ನವದೆಹಲಿ:ಇಂದಿನಿಂದಲೆ ಕೆಲವು ನಿಯಮಗಳನ್ನು ಅಳವಡಿಸಿ ಕೇಂದ್ರ ಸರ್ಕಾರ ನಾಲ್ಕನೇ ಹಂತದ ಲಾಡ್ ಡೌನ್ ಜಾರಿ ಮಾಡಿ ಆದೇಶಿಸಿದೆ. ಮೇ 31ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರದ ಗೃಹ ಇಲಾಖೆ ಬದಲಾವಣೆ ಮಾಡಿದೆ. ದೇಶದೆಲ್ಲೆಡೆ ಅನ್ವಯವಾಗುವಂತೆ ಕೆಲ ನಿಯಮಾವಳಿ ರೂಪಿಸಿದ್ದು, ಈ ಮಾರ್ಗಸೂಚಿಗಳು ಯಾವವು? ಎನ್ನುವುದನ್ನು ಈ ಕೆಳಗೆ ನೀಡಲಾಗಿದೆ.

4ನೇ ಹಂತದ ಲಾಕ್ ಡೌನ್ ಮಾರ್ಗಸೂಚಿಗಳು

 • ಶಾಲೆ, ಕಾಲೇಜು, ವಿದ್ಯಾಸಂಸ್ಥೆಗಳು ತೆರೆಯುವಂತಿಲ್ಲ. ಆದ್ರೆ ಆನ್ಲೈನ್ ಶಿಕ್ಷಣಕ್ಕೆ ಅವಕಾಶ ಮುಂದುವರಿದಿದೆ.
 • ರಾಜ್ಯದೊಳಗೆ ಬಸ್ ಸಂಚಾರಕ್ಕೂ ಅವಕಾಶ ಇದ್ದು, ಬಸ್ ಓಡಿಸಬೇಕಾ ಬೇಡವೇ ಎನ್ನುವುದನ್ನು ಆಯಾ ರಾಜ್ಯಗಳೇ ನಿರ್ಧರಿಸಬೇಕು.
 • ರೈಲು, ವಿಮಾನ ಸಂಚಾರಕ್ಕೆ ಅವಕಾಶ ಇಲ್ಲ. ಆದ್ರೆ, ವೈದ್ಯಕೀಯ ಉದ್ದೇಶಕ್ಕೆ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
 • ಕಾರ್ಮಿಕರು, ವಲಸಿಗರ ಸಂಚಾರ ಈಗಿನಂತೆಯೇ ಅವರವರ ಊರುಗಳಿಗೆ ಕಳುಹಿಸಲು ಅವಕಾಶ ಮುಂದುವರಿಸಲಾಗಿದೆ.
 • ಮದುವೆ ಕಾರ್ಯಕ್ರಮಕ್ಕೆ 50 ಜನರಿಗೆ ಮಾತ್ರ ಅವಕಾಶವಿದೆ. ಅಂತ್ಯಕ್ರಿಯೆಯಲ್ಲಿ 20 ಜನರಿಗಷ್ಟೇ ಭಾಗಿಯಾಗಲು ಅವಕಾಶ ಇದೆ.
 • ಇನ್ನು ಕೆಂಪು, ಕಿತ್ತಳೆ, ಹಸಿರು ವಲಯಗಳನ್ನ ಆಯಾ ರಾಜ್ಯಗಳೇ ನಿರ್ಧರಿಸಬೇಕು. ಈ ಝೋನ್ಗಳಲ್ಲಿ ಕಂಟೇನ್ಮೆಂಟ್ ವಲಯ, ಬಫರ್ ಝೋನ್ಗಳನ್ನ ಜಿಲ್ಲಾಡಳಿತಗಳು ನಿರ್ಧರಿಸಬೇಕು. ಕಂಟೇನ್ಮೆಂಟ್ ಝೋನ್ಗಳಲ್ಲಿ ಈಗಿನಂತೆಯೇ ನಿರ್ಬಂಧ ಮುಂದುವರಿಯಲಿದೆ.
 • 65 ವರ್ಷ ಮೀರಿದವರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಅಗತ್ಯವಿದ್ದರೆ ಮಾತ್ರ ಹೊರಗಡೆ ಬರಬೇಕು. ಎಲ್ಲರೂ ಆರೋಗ್ಯ ಸೇತು ಆಪ್ ಬಳಸಬೇಕು.
 • ಮೆಟ್ರೋ ರೈಲು ಸಂಚಾರ ಇರಲ್ಲ
 • ಹೋಟೆಲ್ಗಳಲ್ಲಿ ಪಾರ್ಸಲ್ಗಷ್ಟೇ ಅವಕಾಶವಿದೆ. ಚಿತ್ರಮಂದಿರ, ಶಾಪಿಂಗ್ ಮಾಲ್ ತೆರೆಯುವಂತಿಲ್ಲ. ಜಿಮ್, ಸ್ವಿಮ್ಮಿಂಗ್ ಪೂಲ್, ಥಿಯೇಟರ್ ಓಪನ್ ಮಾಡುವಂತಿಲ್ಲ. ಬಾರ್, ಆಡಿಟೋರಿಯಂ ಕೂಡ ಮುಚ್ಚಿರಲಿದೆ.
