ಆಲಮಟ್ಟಿ : ಮುಖ್ಯ ಮಂತ್ರಿಗಳು ಇಂದು ಮಂಡಿಸಿದ ಬಜೆಟ್ ರಾಜ್ಯದ ನೌಕರರಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ ತೀವ್ರ ನಿರಾಸೆ ಮೂಡಿಸಿದೆ ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಸಕಾ೯ರ ರಾಜ್ಯದ ಸಕಾ೯ರಿ ನೌಕರರಿಗೆ ಹಾಗೂ ಶಿಕ್ಷಕರಿಗೆ ಹಿಂದಿನ ವೇತನ ಆಯೋಗದ ಸೌಲಭ್ಯಗಳನ್ನು ಒದಗಿಸಿ ಐದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೆ.ಸುಧಾಕರರಾವ ಅವರ ಅಧ್ಯಕ್ಷತೆಯಲ್ಲಿ 7 ನೇ ವೇತನ ಆಯೋಗ ರಚನೆ ಮಾಡಿದ್ದು,ಶಿಕ್ಷಕರ ಸಂಘಟನೆ ಹಾಗೂ ಇತರೆ ಸಂಘಟನೆಗಳಿಂದ ಸೂಕ್ತ ವರದಿಯನ್ನು ಪಡೆದುಕೊಂಡಿದ್ದಾರೆ. ಆದರೆ ಇಂದಿನ ಬಜೆಟ್ ನಲ್ಲಿ 7 ನೇ ವೇತನ ಬಗ್ಗೆ ಮುಖ್ಯ ಮಂತ್ಕಿಗಳು ಕಿಂಚಿತ್ತೂ ಮಾತನಾಡದೆ ತೀವ್ರ ಸ್ವರೂಪದ ನಿರಾಸೆ ಮೂಡಿಸಿ ಸಮತ್ತ ನೌಕರರ ವಲಯ ಅಸಮಾಧಾನ ಪಡುವಂತೆ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಿ ಅವರ ಭಾವಚಿತ್ರ.


