ಉತ್ತರಪ್ರಭ
ಗದಗ: ನಗರದ ಖ್ಯಾತ ವಕೀಲರಾದ ಬಿ ಸಿ ಪಾಟೀಲರವರ ತಂದೆಯವರಾದ ಚಂದ್ರಗೌಡ ಪಾಟೀಲ (87)ಇಂದು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದು. ಸಾವಿನ ನಂತರವು ಬೆರೆಯವರಿಗೆ ಬೆಳಕಾಗಲಿ ಎಂದು ಅವರ ಕುಟುಂಬಸ್ಥರು ಅವರ ಕಣ್ಣುಗಳನ್ನು ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡು ಹುಬ್ಬಳ್ಳಿಯ ಜೋಷಿ ಕಣ್ಣಿನ ಆಸ್ಪತ್ರೆ ಮಾಹಿತಿ ತಿಳಿಸಿ ನಂತರ ಹುಬ್ಬಳ್ಳಿಯ ಜೋಷಿ ಆಸ್ಪತ್ರೆಯ ಸಿಬ್ಬಂದಿಯವರು ಬಂದು ಕಣ್ಣುಗಳನ್ನು ಕಾನೂನಿನ ಪ್ರಕಾರ ದಾನ ತೆಗೆದುಕೊಂಡಿದ್ದಾರೆ. ಚಂದ್ರ ಗೌಡ ಪಾಟೀಲರು ಮೊದಲಿನಿಂದಲೂ ಸಾಮಾಜಿಕ ಕಳಕಳಿ ಉಳ್ಳ ವರು. ನೇತ್ರ ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆಯನ್ನು ಮೆರೆದಿದ್ದಾರೆ. ಅವರಿಗೆ ಒರ್ವ ಪುತ್ರ, ನಾಲ್ಕು ಜನ ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂದುಬಳಗವನ್ನು ಬಿಟ್ಟು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ದಿನಾಂಕ: 11.04.2022 ಸಮಯ: ಮುಂಜಾನೆ ೧೧ಘಂಟೆಗೆ ವೀರಶೈವ ಲಿಂಗಾಯಿತ ರುದ್ರಭೂಮಿಯಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ : ಶೇಂಗಾ ಬಣವಿಗೆ ಬೆಂಕಿ ಲಕ್ಷಾಂತರ ಹಾನಿ

ಲಕ್ಷ್ಮೇಶ್ವರ: ಶೇಂಗಾ ಬಣವಿಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಹಾನಿಗೊಳಗಾದ ರೈತ ಕಂಗಾಲಾಗುವಂತಾಗಿದೆ.

ಗದಗ-ಬೆಟಗೇರಿ ನಗರಸಭೆ ಚುನಾವಣೆ: ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ

ಉತ್ತರಪ್ರಭಗದಗ: ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 35 ವಾರ್ಡಗಳ ಪೈಕಿ 26 ವಾರ್ಡಗಳಿಗೆ  ಅಭ್ಯರ್ಥಿಗಳ…

ಹೊಳೆ ಆಲೂರು: ಮಲಪ್ರಭ ನದಿ ದಡದಲ್ಲಿ ಮೊಸಳೆ ಶವ ಪತ್ತೆ

ಇಲ್ಲಿನ ಮಲಪ್ರಭ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆ ಹೊಳೆಯಾಲೂರು ಗ್ರಾಮದಲ್ಲಿ ಮೊಸಳೆ ಪತ್ತೆಯಾಗಿತ್ತು. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು. ಇನ್ನು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿದ್ದರು. ನದಿ ದಡಕ್ಕೆ ಹೋಗದಂತೆ ಗ್ರಾಮ ಪಂಚಾಯತಿ ವತಿಯಿಂದ ಡಂಗುರ ಸಾರಲಾಗಿತ್ತು. ಆದರೆ ಇಂದು ಅದೇ ಸ್ಥಳದಲ್ಲಿ ಮೊಸಳೆಯ ಮೃತದೇಹ ಪತ್ತೆಯಾಗಿದ್ದು, ಬುಧುವಾರ ಇಲ್ಲಿ ಕಾಣಿಸಿಕೊಂಡ ಮೊಸಳೆ ಸಾವನ್ನಪ್ಪಿದಾಗಿರಬಹುದು ಎನ್ನಲಾಗಿದೆ.

ಮೂರ್ತಿ ತೆರವಿಗೆ ಖಂಡನೆ: ರಾಯಣ್ಣ ಅಭಿಮಾನಿ ಬಳಗದಿಂದ ಮನವಿ

ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವುಗೊಳಿಸದ್ದನ್ನು ಖಂಡಿಸಿ ತಾಲೂಕು ಕುರುಬರ ಸಂಘ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.