ಬೆಂಗಳೂರು: ಇಲ್ಲಿನ ಚಾಮರಾಜ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಹಿಂದೆ ಬ್ಯಾಂಕಿನ ಪಾಸ್ ಬುಕ್ ಮುಖಪುಟದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಕನ್ನಡದಲ್ಲಿ ಮುದ್ರಿಸಿತ್ತು. ಆದರೆ ಇತ್ತೀಚೆಗೆ ಕನ್ನಡದಲ್ಲಿದ್ದ ಈ ಬರಹವನ್ನು ತೆಗೆದುಹಾಕಿದೆ. ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಉಳಿಸಿದೆ.
ಪ್ರಾದೇಶಿಕ ಭಾಷೆಯೊಂದಿಗೆ ಹಿಂದಿ ಕಲಿಸಬೇಕೆಂದು ಆದೇಶ ಇದ್ದಾಗಲೂ ಎಸ್.ಬಿ‌.ಐ ಪ್ರಾದೇಶಿಕ ಭಾಷೆಯನ್ನು ಮೂಲೆಗುಂಪು ಮಾಡಿದೆ. ಎಂದು ಕನ್ನಡ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ.
ಬ್ಯಾಂಕ್ ಗಳು ಕನ್ನಡದಲ್ಲೇ ವ್ಯವಹರಿಸಬೇಕು ಇಲ್ಲದಿದ್ದರೆ ಬ್ಯಾಂಕ್ ಎದುರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಂತರಿಕ ಕಚ್ಚಾಟದಿಂದ ಬಿಜೆಪಿ ಸರ್ಕಾರ ಪತನವಾದರೆ ನಾವು ಜವಾಬ್ದಾರರಲ್ಲ-ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದ ಯಾವ ಶಾಸಕರು ರಾಜಿನಾಮೆ ನೀಡುವುದಿಲ್ಲ. ತಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟವೇ ಬಿಜೆಪಿಗೆ ಮುಳುವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಸಾಲದ ಭಾದೆ: ರೈತ ಆತ್ಮಹತ್ಯೆ

ಉತ್ತರಪ್ರಭ ಸುದ್ದಿ ಶಿರಹಟ್ಟಿ: ಸಾಲದ ಹೊರೆ ತಾಳಲಾರದೆ ತಾಲೂಕಿನ ಮಾಚೇನಹಳ್ಳಿ ಗ್ರಾಮದ ರೈತನೊಬ್ಬ ನೇಣಿಗೆ ಶರಣಾದ…

ಭಾರತೀಯ ಡಿಎಲ್ ಯಾವ-ಯಾವ ದೇಶದಲ್ಲಿ ಬಳಸಬಹುದು?

ಭಾರತದ ಡ್ರೈವಿಂಗ್ ಲೈಸನ್ಸ್(ಡಿಎಲ್) ಬಳಸಿ ವಿಶ್ವದ ಕೆಲ ಅದ್ಭುತ ದೇಶಗಳಲ್ಲಿಯೂ ಕೂಡ ಡ್ರೈವಿಂಗ್ ಮಾಡಬಹುದಂತೆ.

ಗದಗ ಜಿಲ್ಲೆಯಲ್ಲಿ ಹಳದಿ ಕತ್ತುಪಟ್ಟಿಯ ತೋಳದ ಹಾವು ಪತ್ತೆ

ತೋಳದ ಹಾವು ಕೆಲವು ಪ್ರದೇಶಗಳಲ್ಲಿ ಸಾಮಾನ್ಯ, ಆದರೆ ಹಳದಿ ಕತ್ತು ಪಟ್ಟಿಯ ತೋಳದ ಹಾವು ಗದಗ್ ನ ರೋಣದಂತಹ ಬಿಸಿಲೂರಿನಲ್ಲಿ ಪತ್ತೆಯಾಗಿದ್ದು, ಸಂಶೋಧಕರಲ್ಲಿ ಅಚ್ಚರಿ ಮೂಡಿಸಿದೆ.