ಇಂದು ಮಂಡಿಸಿರುವ ಅಯವ್ಯದಲ್ಲಿ ಭವಿಷ್ಯವತಿ೯ಯಾಗಿ ವರದಿಯನ್ನು ನಿರೀಕ್ಷಿಸಿ,ವೇತನ ಆಯೋಗವನ್ನು ಜಾರಿಗೊಳಿಸುವುದಾಗಲಿ ಅಥವಾ ಸಕಾ೯ರಿ ನೌಕರರ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ಅನುದಾನವನ್ನು ಮೀಸಲಿಡುವ ಪ್ರಸ್ತಾಪವನ್ನಾಗಲಿ ಅಥವಾ ಈಗಾಗಲೇ ಹಿಂದಿನ ವೇತನ ಆಯೋಗದ ಸೌಲಭ್ಯಗಳನ್ನು ಪಡೆದು ಐದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರವನ್ನು ಘೋಷಿಸುವ ನಿರೀಕ್ಷೆಯನ್ನು ಹೊಂದಿದ್ದೆವು.ಆದರೆ ಈ ಕುರಿತು ಯಾವುದೇ ಪ್ರಸ್ತಾಪಗಳನ್ನು ಅವಯ್ಯವದಲ್ಲಿ ಮಂಡನೆಯಾಗದೇ ಇರುವುದು ಸಮಸ್ತ ರಾಜ್ಯದ ನೌಕರರಿಗೆ ಮತ್ತು ಶಿಕ್ಷಕರಿಗೆ ಬಹಳಷ್ಟು ನಿರಾಸೆ ಉಂಟು ಮಾಡಿದೆ. ಬಜೆಟ್ ನಲ್ಲಿ ನೌಕರರ ವಲಯಕ್ಕೆ ಮುಖ್ಯ ಮಂತ್ರಿಗಳು ಸಿಹಿ ಸುದ್ದಿ ನೀಡುತ್ತಾರೆ ಎಂಬ ವಿಚಾರದಲ್ಲಿ ಜಾತಕ ಪಕ್ಷಿಯಂತೆ ನೌಕರರು ಕಾದು ಕುಳಿತ್ತಿದ್ದರು. ಇಂಥ ಸಂದರ್ಭದಲ್ಲಿ ನಿರೀಕ್ಷೆ ಹುಸಿಗೊಳಿಸಿ ನಿರಾಸೆಯ ಕಾಮೋ೯ಡದಲ್ಲಿ ನೌಕರರನ್ನು ಸಿಎಂ ಅವರು ತಳ್ಳಿದ್ದಾರೆ ಎಂದು ಚಂದ್ರಶೇಖರ ನುಗ್ಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಶಿಕ್ಷಕರು ಮೊದಲೇ ವೇತನ ತಾರತಮ್ಯ ಸಮಸ್ಯೆ ಎದುರಿಸುತ್ತಿದ್ದು ಅಂಥದ್ದರಲ್ಲಿ 7 ನೇ ವೇತನ ಆಯೋಗ ಘೋಷಣೆ ಬಗ್ಗೆ ಬಜೆಟ್ ನಲ್ಲಿ ಮುಖ್ಯ ಮಂತ್ರಿಗಳು ತುಟಿಬಿಚ್ಚದೇ ಗೌಣವಾಗಿರುವುದು ಮತ್ತಿಷ್ಟು ಅಸಮಾಧಾನ ಬುಗಿಲೆಳುವಂತೆ ಮಾಡಿದೆ. ಒಂದೆಡೆ ಎನ್.ಪಿ.ಎಸ್ ರದ್ದು ಪ್ರಸ್ತಾವನೆವೂ ಇಲ್ಲ, ಮತ್ತೊಂದೆಡೆ ನೌಕರರಿಗೆ ಮಧ್ಯಂತರ ಪರಿಹಾರವೂ ಇಲ್ಲ ಪ್ರಸ್ತುತ ಮಂಡಿಸಿರುವ ಈ ಬಜೆಟ್ ನಲ್ಲಿ ಎಂದಿದ್ದಾರೆ.
ಸರ್ಕಾರಿ ನೌಕರರು, ಶಿಕ್ಷಕರು ಪ್ರಸ್ತುತ ಬಜೆಟ್ ನಲ್ಲಿ 7 ವೇತನ ಆಯೋಗದ ವರದಿ ನಿರೀಕ್ಷಿಸಿ ಅದಕ್ಕೆ ಅನುದಾನ ಮೀಸಲಿನ ನಿರೀಕ್ಷೆ ಇಟ್ಟುಕೊಂಡಿದ್ದೇವು, ಪ್ರಸ್ತುತ ಬಜೆಟ್ ನಲ್ಲಿ ಆ ವರದಿ ಅನುಸರಿಸಿ ಯಾವುದೇ ಅನುದಾನ ಭರವಸೆ, ಮಧ್ಯಂತರ ಪರಿಹಾರವಾಗಲಿ ಘೋಷಿಸದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸರ್ಕಾರಿ ಶಾಲೆಗಳ ಸಮಗ್ರ ನಿರ್ವಹಣೆಗಾಗಿ 150 ಕೋಟಿ ರೂಗಳ ಅನುದಾನ ನೀಡಲು ವಿನಂತಿಸಲಾಗಿತ್ತು. ಹೊಸ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರಂಭಿಸಲು ವಿನಂತಿಸಲಾಗಿತ್ತು‌. ನೌಕರರಿಗೆ ಮಾರಕವಾಗಿರುವ
ಎನ್. ಪಿ.ಎಸ್ ರದ್ದುಗೊಳಿಸಲು ಹೋರಾಟ ಹೆಚ್ಚಿತ್ತು. ಈ ವಿಷಯದ ಕುರಿತು ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಈ ಎಲ್ಲಾ ಅಂಶಗಳು ಇಡೀ ರಾಜ್ಯದ ಶಿಕ್ಷಕರಿಗೆ ತೀವ್ರ ನಿರಾಶೆಯಾಗಿದೆ ಎಂದು ಚಂದ್ರಶೇಖರ ‌ನುಗ್ಗಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೋವಿಡ್ ಲಸಿಕೆ 2021ರಲ್ಲಿ ಲಭ್ಯ ದಿಢೀರ್ ನಿರೀಕ್ಷೆ ಬೇಡ: ಡಬ್ಲೂಎಚ್ಒ ತಜ್ಞ

ಕೋವಿಡ್ ಲಸಿಕೆ ತಯಾರಿಸುತ್ತಿರುವ ಎಲ್ಲ ಪ್ರಯೋಗಗಳು ಈಗ ಯಶಸ್ವಿ ಹಾದಿಯಲ್ಲಿವೆ. ಸುರಕ್ಷತೆ ಮತ್ತು ರೋಗ ನಿರೋಧಕತೆ ಸೃಷ್ಟಿಸುವ ದೃಷ್ಟಿಯಲ್ಲಿ ಈ ಪ್ರಯೋಗಗಳು ಫಲ ನೀಡುತ್ತಿವೆ.

ಕಷ್ಟಾ ಮಾಡೋದು ಭಾಳ್ ಕಷ್ಟ ಅಂತ ಕಷ್ಟದ ಅಂಗಡಿನಾ ಬಂದ್ ಮಾಡಿದ ತಿಪ್ಪಾ..!

ಅನೌನು ಎರಡ್ ತಿಂಗಳ್ ಹೊತ್ತಾತು ಗಡ್ಡದಾಗೂ ಸೀರ ಸೇರುವಂಗಾಗ್ಯಾವು, ಕೆರದ್ , ಕೆರದ್ ತಲಿ ಕೆಟ್ ಹೋಗೈತಿ. ಅದಕ್ ಇವತ್ತು ಕಷ್ಟದ ಅಂಗಡಿ ಚಾಲೂ ಅಂದಿದ್ದಕ್ಕ ನಾನು ದುಡಿಕಿಲೇ ಬಂದೇ ಅಷ್ಟರಾಗ್ ನೀನಾ ಅಂಗಡಿ ಕದಾ ಹಾಕ್ಕೊಂಡು ಹೊಂಟ್ಯಲ್ಲಾ ಅಂದ ಯಲ್ಲಾ.

ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ!

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ವಿಜಯಪುರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ದ್ರಾಕ್ಷಿ, ಬಾಳೆ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿವೆ.