ಉತ್ತರಪ್ರಭ ಸುದ್ದಿ
ಗದಗ: ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗದಗ ಮತ್ತು ಮುಂಡರಗಿ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 2022-23 ನೇ ಸಾಲಿಗೆ 6 ನೇ ತರಗತಿ ಒಟ್ಟು 170 ವಿದ್ಯಾರ್ಥಿಗಳ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ 75% ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಹಾಗೂ 25% ರಷ್ಟು ಇತರೇ ವರ್ಗದವರಿಗೆ ವಿತರಿಸಲಾಗುವುದು. ಅಂಗವಿಕಲ ವಿದ್ಯಾರ್ಥಿಗಳು, ವಿಶೇಷ ಗುಂಪಿಗೆ ಸೇರಿದ ಅಂದರೆ ಅನಾಥ ಮಕ್ಕಳು, ವಿಧವೆಯರ ಮಕ್ಕಳು, ಪೌರ ಕಾರ್ಮಿಕರ ಮಕ್ಕಳು ಇತ್ಯಾದಿಗಳಿಗೆ 3% ರಷ್ಟು ಆಸನಗಳನ್ನು ಕಾಯ್ದಿರಿಸಲಾಗಿದೆ.


6ನೇ ತರಗತಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು 5 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷ ಮೀರಿರಬಾರದು, ಅರ್ಜಿಗಳನ್ನು ದಿ: 23-04-2022 ರೊಳಗಾಗಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣಇಲಾಖೆ, ಗದಗ ದೂರವಾಣಿ ಸಂಖ್ಯೆ 08372-297494 ಸಂಪರ್ಕಿಸಬಹುದಾಗಿದೆ.

ಜಾಹಿರಾತು
Leave a Reply

Your email address will not be published. Required fields are marked *

You May Also Like

ನೌಕರರ ವಲಯದಲ್ಲಿ ನಿರಾಸೆ ಕಾಮೋ೯ಡ ಮೂಡಿಸಿದ ಬಜೆಟ್-ಚಂದ್ರಶೇಖರ ನುಗ್ಲಿ

ಆಲಮಟ್ಟಿ : ಮುಖ್ಯ ಮಂತ್ರಿಗಳು ಇಂದು ಮಂಡಿಸಿದ ಬಜೆಟ್ ರಾಜ್ಯದ ನೌಕರರಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ…

ತೋಂಟದ ಶ್ರೀ, ಹಡೇ೯ಕರ, ಹಳಕಟ್ಟಿ ಜಗದ ಯುಗ ಪುರುಷರು- ಪಟ್ಟಣಶೆಟ್ಟರ

ವರದಿ: ಗುಲಾಬಚಂದ ಜಾಧವಆಲಮಟ್ಟಿ : ಶಾಂತ ಚಿತ್ತತೆ,ಬದ್ದತೆ ಖ್ಯಾತಿಯ ಕನ್ನಡದ ಕುಲದೇವರಾದ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳು,ಕರುನಾಡಿನ…

ಗದಗ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 283 ನೇ ಜಯಂತಿಯ ಆಚರಣೆ

ಗದಗ:PPG SC/ST ವಸತಿ ನಿಲಯ ಗದಗದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ…

ಅರ್ಜಿ ಆಹ್ವಾನ:ಅಲ್ಪಸಂಖ್ಯಾತರ ಮೌಲಾನಾ ಆಝಾದ ಮಾದರಿ ಶಾಲೆ

ಉತ್ತರಪ್ರಭ ಸುದ್ದಿಗದಗ: ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗದಗ, ಮುಂಡರಗಿ, ಶಿರಹಟ್ಟಿ, ಲಕ್ಷೆö್ಮÃಶ್ವರ, ನರಗುಂದ…