ಗುಲಾಬಚಂದ ಜಾಧವ
ಆಲಮಟ್ಟಿ:
ಮೊಗ್ಗಿನ ಎಳೆ ಮನಗಳಲ್ಲಿ ಸಸ್ಯ ಸಂಭ್ರಮ ಮೊಳಗಿತ್ತು. ಅಮಿತೋತ್ಸಾಹದ ಅಲೆಯಲ್ಲಿ ಹಸಿರೀಕರಣದ ಕಾಯಕಕ್ಕೆ ಅವರೆಲ್ಲಾ ಅಣಿಯಾಗಿದ್ದರು. ಅಲ್ಲಿ ಸಸ್ಯ ಪ್ರೇಮಲೋಕದ ಆರಾಧನೆ ಪೂಜ್ಯ ಭಾವದಿಂದ ಸಾಗಿತ್ತು. ಸಸಿ-ಶಿಶು-ಚಿಣ್ಣರ-ಗುರುಮಾತೆಯರ ಹಸಿರು ಮೇಳ ಮಿಂದಿತ್ತು. ಹಸಿಹಸಿರಿನ ಹೊನಲು ನೋಟ ಸಖತ್ ಹರುಷದಿಂದ ಕಂಗೊಳಿಸುತ್ತಿತ್ತು..!


ಅರ್ಥಪೂರ್ಣ, ವಿಶಿಷ್ಟ ರೀತಿಯಲ್ಲಿ ಚಿನ್ಮಯಿ ಚಿಣ್ಣರು ಪರಿಸರ ಪ್ರಜ್ಞೆ ಮೆರೆದು ಗಮನ ಸೆಳೆದಿರುವ ದೃಶ್ಯ ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಆವರಣದಲ್ಲಿ ಕಂಡಿತು.
ಪುಟಾಣಿ ಮಕ್ಕಳೊಂದಿಗೆ ಆಚರಿಸಿದ ಪರಿಸರ ದಿನಾಚರಣೆ ವಿಶೇಷ ರೂಪ ಪಡೆಯಿತು. ಹಸಿರು ಚಿಗುರೆಲೆಗಳ ಸಸಿಗಳನ್ನು ಮಕ್ಕಳು ತಮ್ಮ ಪುಟ್ಟ ಕೈಯಲ್ಲಿ ಹಿಡಿದು ಭೂವೋಡಲಿನಲ್ಲಿ ನೆಟ್ಟು ಖುಷಿ ಪಟ್ಟರು. ಸಸಿಗಳಿಗೆ ನೆಲದ ಸ್ಪರ್ಶ ನೀಡಿ ಪರಿಸರ ಪ್ರಜ್ಞೆ ಪ್ರೀತಿಯಿಂದ ಮೆರೆದರು. ಪರಿಸರ ಉನ್ಮಾದದಲ್ಲಿ ತೇಲಿದರು.
ಶಾಲೆಯ ಎಲ್ಲ ಗುರುಮಾತೆಯರು ಹಸಿರುಡುಗೆಯಲ್ಲಿ ಮಿನುಗಿ ಪುಟ್ಟ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಿದರು.
ಹೆಚ್ಚು ಗಿಡಗಳನ್ನು ನೆಡುವುದು, ನೀರಿನ ಇತಿಮಿತಿ ಬಳಕೆ, ನೈಸರ್ಗಿಕ ಸಂಪನ್ಮೂಲದ ರಕ್ಷಣೆ, ಶುಚಿತ್ವ ಕಾಪಾಡುವಿಕೆ, ಸ್ವಚ್ಚತೆ,ಆರೋಗ್ಯ ಕುರಿತಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಪರಿಸರ ಮಹತ್ವ ಸಾರಲಾಯಿತು.
ಮುಖ್ಯ ಗುರುಮಾತೆ ತನುಜಾ ಪೂಜಾರಿ, ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಿಗೆ ಪರಿಸರದ ಮಹತ್ವ, ಕಲ್ಪನೆ ಮೂಡಿಸಿದರೆ ಮುಂದಿನ ದಿನಮಾನಗಳಲ್ಲಿ ಫಲ ಕಾಣಬಹುದು. ಇಂದಿನ ಯುವಪೀಳಿಗೆಯೇ ಭವಿಷ್ಯತ್ತಿನ ಆಶಾಕಿರಣದ ಏಳ್ಗೆ. ಪರಿಸರ ರಕ್ಷಣೆಯೊಂದು ಸಾಮಾಜಿಕ ಜವಾಬ್ದಾರಿ. ಸ್ವಸ್ಥ ಪರಿಸರವೇ ನಮ್ಮೆಲ್ಲರ ಜೀವನಾಡಿ. ಆ ಕಾರಣ ಮಕ್ಕಳ ಮನದಲ್ಲಿ ಗಟ್ಟಿಯಾಗಿ ಉಳಿಯುವಂತೆ ಅರಿವು ಮೂಡಿಸಲು ಸಣ್ಣದೊಂದು ಪ್ರಯತ್ನ ನಡೆಸಿ ಉತ್ತೇಜಿಸಲಾಗಿದೆ. ವಿದ್ಯಾರ್ಥಿ ದೆಸೆಯಿಂದ ಪರಿಸರ ಕಳಕಳಿ ಅತ್ಯಗತ್ಯ ಎಂದರು.
ಶಿಕ್ಷಕಿ ಸಿದ್ದಮ್ಮ ಅಂಗಡಿ, ಆಧುನೀಕರಣದ ಮಾಯಾಜಾಲದಲ್ಲಿಂದು ಪರಿಸರ ನಿರ್ಲಕ್ಷಿಸಿಸಲಾಗುತ್ತಿದೆ.‌ ಗಿಡಮರ ನಾಶದಿಂದ ಮನುಕುಲ ಸೇರಿದಂತೆ ಪ್ರಾಣಿ, ಪಕ್ಷಿಗಳು ಸಹ ಅವನತಿಯತ್ ಸಾಗಿವೆ. ನಮ್ಮ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ತೋರದಿದ್ದರೆ ಮುಂದೆ ಜೀವ ವೈವಿಧ್ಯತೆಗೆ ಮಾರಕವಾಗಲಿವೆ ಎಂದರು.
ಇನ್ನೋರ್ವ ಶಿಕ್ಷಕಿ ಕವಿತಾ ಮರಡಿ, ಹಸಿರು ಪರಿಸರವೇ ಮನುಕುಲದ ಆಸ್ತಿ.‌ ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸಿದರೆ ಶುದ್ಧ ಆಮ್ಲಜನಕ ಯಥೇಚ್ಛವಾಗಿ ಪಡೆಯಬಹುದು. ಚಿಕ್ಕವರಿದ್ದಾಗಲೇ ಮಕ್ಕಳು ಪರಿಸರ ಪ್ರೇಮಿಗಳಾಗಬೇಕು. ಪ್ರಕೃತಿ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಸರ ಆಮಲೊಂದಿಗೆ ಸಸಿಗಳನ್ನು ನೆಡಲು ಮುಂದಾಗಬೇಕೆಂದರು. ಗುರುಮಾತೆಯರಾದ ಕಾಂಚನಾ ಕುಂದರಗಿ, ಸರೋಜಾ ಕಬ್ಬೂರ,ಶಾಹೀನ ಬಾಗಲಕೋಟ ಇತರರಿದ್ದರು.

