ಆಲಮಟ್ಟಿ : ಕನಾ೯ಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ನಿಡಗುಂದಿ ತಾಲೂಕು ಸಂಘಟನೆ ಆಶ್ರಯದಲ್ಲಿ 42 ನೇ ರೈತ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ನಿಡಗುಂದಿಯ ಸಿದ್ದಣ್ಣ ನಾಗಠಾಣ ಅವರ ಕಲ್ಯಾಣ ಮಂಟಪದಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಹಲ ರೈತ ಸಂಘಟನೆ ಪ್ರಮುಖರು,ರೈತರನೇಕರು ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿದ್ದ ರೈತ ಸಂಘದ ಬಸವರಾಜ ಬಾಗೇವಾಡಿ, ರೈತರೆಲ್ಲರು ಒಗ್ಗೂಡಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದರು. ಪಟ್ಟಣ ಪಂಚಾಯತ ಸದಸ್ಯ ಶಿವಾನಂದ ಮುಚ್ಚಂಡಿ, ರೈತರಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆ ಯೋಜನೆಗಳ ಸದುಪಯೋಗ ಪ್ರತಿಯೊಬ್ಬ ರೈತರು ಪಡೆಯಲು ಮುಂದಾಗಬೇಕು. ರೈತ ಸಂಘಟನೆಗೆ ಸದಾ ಬೆಂಬಲವಾಗಿ ನಿಂತು ಇನ್ನಷ್ಟು ಬಲಪಡಿಸಬೇಕು. ಇಂದಿನ ದಿನಮಾನದಲ್ಲಿ ಸಂಘಟನೆಯೇ ನಮಗೆಲ್ಲ ಮೊದಲು ಆಧಾರಸ್ತಂಭವಾಗಿದೆ ಎಂದರು.


ರೈತ ಸಂಘದ ತಾಲೂಕಾಧ್ಯಕ್ಷ ಸೀತಪ್ಪ ಗಣಿ, 1980 ರಲ್ಲಿ ನವಲಗುಂದ, ನರಗುಂದಲ್ಲಿ ರೈತರ ಹಕ್ಕುಗಳಿಗಾಗಿ ನಡೆದ ಬಂಡಾಯದ ಹೋರಾಟಕ್ಕೆ ಇಂದು 42 ವರ್ಷ ಗತಿಸಿದವು. ಅಂದು ಗುಂಡೆಟಿಗೆ ಬಲಿಯಾದ ರೈತ ಬಸಪ್ಪ ಲಕ್ಕುಂಡಿ ಸಾವಿಗೆ ರೈತರೆಲ್ಲ ಎಚ್ಚೇತ್ತುಕೊಂಡರು. ಸಂಘಟನೆಗಳು ಹುಟ್ಟಿಕೊಂಡವು. ಇಡೀ ರಾಜ್ಯದ ತುಂಬೆಲ್ಲ ಹೋರಾಟದ ಕಹಳೆ ಮೊಳಗಿದವು. ಸಂಘಟನೆಗಳಿದ್ದರೆ ಮಾತ್ರ ನ್ಯಾಯ ಸಿಗುವುದು. ನಮ್ಮ ಬದುಕಿಗೆ ರೈತ ಪರ ಸಂಘಗಳು ಆಸರೆವಾಗಬಲ್ಲವು. ಆ ಕಾರಣ ಸಂಘಟನೆ ಸದೃಢವಾಗಿ ಬೆಳೆಯಬೇಕು.ಅದಕ್ಕೆ ರೈತರು ಶಕ್ತಿ ತುಂಬಬೇಕು ಎಂದರು.
ಪಪಂ ಸದಸ್ಯ ಪ್ರಲ್ಹಾದ ಪತ್ತಾರ, ಕಂದಾಯ ನಿರೀಕ್ಷಕ ಸಲೀಂ ಹುಲಗೊಂಡ, ಪ್ರಗತಿಪರ ರೈತ ಪ್ರಕಾಶ ರೇಷ್ಮಿ,ಬೀರಪ್ಪ ಇಂಜಗೆನೆರಿ,ಶಿವಪ್ಪ ಇಂಗಳೇಶ್ವರ,ತಾಲೂಕಾ ಕುರುಬರ ಸಂಘದ ಪ್ರಧಾನ ಕಾರ್ಯದಶಿ೯ ಪರಶು ಕುರಿ, ಮಾಜಿ ಸೈನಿಕರಾದ ಗುಳಪ್ಪ ಅಂಗಡಿ, ಯಲಗೂರೇಶ ಮಸೂತಿ, ಎಸ್.ಎಸ್.ಹಳೇಮನಿ ಇತರರು ಅತಿಗಳಾಗಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಾವಾಸಾಬ ವಾಲಿಕಾರ, ಕಾಯಾ೯ಧ್ಯಕ್ಷ ವೆಂಕಟೇಶ ವಡ್ಡರ, ಉಪಾಧ್ಯಕ್ಷ ಪೀರಸಾಬ ನದಾಫ್, ಸಾಬಣ್ಣ ಅಂಗಡಿ,ಖಜಾಂಚಿ ಸುಭಾಸ ಚೋಪಡೆ,ಕಾರ್ಯದರ್ಶಿ ಮಲ್ಲಯ್ಯ ನಾಗೂರಮಠ ಮೊದಲಾದವರಿದ್ದರು. ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

You May Also Like

ಮಡದಿ ಮಾಂಗಲ್ಯ ಸರ ಮಾರಿ ಕುಡಿದ ಆತ ಮಾಡಿದ್ದೇನು?

ಚಿಕ್ಕಬಳ್ಳಾಪುರ: ಕುಡಿದ ಮತ್ತಿನಲ್ಲಿದ್ದ ಪಾಪಿ ಪತಿಯೊಬ್ಬ ಮಡದಿಯನ್ನೇ ಕೊಲೆ ಮಾಡಿರುವ ಘಟನೆ ಚೇಳೂರು ಪೊಲೀಸ್‌ ಠಾಣೆ…

ರಾಜ್ಯದಲ್ಲಿಂದು 445 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 445 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 11,005 ಕ್ಕೆ ಏರಿಕೆಯಾದಂತಾಗಿದೆ.

ಸೂರ್ಯ ನಮಸ್ಕಾರವೇ ಜೀವನ ಶಕ್ತಿಯ ಆಧಾರ

ಮುಳಗುಂದ : ಸಮೀಪದ ಸೊರಟೂರ ಗ್ರಾಮದ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸಂಕ್ರಾಂತಿಯ ದಿನ…

ಒಳ್ಳೆ ಕಥೆ ಸಿಕ್ರೆ ಶಿವಣ್ಣ-ಪುನಿತ್ ಬೆಳ್ಳಿ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ತಾರಂತೆ

ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಯಾವಾಗ? ಎಂದು ಕೆಲವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿವರಾಜಕುಮಾರ್, ನೂರಕ್ಕೆ ನೂರು ನಾನು ಮತ್ತು ಪುನೀತ್ ರಾಜ್‌ಕುಮಾರ್ ಒಟ್ಟಿಗೆ ಸಿನಿಮಾ ಮಾಡ್ತೀವಿ ಅಂದ್ರು ಶಿವಣ್ಣ..