ಗದಗ: ಶ್ರೀ ವೆಂಕಟೇಶ್ವರ ಪ್ರೌಡ್ ಶಾಲೆ ಬೇಳಧಡಿ ಯಲ್ಲಿ ಸನ್ 1995-1996 ನೇ ಸಾಲಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮವು ದಿನಾಂಕ 20/3/2022 ರ ರವಿವಾರದಂದು ನಡೆಯಿತು. ಕಾರ್ಯ್ರಮದಲ್ಲಿ 1995-96 ನೆಯ ಸಾಲಿನ ಸುಮಾರು 40 ವಿಧ್ಯಾರ್ಥಿಗಳು ಭಾಗವಹಿಸಿದ್ದರು. ವಿಧ್ಯಾರ್ಥಿಗಳು ಶಾಲೆಯಲ್ಲಿ ಪಡೆದ ಶಿಕ್ಷಣ ಮತ್ತು ಪ್ರಸ್ತುತ ವಿವಿಧ ರಂಗದಲ್ಲಿ ಸಲ್ಲಿಸುತ್ತಿರುವ ಸೇವೆಯ ಕುರಿತು ತಮ್ಮ ಅನುಭವ ಹಂಚಿಕೊಂಡರು. ಸುಮಾರು 22 ವರ್ಷಗಳ ನಂತರ ಪ್ರತಿಯೊಬ್ಬರೂ ಬೇಟಿ ಯಾಗಿ ತಮ್ಮ ಅನುಭವ ಹಾಗೂ ಶಾಲಾ ದಿನಗಳ ನೆನಪನ್ನು ನೆನೆದು ಪರಸ್ಪರ ಸಂತೋಷ ಹಂಚಿಕೊಂಡರು. ಅತಿಥಿಗಳ ಹಾಗೂ ಶಾಲಾ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಮ್ಮಿಲನದಿಂದ ಕುಡಿದ್ದ ವೆದಿಕೆಯು ಅಷ್ಟೇ ಸಂತೋಷ್ ಹಾಗೂ ಸಡಗರದಿಂದ ಕೂಡಿತ್ತು.


ಶ್ರೀ ಉಮೇಶ್ ತಿಮ್ಮನಗೌಡರ, ಶ್ರಿ F.D ಚಾಂದಾಖನ, ಶ್ರಿ B.H ಅಬ್ಬಿಗೇರಿ, ಶ್ರಿ S.D ಹೊಸಳ್ಳಿ, ಶ್ರೀ ಶಂಕರಪ್ಪ ಭಾವಿಮನಿ ಗುರುಗಳಿಗೆ ಗೌರವ ಪೂರ್ವಕ ಗುರುಗಳಿಗೆ ಗುರು ವಂದನೆ ಸಲ್ಲಿಸುವ ಮೂಲಕ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ದಿವಂಗಿತ ರಾಗಿರುವ ಶಾಲೆಯ ನಿವೃತ ಮುಖ್ಯ ಪದ್ಯನಿಯರು ಶ್ರೀಮತಿ S. B. ಕಡೆಮನಿ, ಹಾಗೂ ಸಹ ಶಿಕ್ಷಕರು ಶ್ರೀ M.G ಕೋಟಿ, ಮತ್ತು ಸಹ ಶಿಕ್ಷಕರು ಶ್ರೀ K S ಸವಡಿ, ಹಾಗೂ ಸಹ ಶಿಕ್ಷಕರೂ ಜೈನರ ಗುರುಗಳಿಗೆ ಭಾವ ಪೂರ್ವಕ ವಂದನೆ ಸಲ್ಲಿಸುವ ಮೂಲಕ ನೆನಪಿಸಿ ಕೊಳ್ಳ ಲಾಯಿತು. ಸನ್ಮಾನಿತರಾಗಿ ನಿವೃತ ಶಿಕ್ಷಕರು ಶ್ರೀ ಚಾಂದ ಖಾನ ಗುರುಗಳು ತುಂಬಾ ಹರುಷದಿಂದ ಮಾತನಾಡುತ್ತಾ ವಿಧ್ಯಾರ್ಥಿಗಳು ಪಡೆದಿರುವ ಶಿಕ್ಷಣ ಸ್ವಾರ್ಥಕ್ಕೆ ಸೀಮಿತವಾಗಿ ರಬಾರದು ಅದು ಸಮಾಜಿಕ ಮತ್ತು ಕುಟುಂಬಿಕರ ಹಾಗೂ ಸರ್ವರ ಎಳ್ಗೆ ಹಾಗೂ ಅಭೀರುದ್ದಿ ಬಯಸುವ ಜ್ಞಾನ ವಾಗಿರಬೇಕೆಂದು ಎಂದು ನುಡಿದರು. ಸನ್ಮಾನಿತರಾದ ಇನ್ನೋರ್ವ ನಿವೃತ್ತ ಶಿಕ್ಷಕರು ಶ್ರೀ ಅಬ್ಬಿಗೇರಿ ಗುರುಗಳು ಶಾಲೆಯ ಸಂಸ್ಥಾಪಕರು ಶ್ರೀ ದಾಸರ ರವರ ಸಮಾಜಿಕ ಕಾರ್ಯಗಳು ಅತ್ಯುತ್ತವಾದದ್ದು ಎಂದು ನೆನೆಯುತ್ತ ಶಿಕ್ಷಕ ವೃತ್ತಿ ದೇಶದ ಭವಿಷ್ಯ, ವ್ಯಕ್ತಿಯ ಭವಿಷ್ಯ ನಿರ್ಮಿಸುವ ಶ್ರೇಷ್ಟ ವೃತ್ತಿಯಾಗಿದೆ. ಈ ಸೇವೆಯನ್ನು ಸಲ್ಲಿಸಲು ಕಾರಣ ಕರ್ತರು ವಿಧ್ಯಾರ್ಥಿಗಳು ಎಂದು ಹೇಳುತ್ತಾ ವಿಧ್ಯಾರ್ಥಿಗಳಿಗೆ ಶುಭ್ ಕೋರಿದರು. ಸಂಸ್ಥೆಯ ಕಾರ್ಯದರ್ಶಿ ಗಳಾದ ಶ್ರೀ H D ಸಂಜು ಸ್ವಾಮಿ ರವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಸಂಸ್ಥೆಯು 1986 ರಲ್ಲಿ ಬೇಳಧಡಿ ಗ್ರಾಮದಲ್ಲಿ ಪ್ರಾರಂಭ ವಾಗಿ ಅನೇಕ ಗ್ರಾಮೀಣ ಭಾಗದ ವಿಧ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಮೂಲಕ ಅವರಿಗೆ ಮಾರ್ಗದರ್ಶನ ನೀಡುವ ದಾರಿದೀಪವಾಗಿದೆ.


ಮುಂಬರುವ ದಿನಗಳಲ್ಲಿ ಸರಕಾರದಿಂದ ಇನ್ನೂ ಹೆಚ್ಚಿನ ಸೌಲಭ್ಯವನ್ನು ಪಡೆದು ಶಾಲೆಯನ್ನು ಅಭಿರಿದ್ದಿ ಮಾಡುತ್ತೇವೆ ಎಂದು ಹೇಳಿದರು. ಕಾರ್ಯ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು ಶ್ರೀ K.H ಬೇಲೂರು ರವರು ಸಂಸ್ಥೆಯನ್ನು ಅಭಿರುದ್ದಿಪಡಿಸುವದು ನನ್ನ ಕರ್ತವ್ಯವಾಗಿದೆ ಮುಂಬರುವ ದಿನಗಳಲ್ಲಿ ಸರಕಾರದ ಅನುದಾನವನ್ನು ಪಡೆದು ಬೇಳಧಡಿ ಗ್ರಾಮದಲ್ಲಿ ಸಂಸ್ತೆಯ ವತಿಯಿಂದ PUC,ITI, ಹಾಗೂ ವಿವಿಧ ವೃತ್ತಿಪರ ಕೋರ್ಸ್ ಗಳನ್ನು ಪ್ರಾರಂಭ ಮಾಡಲಾಗುವುದು ಇದರಿಂದ ಗ್ರಾಮೀಣ ಭಾಗದ ವಿಧ್ಯಾರ್ಥಿಗಳಿಗೆ ಯೋಗ್ಯ ಶಿಕ್ಷಣ ಪಡೆಯಲು ಬಹಳಷ್ಟು ಅನುಕೂಲ ವಾಗಲಿದೆ ಎಂದೂ ಹೇಳುತ್ತಾ, ಎಲ್ಲಾ ವೃತ್ತಿಕಿಂತ ಶ್ರೇಷ್ಟ ವೃತ್ತಿ ಶಿಕ್ಷಕ ವೃತ್ತಿಯಾಗಿದೆ ಈ ವೃತ್ತಿಯಲ್ಲಿ ಸೇವೆ ಸಲ್ಲಿಸುವ ವರು ಪುಣ್ಯವಂತರು.