 • ಕ್ರೀಡಾಂಗಣಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ವೀಕ್ಷಕರ ಪ್ರವೇಶಕ್ಕೆ ಅವಕಾಶ ಇಲ್ಲ. ರಾಜಕೀಯ, ಧಾರ್ಮಿಕ ಸೇರಿದಂತೆ ಯಾವುದೇ ರೀತಿಯ ಸಭೆ, ಸಮಾರಂಭಗಳು ನಡೆಸುವಂತಿಲ್ಲ. ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕರ ದರ್ಶನಕ್ಕೂ ಅವಕಾಶ ಇರಲ್ಲ.
 • ಅಂತರ್ ರಾಜ್ಯ ಬಸ್ ಸಂಚಾರಕ್ಕೆ ಅವಕಾಶ ಇದೆ. ಆದ್ರೆ, ಬಸ್ ಸಂಚಾರ ಮಾಡುವ ಎರಡು ರಾಜ್ಯಗಳ ಒಪ್ಪಿಗೆ ಇರಬೇಕು.
 • ಈಗಿರುವ ಎಲ್ಲಾ ಕರೋನಾ ನಿಯಮ ಪಾಲನೆ ಮಾಡಲೇಬೇಕು. ಸಾಮಾಜಿಕ ಅಂತರ ಕಡ್ಡಾಯ, ಮುಖಗವಸು ಧರಿಸಲೇಬೇಕು, ಕಚೇರಿಗಳಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ.
 • ಈಗಿನಂತೆಯೇ ಅಂಗಡಿಗಳು ತೆರದಿರಲಿದ್ದು, ಸಾಮಾಜಿಕ ಅಂತರ ಪಾಲಿಸಬೇಕಿದೆ. ಅಂತಿಮವಾಗಿ ಆದಷ್ಟೂ ವರ್ಕ್ ಫ್ರಂ ಹೋಂಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
 • ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಸಂಚಾರಕ್ಕೆ ಅವಕಾಶವಿದೆ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದೆ.
 • ಅಗತ್ಯ ವಸ್ತುಗಳ ಸರಬರಾಜಿಗೆ ಅವಕಾಶ ಕಲ್ಪಿಸಲಾಗಿದೆ. ಕಂಟೇನ್ಮೆಂಟ್ ಝೋನ್ಗಳಿಂದ ಜನ ಹೊರಗಡೆ ಬರುವಂತಿಲ್ಲ, ಹೊರಗಿನಿಂದ ಕಂಟೇನ್ಮೆಂಟ್ ಝೋನ್ಗಳಿಗೆ ಜನ ಹೋಗುವಂತಿಲ್ಲ. ಆದ್ರೆ, ವೈದ್ಯಕೀಯ ಉದ್ದೇಶಕ್ಕೆ ಸಂಚರಿಸಬಹುದು ಹಾಗೂ ಅಗತ್ಯ ವಸ್ತು ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ.
 • ಇನ್ನು, ವೈದ್ಯಕೀಯ ಸಿಬ್ಬಂದಿ, ಆಂಬ್ಯುಲೆನ್ಸ್ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲದೇ ರಾಜ್ಯದೊಳಗೆ ಹಾಗೂ ಅಂತರ್ ರಾಜ್ಯದಲ್ಲೂ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
 • ಇದೇ ವೇಳೆ, ಸರಕು ಸಾಗಣೆ ವಾಹನಗಳೂ ಅಂತರ್ ರಾಜ್ಯದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಮದ್ಯ ಮಾರಾಟಕ್ಕೆ ಈಗಿನಂತೆಯೇ ಅವಕಾಶ ಇದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ತಂಬಾಕು ಸೇವನೆ ನಿಷೇಧ ಮುಂದುವರಿದಿದೆ.
 • ಇನ್ನೂ ಕೆಲವು ನಿಯಮಗಳನ್ನ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗಿದೆ.

