ಉತ್ತರಪ್ರಭ ಸುದ್ದಿ

ನರೇಗಲ್ಲ:ಪುರುಷನೊಂದಿಗೆ ಎಲ್ಲ ರಂಗಗಳಲ್ಲಿಯೂ ಸಾಧನೆಗೈಯುತ್ತಿರುವ ಮಹಿಳೆ ಎಂದಿಗೂ ಅಬಲೆಯಲ್ಲ, ಆಕೆ ಸಬಲೆ ಎಂದು ಶ್ರೀ ಮತಿ ಸಂಯುಕ್ತಾ ಕೆ.ಬಂಡಿ ಅಧ್ಯಕ್ಷರು ಅಕ್ಕನ ಬಳಗ ಗಜೇಂದ್ರಗಡ ಹೇಳಿದರು.

ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆಯ ಬಯಲಿನಲ್ಲಿ ಸಂಜೆ ನಡೆದ ಪಟ್ಟಣದ ಸಮಸ್ತ ಮಹಿಳಾ ಬಳಗದ ವತಿಯಿಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಮಹಿಳೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತಳಾಗಿದ್ದಳು. ಆದರೆ ಈಗ ಅವಳು ಎಲ್ಲ ರಂಗಗಳಲ್ಲಿಯೂ ತನ್ನ ಸಾಧನೆಯ ಛಾಪನ್ನು ಒತ್ತಿದ್ದಾಳೆ. ಸಾಹಿತ್ಯ, ಸಂಗೀತ, ಕಲೆ, ಉದ್ಯೋಗ ಹೀಗೆ ಅನೇಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾಳೆ

ಸಂಯುಕ್ತಾ ಕೆ ಬಂಡಿ

ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಡಾ:ಶ್ರೀ ಮತಿ ಸಪ್ನಾ ಕೆ.ಕಾಳೆ ಶಾಂತಿ, ಸಹನೆ, ಸಂಯಮದ ಪ್ರತಿರೂಪ ಹೆಣ್ಣು. ಅವಳಿಂದಲೆ ಈ ಜಗತ್ತಿಗೆ ಶಾಂತಿ. ದೀಪ ತನ್ನನ್ನು ತಾನು ಸುಟ್ಟುಕೊಂಡು ಇತರರಿಗೆ ಬೆಳಕು ನೀಡುವಂತೆ ಮಹಿಳೆ ತನ್ನ ಸಮರ್ಪಣೆಯ ಭಾವದೊಂದಿಗೆ ಈ ಜಗತ್ತನ್ನು ಬೆಳಕಾಗಿದ್ದಾಳೆ ಎಂದರು.

ಮಹಿಳೆ ಅಬಲೇಯಲ್ಲ ಸಬಲೇ – ಸಂಯುಕ್ತಾ ಕೆ ಬಂಡಿ

ಉಪನ್ಯಾಸಕಿ ಶ್ರೀ ಮತಿ ವೇದಾ ಕುಲಕರ್ಣಿ ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆ ಇಲ್ಲದ ಕ್ಷೇತ್ರವನ್ನು ಊಹಿಸಿಕೊಳ್ಳುವುದೆ ದುಸ್ತರವಾಗಿದೆ. ಆಟೋರಿಕ್ಷಾದಿಂದ ಅಂತರಿಕ್ಷದವರೆಗೆ ಮಹಿಳೆ ತನ್ನ ಸಾಧನೆಯ ದಾಪುಗಾಲನ್ನಿರಿಸಿದ್ದಾಳೆ. ಕೇವಲ ವರ್ಷದಲ್ಲಿ ಒಂದು ದಿನ ಈ ಆಚರಣೆ ಮಾಡಿ ಸುಮ್ಮನಿರುವುದರ ಬದಲು, ಮನೆಯಿಂದಲೆ ಮಹಿಳಾ ಸಮಾನತೆಗಾಗಿ ಹೋರಾಡಬೇಕಿದೆ. ಮಹಿಳಾ ದಿನಾಚರಣೆಯ ಆಶಯಗಳು ಕೇವಲ ಸುಶಿಕ್ಷಿತ ವರ್ಗದ ಮಹಿಳೆಯರಿಗೆ ತಲುಪಿದರೆ ಸಾಲದು. ಸಮಾಜದ ಕಟ್ಟಕಡೆಯ ಮಹಿಳೆಗೂ ಈ ಸಂದೇಶ ತಲುಪಬೇಕು. ಅವರೂ ಸಹ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಗಬೇಕೆಂದರು.

ನಂತರ ಸರಿಗಮಪ ಎಂಟರ್ ಟೈನ್ಮಟ್ ಬೆಂಗಳೂರು ತಂಡದವರಿಂದ ಮನರಂಜನಾ ಕಾರ್ಯಕ್ರಮ.ಹಾಗೂ ಕಾಮಿಡಿ ಕಿಲಾಡಿಗಳಿಂದ ಕಾಮಿಡಿ ಕಾರ್ಯಕ್ರಮ ಜರುಗಿದವು.

ಈ ಸಂಧರ್ಭದಲ್ಲಿ ಅನುಸೂಯಾ ಪಾಟೀಲ. ಸಾವಿತ್ರಿ ಶಿವುನಗೌಡ.ಗೌರಮ್ಮ ಆನಂದಪ್ಪನವರ. ಪಟ್ಟಣ ಪಂಚಾಯತಿ ಅಧ್ಯಕ್ಷೆ ವಿಜಯಲಕ್ಷ್ಮಿ ನಿಂಗಪ್ಪ ಚಲವಾದಿ ಮಲ್ಲವ್ವ ಕಳಕೊಣ್ಣವರ.ಸುಜಾತಾ ಸಂಗನಾಳಮಠ.ಸಾವಿತ್ರಿ ಗಂಗರಗೊಂಡ. ಸುಮಂಗಲಾ ಕೊಟಗಿ.ಚೆನ್ನಮ್ಮ ಕಡಗದ.ಅಕ್ಹಮಹಾದೇವಿ ಪಾಟೀಲ. ಬಸಮ್ಮ ಕಣವಿ.ಅನುಸೂಯಾ ಸೋಮಗೊಂಡ. ಸುನೀತಾ ವಂಕಲಕುಂಟಿ. ವಿದ್ಯಾಗೌರಿ ಹೆಗಡೆ.ಅರ್ಚನಾ ಕುಲಕರ್ಣಿ.ಸೀಮಾ ಕೊಂಡಿ.ಅಕ್ಕಮ್ಮ ಮಣ್ಣೋಡ್ಡರ.ಜ್ಯೋತಿ ಪಾಯಪ್ಪಗೌಡ್ರ. ಸುಮಿತ್ರಾ ಕಮಲಾಪುರ.ವಿಶಾಲಾಕ್ಷಿ ಹೊಸಮನಿ.

Leave a Reply

Your email address will not be published. Required fields are marked *

You May Also Like

ನೇತ್ರದಾನ: ಸಾವಿನಲ್ಲಿ ಸಾರ್ಥಕತೆ ಮೆರೆದ ಚಂದ್ರಗೌಡ ಪಾಟೀಲ

ಉತ್ತರಪ್ರಭಗದಗ: ನಗರದ ಖ್ಯಾತ ವಕೀಲರಾದ ಬಿ ಸಿ ಪಾಟೀಲರವರ ತಂದೆಯವರಾದ ಚಂದ್ರಗೌಡ ಪಾಟೀಲ (87)ಇಂದು ವಯೋಸಹಜ…

ಗ್ರಾಪಂ ಮಾಜಿ ಅಧ್ಯಕ್ಷನ ದರ್ಪ!: ಮರಳು ಟಿಪ್ಪರ್ ನಿಧಾನವಾಗಿ ಓಡಿಸಿ ಅಂದಿದ್ದಕ್ಕೆ ಹಲ್ಲೆ ಮಾಡಿದ ಆರೋಪ

ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ ಎನ್ನುತ್ತಾರಲ್ಲ, ಆ ರೀತಿಯ ಕಥೆಯಿದು. ಇಲ್ಲೊಬ್ಬ ವ್ಯಕ್ತಿ ಊರಿನ ಮುಖಂಡ. ಪ್ರತಿ ದಿನ ನಾಲ್ಕಾರು ಜನಕ್ಕೆ ಬುದ್ಧಿ ಹೇಳುತ್ತಿದ್ದ. ಸದ್ಯ ಈ ವ್ಯಕ್ತಿಯೇ ಕುಟುಂಬವೊಂದರ ಮೇಲೆ ದರ್ಪ ಮೆರೆದಿದ್ದಾನೆ.

24ರಂದು ನಗರ ಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ

ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಜ. 24 ರಂದು ತೀರ್ಮಾನಿಸಲಾಗಿದೆ. ಈ…

ಗದಗ ಜಿ.ಪಂ. ಪ್ರಭಾರ ಅಧ್ಯಕ್ಷರಾಗಿ ಮಲ್ಲವ್ವ ಬಿಚ್ಚೂರ

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರು, ಇಂದು ಗದಗ ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರ ಅಧಿಕಾರ ಸ್ವೀಕರಿಸಿದರು.