ಕೊಡುಗು: ಕಾಫಿ ನಾಡು ಕೊಡುಗಿನಲ್ಲೀಗ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಲಾಕ್ ಡೌನ್ ಪರಿಣಾಮದಿಂದ ಕಾಫಿ ಉದ್ಯಮದ ವಹಿವಾಟು ಸ್ಥಗಿತವಾಗಿದ್ದು, ಸಾವಿರಾರು ಬೆಳೆಗಾರರು ಹಾಗೂ ಕಾಫಿ ಉದ್ಯಮವನ್ನೆ ನಂಬಿಕೊಂಡ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಇಲ್ಲಿನ ಕುಶಾಲನಗರದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ 35ಕ್ಕೂ ಹೆಚ್ಚು ಕಾಫಿ ಉದ್ಯಮಕ್ಕೆ ಸಂಬಮಧಿಸಿದ ಕೈಗಾರಿಕೆಗಳಿವೆ. ರಾಜ್ಯದಲ್ಲಿ ಹೆಚ್ಚು ಕಾಫಿ ಉತ್ಪಾದನೆ ಆಗುವುದೇ ಕೊಡುಗಿನಲ್ಲಿ. ಆದರೆ ಇದಿಗ ಲಾಕ್ ಡೌನ್ ಹಿನ್ನೆಲೆ ಸಾಗಣೆ ಮತ್ತು ರಫ್ತು ಅಸಾಧ್ಯವಾಗಿದೆ. ಸರ್ಕಾರ ಈಗಾಗಲೇ ಸಗಟು ಸಾಗಣೆಗೆ ವಿನಾಯಿತಿ ನೀಡಿದರೂ ಕೂಡ ಈ ಕಾಫಿ ಉದ್ಯಮಕ್ಕೆ ಅದರದ್ದೆ ಆದ ಕೆಲವು ಮಿತಿಗಳಿರುವುದರಿಂದಾಗಿ ರಫ್ತು ಸಾಧ್ಯವಾಗುತ್ತಿಲ್ಲ.

ಕಾಫಿಗೆ ಸಂಬಂಧಿಸಿದ ಉದ್ಯಮಗಳಿಂದಲೇ ಜಿಲ್ಲೆಯಲ್ಲಿ ವಾರ್ಷಿಕ 4 ಸಾವಿರ ಕೋಟಿ ವಹಿವಾಟು ನಡೆಯುತ್ತದೆ. ಆದರೆ ಬಹುತೇಕ ಕೈಗಾರಿಕೆಗಳು ಬಂದ್ ಆಗಿರುವುದರಿಂದ ಟಷ್ಟು ಹಾನಿಯಾಗಲಿದೆ ಎನ್ನುವ ಲೆಕ್ಕಾಚಾರವೇ ಊಹೆ ನಿಲುಕದ್ದಾಗಿದೆ. ಒಂದೆಡೆ ಕೈಗಾರಿಕೆ ಬಂದ್ ಆಗಿರುವದರಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾದರೆ ಮತ್ತೊಂದೆಡೆ ಕೊಡಗು ಜಿಲ್ಲೆಯ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರಿಗೆ ಕೆಲಸಕ್ಕೆ ಬರುವುದು ಅಸಾಧ್ಯವಾಗಿದೆ.

2500 ಕಾರ್ಮಿಕರು

ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪ ಕೂಡ್ಲೂರಿನಲ್ಲಿ ಕೈಗಾರಿಕೆಯಲ್ಲಿ ಕಾಫಿ ಉದ್ಯಮವನ್ನೆ ನಂಬಿಕೊಂಡು 2500 ಕಾರ್ಮಿಕರಿದ್ದಾರೆ. ಆದರೆ ಇದೀಗ ಉದ್ಯಮ ಸ್ಥಗಿತವಾಗಿರುವುದರಿಂದ ಕಾರ್ಮಿಕ ಕುಟುಂಬಳ ಸ್ಥಿತಿ ಹೇಳತೀರದಾಗಿದೆ. ಇದರ ಜೊತೆಗೆ ಕಾಫಿ ಉದ್ಯಮಕ್ಕೂ ಕೂಡ ಅಪಾರಪ್ರಮಾಣದ ಹಾನಿಯಾಗಿದೆ. ಇಂತಹ ಅದೆಷ್ಟೋ ಉದ್ಯಮಗಳಿಗೆ ಭಾರಿ ಪೆಟ್ಟು ಬಿದ್ದಿದೆ. ಇದರಿಂದಾಗಿ ಆರ್ಥಿಕ ಸ್ಥಿತಿ ಕುಸಿತ ಕಾಣುತ್ತಲೇ ಸಾಗಿದೆ. ದುಡಿಯವ ವರ್ಗದ ಪರಿಸ್ಥಿತಿಯಂತೂ ಹೇಳತೀರದಂತಾಗಿದೆ.

