ಆಲಮಟ್ಟಿ: ಕೃಷ್ಣಾ ನದಿ ತೀರದ ಸಂಭವನೀಯ ಪ್ರವಾಹಕ್ಕೊಳಗಾಗುವ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಆ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳೆಲ್ಲ ಸನ್ನದ್ಧರಾಗಿ ಕೆಲಸ ನಿರ್ವಹಿಸಬೇಕು ಎಂಬ ಸೂಚನೆ ನೀಡಲಾಗಿದೆ. ಆಲಮಟ್ಟಿ ಜಲಾಶಯ ಹಾಗೂ ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆಯಿಂದ ಉಂಟಾಗುವ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಕುಮಾರ ಸೂಚಿಸಿದರು. ಆಲಮಟ್ಟಿಯ ಎಂ.ಡಿ. ಕಚೇರಿಯ ಸಭಾಂಗಣದಲ್ಲಿ ಬುಧವಾರ, ಕೆಬಿಜೆಎನ್ ಎಲ್ ವಿವಿಧ ವಲಯಗಳ ಮುಖ್ಯ ಎಂಜಿನಿಯರ್ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಸೂಚನೆ ನೀಡಿದರು.
ನೀರು ಬಿಡುವ ಮಾಹಿತಿಯನ್ನು ಸ್ಥಳೀಯ ಆಡಳಿತ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಮಾಹಿತಿ ಹಂಚಿಕೊಂಡು ಪ್ರವಾಹ ನಿಯಂತ್ರಣಕ್ಕೆ ಅವರೊಂದಿಗೆ ಕೈಜೋಡಿಸಬೇಕು, ಮಹಾರಾಷ್ಟ್ರ ರಾಜ್ಯದ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಪ್ರವಾಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.ಯಾವುದೇ ಕಾರಣಕ್ಕೂ ಪ್ರವಾಹದ ಸಮಯದಲ್ಲಿ ಅಣೆಕಟ್ಟು ವಿಭಾಗದ ಅಧಿಕಾರಿಗಳಿಗೆ, ನೌಕರರ ವರ್ಗದವರಿಗೆ ರಜೆ ನೀಡಬಾರದು. ರಜಾ ದಿನದಂದೂ ಕಾರ್ಯನಿರ್ವಹಿಸಬೇಕು, ಕಾರ್ಯಕ್ಷೇತ್ರ ಬಿಟ್ಟು ತೆರಳಬಾರದು ಎಂದು ಎಂಡಿ ಸೂಚಿಸಿದರು.
ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ, ನಾರಾಯಣಪುರ ವಲಯದ ಮುಖ್ಯ ಎಂಜಿನಿಯರ್ ಅಶೋಕ ವಾಸನದ, ಬಾಗಲಕೋಟೆ ಬಿಟಿಡಿಎ ಮುಖ್ಯ ಎಂಜಿನಿಯರ್ ಎಂ. ಸ್ವಾಮಿ, ರಾಂಪೂರ ವಲಯದ ಮುಖ್ಯ ಎಂಜಿನಿಯರ್ ಎಸ್.ಡಿ. ನಾಯ್ಕರ, ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜು, ರಾಠೋಡ ಇನ್ನೀತರ ಅಧಿಕಾರಿಗಳು ಇದ್ದರು.
ಆಲಮಟ್ಟಿಯ ಎಂಡಿ ಕಚೇರಿಯಲ್ಲಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಂದ ಉಂಟಾಗುವ ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ಕೆಬಿಜೆಎನ್ ಎಲ್ ಎಂ.ಡಿ. ಬಿ. ಶಿವಕುಮಾರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಜರುಗಿತು

Leave a Reply

Your email address will not be published. Required fields are marked *

You May Also Like

ಶಿಕ್ಷಕರಿಗೂ ಬೇಕು ವರ್ಕ್ ಪ್ರಮ್ ಹೋಮ್

ಬೆಂಗಳೂರು: ಈಗಾಗಲೇ ದಿನದಿಂದ ದಿನಕ್ಕೆ ದೇಶದಲ್ಲಷ್ಟೆ ಅಲ್ಲದೇ ರಾಜ್ಯದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.…

ಬಸ್ ಬ್ರೇಕ್ ಫೇಲ್ : ಸಮಯ ಪ್ರಜ್ಞೆ ಮೆರೆದ ಚಾಲಕ

ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಹತ್ತಿರ ಘಟನೆ ನಡೆದಿದೆ.

ಧಾರವಾಡ ಬಳಿ ಕಾರು ಪಲ್ಟಿ : ಐಎಎಸ್ ಅಧಿಕಾರಿ ಸೇರಿ ಐವರಿಗೆ ಗಾಯ

ಉತ್ತರಪ್ರಭಧಾರವಾಡ: ಹಿರಿಯ ಐಎಎಸ್ ಅಧಿಕಾರಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾದ ಘಟನೆ ತಾಲೂಕಿನ ಯರಿಕೊಪ್ಪ ಬಳಿ ಹುಬ್ಬಳ್ಳಿ-ಧಾರವಾಡ…

ಟೀಕಾಕಾರರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ: ಕೆ.ಸುಧಾಕರ್

ನಮ್ಮ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದವರಿಗೆ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ. ಎಂಟು ತಿಂಗಳ ರಾಜಕೀಯ ಗ್ರಹಣದ ಬಳಿಕ ಸಚಿವರಾದ ನಮ್ಮನ್ನು ಪ್ರತಿಪಕ್ಷದ ಕೆಲವರು ಲೇವಡಿ ಮಾಡಿದ್ದರು. ಇವರು ಏನು ಮಾಡುತ್ತಾರೋ ನಾವು ನೋಡುತ್ತೇವೆ ಎಂದು ಟೀಕೆಗಳ ಸುರಿಮಳೆ ಗೈದಿದ್ದರು. ಈಗ ಅವರಿಗೆಲ್ಲ ಉತ್ತರ ಸಿಕ್ಕಿರಬೇಕು ಎಂದು ಭಾವಿಸಿದ್ದೇನೆ ಎಂದರು.