Leave a Reply

Your email address will not be published. Required fields are marked *

You May Also Like

ಜೆಡಿಎಸ್ ನೆಲದಲ್ಲಿ ಸೋತರೂ ಅಧಿಕಾರಕ್ಕೆ ಏರುವ ಪ್ರಯತ್ನದಲ್ಲಿ ಬಿಜೆಪಿ!?

ಹಾಸನ : ಜೆಡಿಎಸ್ ಕೋಟೆಯಲ್ಲಿ ತಂತ್ರದಿಂದ ವಶಪಡಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆಯೇ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ. ಮೀಸಲಾತಿ ಹೆಸರಿನಲ್ಲಿ ಇಂತಹದೊಂದು ಕೃತ್ಯ ನಡೆಯುತ್ತಿದೆ ಎಂಬ ಆರೋಪ ಸದ್ಯ ಬಿಜೆಪಿಯ ವಿರುದ್ಧ ಕೇಳಿ ಬರುತ್ತಿದೆ.

ಗದಗ ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 88…

ಪಾಸ್ ಬುಕ್ ಮೇಲಿದ್ದ ಕನ್ನಡ ಮಾಯವಾಗಿದ್ದೇಕೆ?

ಬೆಂಗಳೂರು: ಇಲ್ಲಿನ ಚಾಮರಾಜ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.ಈ ಹಿಂದೆ…

ಸಲೂನ್ ಪಾರ್ಲರ್ ಗಳಿಗೆ ಹೋಗುವ ಮುನ್ನ ಈ ಸುಚನೆಗಳನ್ನೊಮ್ಮೆ ಓದಿ..

ಬೆಂಗಳೂರು: ಸರ್ಕಾರದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ 58 ದಿನ ಬಂದ್ ಆಗಿದ್ದ ನಗರದ ಸಲೂನ್, ಪಾರ್ಲರ್’ಗಳು…