ಹೈದರಾಬಾದ್: ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ದಿನಗಳ ನಂತರ ಸರ್ಕಾರ ಶೂಟಿಂಗ್ ಗೆ ಅವಕಾಶ ನೀಡಿದೆ. ಇದರಿಂದಾಗಿ ಕಲಾವಿದರಲ್ಲಿ ಹುರುಪು ಮನೆ ಮಾಡಿದೆ. ಈ ಕುರಿತು ನಟ ಕಿಚ್ಚ ಸುದೀಪ್ ಸಹ ಸುಧೀರ್ಘ ಸಮಯದ ಬಳಿಕ ಶೂಟಿಂಗ್ ಮರಳಿದ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಲ್ಲದೇ, ಶೂಟಿಂಗ್‍ ಆರಂಭವಾಗಿರುವ ಕುರಿತು ಚಿತ್ರೀಕರಣದ ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಂದು ಮೇಕಪ್ ಹಾಕಿಕೊಂಡಾಗ ಅದ್ಭುತ ಅನುಭವವಾಯಿತು. ಸಿನಿಮಾ ಎಂಬ ಉತ್ಸಾಹ. ಹೀಗಾಗಿ ನಾನು ಇಲ್ಲಿದ್ದೇನೆ. ಮತ್ತೆ ವಿಕ್ರಾಂತ್ ರೋಣ ಘರ್ಜಿಸಲಿದ್ದಾನೆ ಎಂದು ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಟ್ವೀಟ್ಗೆಿ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ. ಹಲವು ದಿನಗಳ ಬಳಿಕ ಅಣ್ಣ ಶೂಟಿಂಗ್ಗೆ್ ಮರಳಿದ್ದಾರೆ. ವಾವ್ ಫೆಂಟಾಸ್ಟಿಕ್, ಯು ಲುಕ್ ಸ್ಟನ್ನಿಂಗ್ ಅಣ್ಣ ಎಂದು ಹೇಳಿದ್ದಾರೆ. ಫ್ಯಾಂಟಮ್ ಚಿತ್ರ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಾರಥಿ ಅನೂಪ್ ಭಂಡಾರಿ ಕಾಂಬಿನೇಷನ್ನಿಲ್ಲಿ ತಯಾರಾಗುತ್ತಿದೆ. ಸಿನಿಮಾ ಟೈಟಲ್ ಹಾಗೂ ಕಿಚ್ಚನ ವಿಕ್ರಾಂತ್ ರೋಣ ಪಾತ್ರದ ಕುರಿತು ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಪೋಸ್ಟರ್ ನಲ್ಲಿ ಕಿಚ್ಚನ ಅರ್ಧ ಫೇಸ್ ನೋಡಿ, ಮೊನಚು ಮೀಸೆ ಮೋಡಿಗೆ ಅಭಿಮಾನಿಗಳು ಫುಲ್ ಫೀದಾ ಆಗಿದ್ದಾರೆ.

Leave a Reply

Your email address will not be published.

You May Also Like

ಮಕ್ಕಳಲ್ಲಿ ಕಲಿಕಾಸಕ್ತಿ ಕ್ಷೀಣ – ರಮಣ ಚೌಧರಿ

ಚಿತ್ರ ವರದಿ: ಗುಲಾಬಚಂದ ಜಾಧವಆಲಮಟ್ಟಿ : ಜನ್ಮತಾಳುತ್ತಲೇ ಯಾರು ಪ್ರಬುದ್ಧ ಬುದ್ದಿವಂತರಾಗಿರುವದಿಲ್ಲ. ಹಂತಹಂತವಾಗಿ ಅದು ಮೊಳಕೆಯೊಡೆಯುತ್ತದೆ.…

ಕೇಲೂರ ಘಟನೆ: ಸಂತ್ರಸ್ಥೆಯ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿಗಳು

ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕರ‍್ಯಾಚರಣೆ…

ಮೊಟ್ಟೆ ಭಾಗ್ಯ ವಿಸ್ತರಿಸಿ ಬಜೆಟ್ ನಲ್ಲಿ ಘೋಷಿಸಿ- ಸರಕಾರಕ್ಕೆ ಆಗ್ರಹ

ಆಲಮಟ್ಟಿ : 1 ರಿಂದ 10 ನೇ ತರಗತಿ ಮಕ್ಕಳಿಗೆ ನೀಡಲಾಗುತ್ತಿರುವ ಕ್ಷೀರ ಭಾಗ್ಯದ ಮಾದರಿಯಲ್ಲೇ…