ಕೇಂದ್ರ ಗೃಹ ಇಲಾಖೆ ಹೊರಡಿಸರುವ ಮಾರ್ಗಸೂಚಿ ಪ್ರಕಾರ 12 ರಾಜ್ಯಗಳ 30 ಪಾಲಿಕೆಗಳ ವ್ಯಾಪ್ತಿಯಲ್ಲಿ ಶೇಕಡ 80ರಷ್ಟು ಕರೋನಾ ಪಾಸಿಟಿವ್ ಪ್ರಕರಣಗಳಿದ್ದು, ಈ 30 ಪಾಲಿಕೆಗಳ ವ್ಯಾಪ್ತಿಯಲ್ಲಿ ಯಾವುದೇ ನಿಯಮ ಸಡಿಲಿಕೆ ಇಲ್ಲ. ಈ 30 ಪಾಲಿಕೆಗಳ ಪಟ್ಟಿಯಲ್ಲಿ ಕರ್ನಾಟಕದ ಯಾವ ಜಿಲ್ಲೆಯೂ ಸೇರಿಲ್ಲ ಎನ್ನುವುದು ಕೊಂಚ ಸಮಾಧಾನ.

Leave a Reply

Your email address will not be published. Required fields are marked *

You May Also Like

ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಪುತ್ರನ ಮದುವೆ : ಕೋವಿಡ್ ನಿಯಮಕ್ಕೆ ಡೋಂಟ್ ಕೇರ್..!!

ಹರಪನಹಳ್ಳಿ: ಕೊರೊನಾ ಹಿನ್ನೆಲೆ ಲಾಕ್ ಡೌನ್ ಸಡಿಲಿಸಿದರೂ ಸಾಕಷ್ಟು ಕಟ್ಟುನಿಟ್ಟಿನ ನಿಯಮ ಸರ್ಕಾರ ಸೂಚಿಸಿದೆ. ಆದರೆ…

ವಿಪ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಆಸ್ತಿ ಎಷ್ಟು? : ಮಾಡಿದ ಸಾಲ ಎಷ್ಟು..?

ಬೆಂಗಳೂರು: ವಿಧಾನ ಪರಿಷತ್‍ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ರೂ. 1,224…

ಋತುಚಕ್ರದ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ ಮಾದಕ ನಟಿ!

ಬೆಂಗಳೂರು: ಆಗ ನನಗೆ 14 ವರ್ಷ ವಯಸ್ಸು. ಈ ವೇಳೆ ನಮ್ಮ ಮನೆಯಲ್ಲಿ ದೇವರ ಪೂಜೆ ನಡೆಯುತ್ತಿತ್ತು. ಆ ಪೂಜೆಯಲ್ಲಿ ನಾನು ಪಾಲ್ಗೊಂಡಿದ್ದೆ. ಆದರೆ ಆಗಲೇ ನನಗೆ ಪೀರಿಯಡ್ಸ್ ಆಯಿತು. ಆಗ ಅಮ್ಮ ನನ್ನ ಜೊತೆಯಲ್ಲಿ ಇರಲಿಲ್ಲ. ಆದ್ದರಿಂದ ನಾನು ನನ್ನ ಪಕ್ಕದಲ್ಲಿದ್ದ ಚಿಕ್ಕಮ್ಮನಿಗೆ ಈ ವಿಚಾರವನ್ನು ತಿಳಿಸಿದೆ. ನಾನು ಆ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಕೂಡ ಧರಿಸಿರಲಿಲ್ಲ ಎಂದು ಅನೇಕ ವರ್ಷಗಳ ಹಿಂದೆ ನಡೆದಿದ್ದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಜುಲೈ 24ಕ್ಕೆ ಕೋರ್ಟಿಗೆ ಅದ್ವಾನಿ ಹೇಳಿಕೆ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತಂತೆ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್ ಜುಲೈ 24ರಂದು ಲಾಲ್ ಕೃಷ್ಣ ಅದ್ವಾನಿ ಅವರ ಹೇಳಿಕೆ ಪಡೆಯಲಿದೆ.