ಉತ್ತರಪ್ರಭ
ಆಲಮಟ್ಟಿ:
ಅಸಂಖ್ಯ ಭಕ್ತರ ಆರಾಧ್ಯ ದೈವ ಗದುಗಿನ ತೋಂಟದ ಲಿಂಗೈಕ್ಯ ಡಾ. ಸಿದ್ದಲಿಂಗ ಶ್ರೀಗಳ ಜನ್ಮದಿನವನ್ನು ಸಕಾ೯ರ ವತಿಯಿಂದ ಸದ್ಭಾವನಾ ದಿನವನ್ನಾಗಿ ಆಚರಿಸುವುದಾಗಿ ಮುಖ್ಯ ಮಂತ್ರಿಗಳು ಘೋಷಿಸಿರುವುದಕ್ಕೆ ದಿಂಗಾಲೇಶ್ವರ ಶ್ರೀಗಳು ವಿರೋಧ ವ್ಯಕ್ತಪಡಿಸಿ ಮುಖ್ಯ ಮಂತ್ರಿಗಳ ಕುರಿತು ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿರುವುದಕ್ಕೆ ಸಚಿವ ಸಿ.ಸಿ.ಪಾಟೀಲರು ತೀವ್ರವಾಗಿ ಹೇಳಿಕೆಯೊಂದರಲ್ಲಿ ಖಂಡಿಸಿದ್ದಾರೆ.

