ ತೊಂದರೆ ಸರಿಪಡಿಸದಿದ್ದರೆ ಗ್ರಾಮದ ಎಲ್ಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಪಂಚಾಯತಿ ಸದಸ್ಯರು ಗ್ರಾಮದಿಂದ ಹೋಗುವ ಎಲ್ಲ ಬಸಗಳನ್ನ ತಡೆದು ಮುಸ್ಕರ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು

ಈ ಸಂದರ್ಭದಲ್ಲಿ ನೀಲಪ್ಪ ತಿಮ್ಮಾಪುರ, ಎಫ್, ಬಿ, ಶಿವಬಸಣ್ಣನವರ, ಕೆ, ಎನ್, ಹೊಸಗೌಡ್ರ್, ರವಿ ಲಿಂಗಶೆಟ್ಟಿ, ರಾಮನಗೌಡ, ಪಾಟೀಲ್, ನಿಂಗನಗೌಡ್ರ ಹೊಸಗೌಡ್ರ, ರಾಮನಗೌಡ ಪಾಟೀಲ್, ಬಿ, ಕೆ, ದುರಗಣ್ಣನವರ, ಎಮ್, ಬಿ, ಮಾದರ, ಕೆ, ಎಸ್, ಗೌಡ್ರ, ಆರ್, ಬಿ, ಬಳಗನೂರ, ಗ್ರಾಮಸ್ಥರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You May Also Like

ಅಗಡಿ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ ಆರಂಭ

ನಗರದ ಪ್ರತಿಷ್ಠಿತ ಶ್ರೀಮತಿ.ಕಮಲಾ ಹಾಗೂ ಶ್ರೀ.ವೆಂಕಪ್ಪ ಎಂ ಅಗಡಿ ಇಂಜನೀಯರಿಂಗ್ ಕಾಲೇಜು,ಲಕ್ಷ್ಮೇಶ್ವರದಲ್ಲಿ ಸಿಇಟಿ ಆಪ್ಷನ್ ಎಂಟ್ರಿ ಸಹಾಯ ಕೇಂದ್ರ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದಂತಹ ಡಾ.ಉದಯಕುಮಾರ ಹಂಪಣ್ಣವರ ತಿಳಿಸಿದ್ದಾರೆ.

ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಸಿ ಸಿದ್ದಾರ್ಥನ್ ಅವಹೇಳನಕ್ಕೆ ಸೋಮು ಲಮಾಣಿ ಖಂಡನೆ..!

ಸೋಮು ಲಮಾಣಿ, ಅಧ್ಯಕ್ಷರು ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಸಂಘ, ಕಾರ್ಯಾಧ್ಯಕ್ಷರು ಲಂಬಾಣಿ ಬಂಜಾರಾ ಕಲ್ಯಾಣ ಸಂಘ, ಗದಗ ಹಾಗೂ ಸಂಘಟನಾ ಕಾರ್ಯದರ್ಶಿ ಕಾಂಗ್ರೆಸ್ ಸಮಿತಿ ಗದಗ ಜಿಲ್ಲೆ (ಎಸ್.ಸಿ ಘಟಕ).

ಹಾವೇರಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್

ಸವಣೂರಿಗೆ ಬಂದಿದ್ದ ಮೂವರು ಮೂವರಲ್ಲಿ ಇಬ್ಬರಿಗೆ ಕೊರೋನಾ ಸೊಂಕು ಧೃಡವಾದಂತಾಗಿದೆ. ಇನ್ನೊಂದು ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