ಶಾಲೆ ಎಂಬುದು ದೇವ ಮಂದಿರ ಇಲ್ಲಿ ಭೋದನೆ ಮಾಡುವ ಶಿಕ್ಷಕರು ದೇವರ ಕೆಲಸಕ್ಕೆ ಸಮವಾಗಿರುತ್ತರೆ ಇಲ್ಲಿ ಶಿಕ್ಷಣ ಪಡೆಯುವ ವಿಧ್ಯಾರ್ಥಿಗಳಿಗೆ ನಿಮ್ಮ ಭೋದನೆ ಯ ಆಶೀರ್ವಾದದ ಅವಶ್ಯಕತೆ ಇದೆ ಅದನ್ನು ಸರಿಯಾಗಿ ನಿಭಾಯಿಸಬೇಕು ಎಂದು ಹೇಳುತ್ತಾ ಶಿಕ್ಷಕರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಆವಾಗ ವಿದ್ಯರ್ಥಿಗಳಿಗೆ ಯೋಗ್ಯವಾದ ಬೋಧನೆ ಮಾಡಲು ಅನುಕೂಲ ವಾಗುತ್ತದೆ ಎಂದು ಕಿವಿಮಾತನ್ನು ಹೇಳಿದರು. ಈ ಸಂಸ್ಥೆಗೆ ಸೇವೆ ಸಲ್ಲಿಸಿದ ಎಲ್ಲ ಶಿಕ್ಷಕರಿಗೂ ಹಾಗೂ ಪ್ರಸ್ತುತ ಸೇವೆಸಲ್ಲಿಸುತ್ತಿರುವ ಶಿಕ್ಷಕರಿಗೂ ಗುರುವಂದನೆ ಕಾರ್ಯಕ್ರಮದ ಶುಭಾಶಯಗಳನ್ನು ಕೋರಿದರು. ಕಾರ್ಯ್ರಮದಲ್ಲಿ
ಸಂಸ್ಥೆಯ ಸದಸ್ಯರಾದ ಶ್ರೀ ಶ್ರೀಪತಿ ಹುಯಿಲಗೋಳ, ಶ್ರೀ H K ದಾಸರ ಹಾಗೂ ಶಾಲೆಯ ಶಿಕ್ಷಕರಾದ ಶ್ರೀ V R ಪೂಜಾರ, ಶ್ರೀ ಶಂಕರ ನಾಯಕ ಶ್ರೀ ಎಂ ಎಂ ರೆಡ್ಡೆರ, ಶ್ರಿ B.F ಕಾಕನುರ, ಶ್ರೀ S.H ಸಂಜು ಸ್ವಾಮಿ, ಶ್ರೀ A Y ಹುಯಿಲಗೊಳ, ಹಾಗೂ 1995-96 ನೆಯ ಸಾಲಿನ ವಿದ್ಯಾರ್ಥಿಗಳು, ಸೇರಿದಂತೆ ಗ್ರಾಮದ ಹಿರಿಯರು, ವಿಧ್ಯಾರ್ಥಿಗಳು, ಯುವಕರೂ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಯನ್ನೂ ಸಹ ಶಿಕ್ಷಕರಾದ ಶ್ರೀ ಮೋತಿಲಾಲ್ ಪೂಜಾರ ರವರು, ಸ್ವಾಗತವನ್ನು ಶ್ರೀ C H ಮುಷನ್ನವರ ರವರು,
ಅತಿಥಿಗಳ ಪರಿಚಯವನ್ನು ಶ್ರೀ ಬಸವರಾಜ್ ಮಳ್ಳನ್ನವರ , ವಂದನಾರ್ಪಣೆಯನ್ನು ಶ್ರೀ dr. ರಾಮು ಕಲಾಲ್ ರವರು ಮಾಡಿದರು.