ಮೊನ್ನೆ ಗದುಗಿನಲ್ಲಿ ಜರುಗಿದ ಲಿಂ, ಡಾ. ಸಿದ್ಧಲಿಂಗ ಶ್ರೀಗಳ ಐಕ್ಯ ಮಂಟಪ ಲೋಕಾರ್ಪಣೆಗೊಳಿಸಿದ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳು ಜನತೆಯ ಕಲ್ಯಾಣಕ್ಕಾಗಿ ಜೀವ ಸವಿದ ತೋಂಟದ ಲಿಂ. ಸಿದ್ಧಲಿಂಗ ಸ್ವಾಮೀಜಿಯವರ ಜನ್ಮದಿನವನ್ನು ಸಕಾ೯ರದಿಂದ ಭಾವೈಕ್ಯ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಘೋಷಿಸಿದ್ದರು. ಅದನ್ನು ಸಹಿಸಕೊಳ್ಳದ ದಿಂಗಾಲೇಶ್ವರ ಶ್ರೀ ಅಸೂಯೆಯಿಂದ ತಮ್ಮ ಘನತೆಗೆ ಚ್ಯುತಿ ಬರುವಂತೆ ಮಾತನಾಡಿದ್ದು ದುರದೃಷ್ಟಕರ ಎಂದಿದ್ದಾರೆ.
ಬಾಡಗಂಡಿಯಲ್ಲಿ ದಿಂಗಾಲೇಶ್ವರ ಶ್ರೀ ಪತ್ರಿಕಾಗೋಷ್ಠಿಯೊಂದರಲ್ಲಿ ಅಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ. ಅದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಸಚಿವರು ಖಂಡಿಸಿದ್ದಾರೆ.
ಮುಖ್ಯ ಮಂತ್ರಿಗಳಿಗೆ ಶಿರಹಟ್ಟಿಯ ಶ್ರೀ ಫಕೀರೇಶ್ವರ ಮಠದ ಪರಂಪರೆ, ಭಾವೈಕ್ಯತೆಯ ಮಠ ಎಂಬುದನ್ನು ಮರೆತು ಯಾವುದೋ ಒತ್ತಡ,ಆಮಿಷಕ್ಕೆ ಒಳಗಾಗಿ ತಮ್ಮ ಸ್ವಾರ್ಥಕ್ಕಾಗಿ ಈ ರೀತಿ ಘೋಷಣೆ ಮಾಡಿದ್ದಾರೆಂದು ಹೇಳಿರುವುದು ಖಂಡನೀಯ ಎಂದಿದ್ದಾರೆ.
ಗದುಗಿನ ತೋಂಟದ ಶ್ರೀಮಠದ ಪರಂಪರೆ, ಇತಿಹಾಸ ಅಮೋಘವಾಗಿದೆ.ಅದು ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ಕಂಡಿದೆ. ಧಾಮಿ೯ಕ,ಶೈಕ್ಷಣಿಕ, ಆಧ್ಯಾತ್ಮಿಕ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಶ್ರೀಮಠದ ಕೊಡುಗೆ ಅನನ್ಯ. ಇದು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ. ನಾಡಿನ, ರಾಷ್ಟ್ರದ ಜನತೆಗೆ ತೋಂಟದಾರ್ಯ ಶ್ರೀಮಠದ ಬಗ್ಗೆ ಪೂಜ್ಯನೀಯ ಭಾವವಿದೆ. ಎಲ್ಲರಿಗೂ ಇದರ ಅರಿವುವಿದೆ. ಸಮಾಜಮುಖಿ ಪರ ಕೊಡುಗೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವುದು ಈ ಭಾಗದ ಜನತೆಗೆ ಬಹಳಷ್ಟು ಚೆನ್ನಾಗಿ ಗೊತ್ತಿದೆ. ಅದರಂತೆ ಶಿರಹಟ್ಟಿಯ ಶ್ರೀ ಫಕೀರೇಶ್ವರ ಮಠದ ಹಿರಿಯ ಶ್ರೀಗಳು ವಿವಿಧ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ, ಭಾವೈಕ್ಯತೆಗೆ ಸಂಬಂಧಿಸಿದಂತೆ ಗೈದಿರುವ ಕಾರ್ಯಗಳ ಬಗ್ಗೆಯೂ ಮಾನ್ಯ ಮುಖ್ಯ ಮಂತ್ರಿಗಳಾದಿಯಾಗಿ ನಮಗೆಲ್ಲರಿಗೂ ಅತ್ಯಂತ ಅಪಾರ ಗೌರವವಿದೆ. ಆದರೆ ದಿಂಗಾಲೇಶ್ವರ ಶ್ರೀಗಳು ಸುದ್ದಿಗೋಷ್ಟಿಯೊಂದರಲ್ಲಿ ಆಡಿರುವ ಮಾತುಗಳು, ಅಭಿವ್ಯಕ್ತಪಡಿಸಿದ ವಿಚಾರಗಳು, ಬಳಸಿದ ಪದಗಳು, ತೋಂಟದಾರ್ಯ ಮಠದ ಬಗ್ಗೆ ಅವರಿಗಿರುವ ಅಸಹನೆಯನ್ನು ಎತ್ತಿ ತೋರಿಸುವಂತಿದೆ ಎಂದು ಸಿ.ಸಿ.ಪಾಟೀಲರು ಹೇಳಿದ್ದಾರೆ.
ಒಬ್ಬ ಮಠದ ಶ್ರೀಗಳಾಗಿ ಮತ್ತೊಂದು ಮಠದ ಶ್ರೀಗಳು ಮತ್ತು ಪರಂಪರೆಯ ಬಗೆಗೆ ನುಡಿಯುವಾಗ ಲಘವಾಗಿ ಮಾತನಾಡಿರುವುದು ಖಂಡಿತ ಅವರ ಘನತೆ,ಗೌರವಕ್ಕೆ ಕಪ್ಪು ಚುಕ್ಕೆ, ಇದು ಶೋಭೆ ತರುವುದಿಲ್ಲ ಎಂದಿದ್ದಾರೆ.
ಮುಖ್ಯ ಮಂತ್ರಿಗಳ ಬಗ್ಗೆ ಬಳಸಿರುವ ಭಾಷೆ ಸಹ ತೀವ್ರ ಆಕ್ಷೇಪಾರ್ಹವಾಗಿದೆ. ಅಷ್ಟಕ್ಕೂ ದಿಂಗಾಲೇಶ್ವರ ಶ್ರೀಗಳ ಇತಿಹಾಸ ಹಾಗು ಹಿನ್ನೆಲೆ ಏನು ? ಎಂಥದ್ದು ? ಏನೆಂಬುದು ಎಲ್ಲರಿಗೂ ತಿಳಿದಿದೆ. ಮುಖ್ಯ ಮಂತ್ರಿಗಳಾಗಲಿ, ನಮ್ಮ ಸಕಾ೯ರವಾಗಲಿ ಒಂದು ನಿಧಾ೯ರವನ್ನು ತೆಗೆದುಕೊಳ್ಳುವಾಗ ನಿರ್ವಹಣೆ ದಿಂಗಾಲೇಶ್ವರ ಶ್ರೀಗಳನ್ನೆ ಕೇಳಿ ತೀಮಾ೯ನ ತೆಗೆದುಕೊಳ್ಳಬೇಕಾಗಿಲ್ಲ ಎಂದು ಸಚಿವ ಸಿ.ಸಿ ಪಾಟೀಲರು ಸೂಚ್ಯವಾಗಿ ನುಡಿದಿದ್ದಾರೆ.
ದಿಂಗಾಲೇಶ್ವರ ಶ್ರೀ ಪತ್ರಿಕಾಗೋಷ್ಠಿ ಕರೆದು ಮುಖ್ಯ ಮಂತ್ರಿಗಳ ಕುರಿತು ಮತ್ತು ಅವರು ತೆಗೆದುಕೊಂಡಿರುವ ತೀಮಾ೯ನ ಬಗ್ಗೆ ಅಡಿರುವ ಮಾತುಗಳು, ಬಳಸಿರುವ ಭಾಷೆಯು ಒಬ್ಬ ಮಠದ ಶ್ರೀಗಳಿಗೆ ತಕ್ಕುದಲ್ಲ.ಅದು ಸಲ್ಲದು. ಎಂದಿಗೂ ಅವರಿಗೆ ಶೋಭೆ ತರದು ಎಂದು ಖಂಡಿಸಿರುವ ಸಚಿವ ಸಿ.ಸಿ.ಪಾಟೀಲರು ದಿಂಗಾಲೇಶ್ವರ ಶ್ರೀ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕೊರೊನಾ ಪಾಸಿಟಿವ್