1 comment
  1. ಕೊರೋನಾ ಎಲ್ಲವನ್ನೂ ಕಟ್ಟಿ ಹಾಕುತ್ತಿದೆ…. ಸರ್ಕಾರ ಈ ಕುರಿತು ಶೀಘ್ರವಾಗಿ ಕೆಲವು Rapid Action ಗಳನ್ನು ಕಂಡುಕೊಳ್ಳಬೇಕಿದೆ.

Leave a Reply

Your email address will not be published. Required fields are marked *

You May Also Like

ಬೇರೆ ರಾಜ್ಯ, ದೇಶಗಳಿಂದ ಆಗಮಿಸಿದ ಕನ್ನಡಿಗರು!

ಆಪರೇಷನ್ ವಂದೇ ಭಾರತ್ ಮೆಗಾ ಏರ್‌ಲಿಫ್ಟ್ ಮೂಲಕ ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಕನ್ನಡಿಗರು ಮರಳುತ್ತಿದ್ದು, ನಗರಕ್ಕೆ ಇಂದು 326 ಜನ ಕನ್ನಡಿಗರು ಆಗಮಿಸಿದ್ದಾರೆ.

ಮುಳಗುಂದ ಅರ್ಬನ್ ಬ್ಯಾಂಕ ಚುನಾವಣೆ 7 ನಾಮಪತ್ರ ಸಲ್ಲಿಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕನ ನಿರ್ದೇಶಕ ಮಂಡಳಿಯ 2 ಸ್ಥಾನಗಳಿಗೆ…

ಕೆಂಪುರಾಜನಿಗೆ ಡಿಮ್ಯಾಂಡಪ್ಪೂ..ಡಿಮ್ಯಾಂಡು! ಬೆಳೆ ಇತ್ತು ಬೆಲೆ ಇರಲಿಲ್ಲ, ಈಗ ಬೆಳೆ ಇಲ್ಲ ಬೆಲೆ ಇದೆ…!

ಸುರೇಶ್ ಎಸ್.ಲಮಾಣಿ ಲಕ್ಷ್ಮೇಶ್ವರ: ಅತಿವೃಷ್ಟಿ ಮತ್ತು ಅನಾವೃಷ್ಟಿ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಜೀವನದುದ್ದಕ್ಕೂ ಕಂಬದ ಪೆಟ್ಟು…

ಇನ್ನೂ ತಪ್ಪುತ್ತಿಲ್ಲ ವಲಸಿಗರ ಪರದಾಟ..! ಅಂತರ್ ಜಿಲ್ಲಾ, ರಾಜ್ಯ ತಲುಪಲು ಹರಸಾಹಸ!

ಲಾಕ್‌ಡೌನ್‌ನಿಂದಾಗಿ ದುಡಿಮೆ ಅರಸಿ ಹೋದ ಕಾರ್ಸಿಮಿಕರು ವಿವಿದೆಡೆ ಸಿಲುಕಿದ್ದಾರೆ. ಹೀಗಾಗಿ ಸಿಲುಕಿ ಹಾಕಿಕೊಂಡಿರುವ ಜನರು ಮನೆಗೆ ತೆರಳಬೇಕೆಂಬ ಅಭಿಲಾಷೆ ಹೊಂದಿದ್ದಾರೆ. ಆದರೆ, ಅವರ ಗೋಳಾಟ ಮಾತ್ರ ಇನ್ನೂ ತಪ್ಪುತ್ತಿಲ್ಲ.