ಚೆನ್ನೈ : ಅಪ್ರಾಪ್ತ ಬಾಲಕಿಗೆ 66 ವರ್ಷದ ವೃದ್ಧ ಲವ್ ಲೆಟರ್ ಬರೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಲವ್ ಲೆಟರ್ ಬರೆದ ವೃದ್ಧನನ್ನು 66 ವರ್ಷದ ಮೊಹಮ್ಮದ್ ಬಹೀರ್ ಬಾಷಾ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಈ ವೃದ್ಧ 16 ವರ್ಷದ ಹುಡುಗಿಗೆ ಪ್ರೇಮ ಪತ್ರ ಬರೆದು ಕೊಟ್ಟಿದ್ದಾನೆ. ಆರೋಪಿ ವೃದ್ಧ ನೀಡಿದ ಪತ್ರದಲ್ಲಿ, ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ. ನಿನಗೆ ಓಕೆ ನಾ ಎಂದು ಬರೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ವೃದ್ಧ ನೀಡಿದ ಪತ್ರವನ್ನು ನೋಡಿ ಹುಡುಗಿ ಗಾಬರಿಯಾಗಿ ತನ್ನ ತಾಯಿಗೆ ನೀಡಿದ್ದಾಳೆ. ನಂತರ ತಾಯಿ ತನ್ನ ಪತಿಯನ್ನು ಕರೆದುಕೊಂಡು ಆರೋಪಿ ಬಾಷಾ ಮನೆಗೆ ಹೋಗಿದ್ದಾರೆ. ಅಲ್ಲಿ ಆರೋಪಿಗೆ ಬೈದು ಮತ್ತೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಆರೋಪಿ ಕುಟುಂಬದದವರು ಹುಡುಗಿಯ ಪೋಷಕರ ಬಳಿ ವೃದ್ಧನ ವರ್ತನೆಗೆ ಕ್ಷಮೆ ಕೇಳಿದ್ದಾರೆ.
ಆದರೆ ಆರೋಪಿ ಬಾಷಾ ಮಾತ್ರ ಮತ್ತೆ ಹುಡುಗಿಯನ್ನು ಪ್ರೀತಿಸುವಂತೆ ಒತ್ತಾಯ ಮಾಡಿದ್ದಾನೆ. ಅಲ್ಲದೇ ಆಕೆಗೆ ಬೆದರಿಕೆ ಕೂಡ ಹಾಕಿದ್ದಾನೆ. ಇದರಿಂದ ಭಯಗೊಂಡ ಹುಡುಗಿ ಮನೆಯಿಂದ ಹೊರಬರಲು ಹೆದರುತ್ತಿದ್ದಳು. ಆಗ ಆಕೆಯ ಪೋಷಕರು ರಾಮನಾಥಪುರಂ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

Leave a Reply

Your email address will not be published.

You May Also Like

ಕೋರೊನಾ ನಿರ್ವಹಣೆ ಸರಿಯಾಗಿದೆ, ಆತಂಕ ಬೇಡ: ಸಚಿವ ಸಿ.ಸಿ. ಪಾಟೀಲ್

ಕೋರೊನಾ ನಿವ೯ಹಣೆ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಕಾ೯ರ ಹಾಗೂ ಜಿಲ್ಲಾಡಳಿತ ಸಮಥ೯ವಾಗಿವೆ. ಯಾವುದೆ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಜೂ. 8ರಿಂದ ತೆರೆಯಲಿವೆ ದೇವಸ್ಥಾನಗಳು – ಈ ವಾರವೇ ಮಾರ್ಗಸೂಚಿ ಪ್ರಕಟ!

ಜೂ. 8ರಿಂದ ದೇವಾಲಯಗಳು ಓಪನ್ ಆಗಲಿವೆ. ಹಲವು ಮಾರ್ಗಸೂಚಿಗಳನ್ವಯ ದೇವಸ್ಥಾನಗಳು, ಚರ್ಚ್, ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನ ತೆರೆಯಲು ಅವಕಾಶ ನೀಡಲಾಗಿದೆ.

ನಿಜಾಮುದ್ಧೀನ್ ಪ್ರಕರಣ – 34 ರಾಷ್ಟ್ರಗಳ 376 ಜನರ ಮೇಲೆ ಪ್ರಕರಣ!

ನವದೆಹಲಿ: ನಗರದ ನಿಜಾಮುದ್ಧೀನ್ ಮರ್ಕಜ್ ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ 34 ರಾಷ್ಟ್ರಗಳ 376 ವಿದೇಶಿ…