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ವಿಷಯದ ಕುರಿತು ಸ್ವತಃ ಎಚ್.ಡಿ.ದೇವೇಗೌಡ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಪ್ರತ್ಯೇಕವಾಗಿರುವುದಾಗಿ ಹೇಳಿದ್ದಾರೆ. ಜೊತೆಗೆ, ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಕೊರೊನಾ ಪರೀಕ್ಷೆ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ, ಪಕ್ಷದ ಕಾರ್ಯಕರ್ತರು ಆತಂಕಪಡಬೇಡಿ ಎಂದು ಕೂಡ ಕೋರಿದ್ದಾರೆ.

ಲಕ್ಷ್ಮೆಶ್ವರದಲ್ಲಿ ಮಣ್ಣು ಮುಕ್ಕುತ್ತಿದ್ದರೂ ಅಧಿಕಾರಿಗಳು ಮೌನ!

ಅನ್ನ ಭಾಗ್ಯ ಯೋಜನೆಯ ಅಕ್ಕಿ, ಮರಳು ಲೂಟಿ ಮಾಡುವುದು ಆಗಾಗ ಸಾಮಾನ್ಯವಾಗಿದೆ. ಆದರೆ, ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಮಣ್ಣು ಕೂಡ ಸದ್ದಿಲ್ಲದೇ ಲೂಟಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾ ಜೆಡಿಎಸ್ ನಿಂದ ಬಂಡೆಪ್ಪ ಕಾಶಂಪೂರ 57ನೇ ಹುಟ್ಟುಹಬ್ಬ ಆಚರಣೆ

ಬಂಡೆಪ್ಪ ಕಾಶಂಪೂರ ಅವರು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಕೃಷಿ ಸಚಿವರಾಗಿ ಅನೇಕ ರೈತಪರ, ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಕುಮಾರಸ್ವಾಮಿ ಮಂತ್ರಿಮಂಡಲದಲ್ಲಿ ಉತ್ಸಾಹಿ ಯುವ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು ಶ್ಲಾಘನೀಯ

ಆರೋಗ್ಯ ಇಲಾಖೆಗೆ ನೇಮಕಗೊಂಡ ವೈದ್ಯರನ್ನು ಸ್ವಾಗತ ಕೋರಿದ ಸಚಿವ ಸುಧಾಕರ್

ಬೆಂಗಳೂರು: ಹೊಸದಾಗಿ ನೇಮಕಗೊಂಡಿರುವ 715 ಹಿರಿಯ ತಜ್ಞರು ಮತ್ತು 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಬುಧವಾರ ಆರೋಗ್ಯ ಸಚಿವ ಕೆ.ಸುಧಾಕರ್ ಸ್ವಾಗತ ಕೋರಿದ್ದಾರೆ.