ಉತ್ತರಪ್ರಭ

ನರೆಗಲ್ಲ: ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರ ಪ್ರಜ್ಞಾವಂತರನ್ನು ಒಳಗೊಂಡ ಪವಿತ್ರ ಕ್ಷೇತ್ರವಾಗಿದ್ದು ಈ ಬಾರಿಯು ಹೊರಟ್ಟಿಯವರ ದಾಖಲೆ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜ ಧಾರವಾಡ ಹೇಳಿದರು.ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ,ಬಸವರಾಜ ಪಥ.ಪುಸ್ತಕ ಬಿಡುಗಡೆಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಬಸವರಾಜ ಹೊರಟ್ಟಿಯವರು ಪಕ್ಷಾತೀತ, ಜ್ಯಾತ್ಯಾತೀತ ನಾಯಕರಾಗಿ ಸುದೀರ್ಘ 42 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಕರ ನೇಮಕ.ಹಾಗೂ ಅನುದಾನ ರಹಿತ ಖಾಸಗಿ ಶಾಲಾ ಕಾಲೇಜಗಳಿಗೆ ಅನುದಾನ.ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಿದ್ದಾರೆ.ಇಂಥ ಒಬ್ಬ ಹುಟ್ಟು ಹೋರಾಟಗಾರನ ವಿರುದ್ಧ ಮಾತನಾಡುವವರ ವಿರುದ್ಧ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಖಂಡಿಸುತ್ತದೆ ಪರೋಕ್ಷವಾಗಿ ಮೋಹನ ಲಿಂಬಿಕಾಯಿಯವರಿಗೆ ಎಚ್ಚರಿಕೆ ನೀಡಿದರು.

ಮೋಹನ ಲಿಂಬಿಕಾಯಿಯವರು ಹತಾಶರಾಗಿ ಮಾತನಾಡುದನ್ನು ಬಿಡಬೇಕು ತಮ್ಮ ಪಕ್ಷದ ಆಂತರಿಕ ವಿಚಾರಗಳನ್ನು ಹಿರಿಯ ಮುಖಂಡರ ಜೊತೆಗೆ ಚರ್ಚಿಸಬೇಕು ಅದನ್ನ ಬಿಟ್ಟು ಅಸಂವಿಧಾನಿಕವಾಗಿ ಮಾತನಾಡಿದರೆ ನಾವು ಸಹಿಸುವುದಿಲ್ಲ. ಹೊರಟ್ಟಿಯವರು ಪಕ್ಷ ಸೇರ್ಪಡೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದು ಅವರನ್ನು ಬಿಜೆಪಿಗೆ ಬರಲು ಗ್ರೀನ್ ಸಿಗ್ನಲ್ ಸಿಕ್ಕಿದೆ ಮುಂದೆ ಬರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಅವರ ಸ್ವರ್ದೆ ಖಚಿತ ಎಂದರು.

ದಾಖಲೆ ಗೆಲುವಿನತ್ತ ಚಿತ್ತ:
ಉತ್ತರ ಕರ್ನಾಟಕ ಅದರಲ್ಲೂ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ 1980ರಿಂದ ಹೊರಟ್ಟಿ ಅವರೇ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಈಗಾಗಲೇ ಒಂದೇ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದಿದ್ದಾರೆ. ಈ ಬಾರಿಯು ಗೆದ್ದು ದಾಖಲೆಯ 8ನೇ ಬಾರಿ ಗೆಲುವಿನ ಜತೆಗೆ ಇತಿಹಾಸ ಸೃಷ್ಟಿಯಾಗಲಿದೆ.

– ಬಸವರಾಜ ಧಾರವಾಡ

ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ಸಂಘದ ಅಧ್ಯಕ್ಷ ಎಸ್,ಎಂ,ಅಂಗಡಿ. ಶಿಕ್ಷಕ ಅರುಣ ಕುಲಕರ್ಣಿ ಇದ್ದರು.

Leave a Reply

Your email address will not be published. Required fields are marked *

You May Also Like

ಗದಗ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮುತ್ತುರಾಜ್ ಶಿರಹಟ್ಟಿ ಹಾಗೂ ಮಹಮ್ಮದ್ ಹುಜೇರ್

ಉತ್ತರಪ್ರಭಗದಗ: ಇಂದು ಜಿಲ್ಲೆಯಾದ್ಯಂತ ಶಟಲ ಬ್ಯಾಡ್ಮಿಂಟನ್ ಸ್ಪರ್ಧೆಯು ಕೆ.ಎಚ್.ಪಾಟೀಲ್ ಒಳಾಂಗಣ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿತ್ತು ಶಟಲ್ ಬ್ಯಾಡ್ಮಿಂಟನ…

ಗದಗನಲ್ಲಿ ಬೈಕ್ ಕದ್ದ ಆರೋಪಿ ಬಂಧನ

ಗದಗ: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಗದಗ ಶಹರ ಪೊಲೀಸರು ಶನಿವಾರ ಬಂಧಿಸಿದ್ದಾರೆ

ಖಾಸಗಿ ಶಾಲಾ ಶಿಕ್ಷಕ ಆತ್ಮಹತ್ಯಗೆ ಯತ್ನ

ತಾಲೂಕಿನ ಡಿ ಪೌಲ್ ಅಕ್ಯಾಡಮಿ ಶಾಲೆಯ ಶಿಕ್ಷಕನರ‍್ವ ಕೆಲಸದಿಂದ ವಜಾಗೊಳಿಸಿದ ಕಾರಣ ಮನನೊಂದು ಆತ್ಮ ಹತ್ಯೆಕ್ಕೆ ಯತ್ನಿಸಿದ ಘಟನೆ ನಡೆದಿದೆ.