ಬೆಂಗಳೂರು: ದರ್ಶನ್ ಅವರೊಟ್ಟಿಗೂ ಸಿನಿಮಾ ಮಾಡಿ ಎಂದು ಅಭಿಮಾನಿಯೊಬ್ಬರ ಮನವಿಗೆ ನಟ ಶಿವರಾಜಕುಮಾರ್ ಉತ್ತರಿಸಿದ್ದು ಹೀಗೆ..

ಅಭಿಮಾನಿಗಳ ಬೇಡಿಕೆಗೆ ಒಪ್ಪಿಗೆ ಸೂಚಿಸಿದ ಶಿವರಾಜ್ ಕುಮಾರ್, ದರ್ಶನ್ ಒಬ್ಬ ಒಳ್ಳೆಯ ನಟ, ಅವಕಾಶ ಸಿಕ್ಕರೆ ಅವರೊಟ್ಟಿಗೂ ಸಿನಿಮಾ ಮಾಡ್ತೀನಿ. ಯಾರೊಂದಿಗೂ ಸಿನಿಮಾ ಮಾಡಬಾರದು ಎಂಬುದು ನನ್ನ ನಿಲುವಲ್ಲ ಎಂದರು.

ಓಂ ಸಿನಿಮಾದ 25ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ನಟ ಉಪೇಂದ್ರ ಅವರೊಂದಿಗಿನ ಫೇಸ್ ಬುಕ್ ಲೈವ್ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಶಿವಣ್ಣ ಉತ್ತರಿಸಿದರು.

ಇದೇ ವೇಳೆ ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಯಾವಾಗ? ಎಂದು ಕೆಲವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿವರಾಜಕುಮಾರ್, ನೂರಕ್ಕೆ ನೂರು ನಾನು ಮತ್ತು ಪುನೀತ್ ರಾಜ್‌ಕುಮಾರ್ ಒಟ್ಟಿಗೆ ಸಿನಿಮಾ ಮಾಡ್ತೀವಿ. ಒಳ್ಳೆ ಕಥೆಗಾಗಿ ಕಾಯುತ್ತಿದ್ದೇವೆ. ಕಥೆ ಸಿಕ್ಕ ಕೂಡಲೆ ಒಟ್ಟಿಗೆ ಸಿನಿಮಾ ಮಾಡುತ್ತೇವೆ. ಅದನ್ನು ನಮ್ಮ ಹೋಮ್ ಪ್ರೊಡಕ್ಷನ್ (ವಜ್ರೇಶ್ವರಿ ಕಂಬೈನ್ಸ್) ಮೂಲಕವೇ ಮಾಡುತ್ತೇವೆ ಎಂದರು.

ಸುದೀಪ್ ಅವರೊಟ್ಟಿಗೆ ಮತ್ತೊಂದು ಸಿನಿಮಾ ಮಾಡಿ ಎಂದು ಕೆಲವರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಿವರಾಜ್ ಕುಮಾರ್, ಸುದೀಪ್ ಅವರೊಟ್ಟಿಗೆ ಕೆಲಸ ಮಾಡುವುದು ಖುಷಿಯ ವಿಚಾರ, ಈಗ ಒಂದು ಸಿನಿಮಾ ಅವರೊಟ್ಟಿಗೆ ಮಾಡಿದ್ದೇನೆ. ಅವಕಾಶ ಸಿಕ್ಕರೆ ಮತ್ತೊಂದು ಸಿನಿಮಾ ಮಾಡ್ತೀನಿ ಎಂದರು.

ಓಂ 2 ಮಾಡಿ ಎಂಬ ಒತ್ತಾಯವೂ ಬಂತು ಇದಕ್ಕೂ ಶಿವರಾಜ್ ಕುಮಾರ್ ಧನಾತ್ಮಕವಾಗಿಯೇ ಉತ್ತರಿಸಿ,  ಉಪೇಂದ್ರ ಅವರ ನಿರ್ದೇಶನದಲ್ಲಿ ನಟಿಸಲು ಆಸಕ್ತಿ ಇದೆ, ಖಂಡಿತ ಅವರೊಟ್ಟಿಗೆ ಸಿನಿಮಾ ಮಾಡ್ತೀನಿ ಎಂದರು.

Leave a Reply

Your email address will not be published. Required fields are marked *

You May Also Like

ಮುಂಡರಗಿ ಪುರಸಭೆ ಮುಖ್ಯಾಧಿಕಾರಿ ನಿಮ್ಮ ಓಣಿಯಲ್ಲೂ ಕಸ ಹಾಕಿರಬಹುದು ನೋಡಿ…!

ಮುಂಡರಗಿ: ಯಾವುದಕ್ಕೂ ಒಂಚೂರು ನೀವು ನಿಮ್ಮ ಮನೆಯಿಂದ ಹೊರಗೆ ಬಂದು ನೋಡಿ ಬೀಡಿ. ಯಾಕಂದ್ರೆ ನಿಮ್ಮ…

ಚೆಕ್ ಡ್ಯಾಂ ಕಾಮಗಾರಿ ನಿಲ್ಲಿಸುವಂತೆ ಹೈಕೋರ್ಟ್ ತಡೆ

ವರದಿ: ವಿಠ್ಠಲ ಕೆಳೂತ್ ಮಸ್ಕಿ: ತಾಲೂಕಿನ ದಿಗ್ಗನಾಯಕನಭಾವಿ ಹತ್ತಿರದ ಹಿರೇ ಹಳ್ಳದಲ್ಲಿ ನಿರ್ಮಿಸುತ್ತಿರುವ ಚೆಕ್ ಡ್ಯಾಂ…

ಪ್ರಧಾನಿಯ ಮನ್ ಕಿ ಬಾತ್ ಏನು?

ದೆಹಲಿ: ಇಂದು ಪ್ರದಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ ಮಾಸಿಕ ಸಂಚಿಕೆಯಲ್ಲಿ…

ಗದಗ ಹೆರಿಗೆ ಆಸ್ಪತ್ರೆಗೆ ಕೊರೊನಾ ಭಯ..!:ಗರ್ಭಿಣಿಗೆ ಸೋಕಿನ ಶಂಕೆ!

ಗದಗ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಗದಗ ಜಿಲ್ಲೆ ಜನರನ್ನು ಆತಂಕಕ್ಕೀಡು ಮಾಡಿದೆ.…