ಉತ್ತರಪ್ರಭ
ಮುಳಗುಂದ:
ಪಟ್ಟಣದಲ್ಲಿ ಸಾಂಪ್ರದಾಯಕ ಹೋಳಿ ಹಬ್ಬವನ್ನ ಶಾಂತಿ ಸಂಭ್ರಮದಿoದ ಆಚರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಕಾಮ-ರತಿ ಪ್ರತಿಸ್ಥಾಪಿಸಿ ಶನಿವಾರ ಬೆಳಗಿನಜಾವ ಕಾಮದಹನ ಮಾಡಿದರು.
ಹೋಳಿ ಆಚರಣೆಯಲ್ಲಿ ಎಲ್ಲ ವರ್ಗದ ಯುವಕರು ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದರು. ನಾನಾ ವೇಷದರಿಸಿದ ಚಿಣ್ಣರು, ಯುವಕರು, ಮಹಿಳೆಯರು ಪರಸ್ಪರ ರಂಗು ರಂಗಿನ ಬಣ್ಣದೋಕಳಿಯಲ್ಲಿ ಮಿಂದೆದ್ದರು. ಪ್ರಮುಖವಾಗಿ ಚಿಂದಿಪೇಟಿ ಓಣಿ ಯವಕರು ವಾಹನದ ಮೇಲೆ ಕಾಮ ರತಿ ಪ್ರತಿಕೃತಿ ನಿರ್ಮಿಸಿದ್ದರು.
ಜಗ್ಗಲಿಗೆ ಬಡಿತ, ಕಣಿ ನಾದಕ್ಕೆ ಹೆಜ್ಜೆಹಾಕಿ ಹೋಳಿ ಪದಗಳನ್ನು ಹಾಡುತ್ತ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು. ಪುರದ ಓಣಿ, ಸವಳಭಾವಿ ಓಣಿ, ಚೌಡನಪೇಟಿ, ಕೋಟಿ ಓಣಿ ಯುವಕರು ನಾನಾ ವೇಷ ಧರಿಸಿ, ಹಾಸ್ಯ, ವಿನೋದಾವಳಿಯ ಅಣಕು ಶವ ಯಾತ್ರೆ ಮಾಡಿದರು. ಮಕ್ಕಳ ದಂಡು ಮನೆ ಮನೆಗೆ ತೆರಳಿ ಹೋಳಿಗೆ ತುಪ್ಪದ ಪ್ರಸಾದ ಸವಿದರು. ಓಣಿಯ ಬೀದಿಯಲ್ಲಿ ಚಿಣ್ಣರ ಬಾರಿಸುವ ಹಲಿಗೆ ನಾದ ರಿಂಗಣಿಸಿತು. ಪ್ರಮುಖ ಗಣ್ಯರು ಸೇರಿದಂತೆ ಎಲ್ಲರು ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಜಾಹಿರಾತು
ಜಾಹಿರಾತು
ಜಾಹಿರಾತು
ಜಾಹಿರಾತು
Leave a Reply

Your email address will not be published. Required fields are marked *

You May Also Like

ಸಸಿ ವಿತರಿಸಿದ ಅರಣ್ಯಾಧಿಕಾರಿ

ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿದ್ದು, ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಕೊಡಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಸಿದ್ದರಾಮ ವಿಭೂತಿ ಹೇಳಿದರು.

ರೋಣ: ಪತ್ರಕರ್ತ ಇಟಗಿ ನಿಧನ

ಗದಗ: ಜಿಲ್ಲೆಯ ರೋಣದ ಹಿರಿಯ ಪತ್ರಕರ್ತ ಎ.ಡಿ. ಇಟಗಿ(62) ಅನಾರೋಗ್ಯದಿಂದ ಬುಧವಾರ ನಿಧನರಾದರು. ಅಸ್ವಸ್ಥರಾಗಿದ್ದ ಅವರಿಗೆ…

ಶಾಲಾ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆರೋಪ: ಕ್ರಮಕ್ಕೆ ಜೆಡಿಎಸ್ ವಿದ್ಯಾರ್ಥಿ ಘಟಕ ಒತ್ತಾಯ

ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಕಳಪೆ ಮಟ್ಟದ್ದಾಗಿದ್ದು, ಅದನ್ನು ತಡೆಗಟ್ಟಬೇಕೆಂದು ಜಾತ್ಯಾತೀತ ಜನತಾದಳ ವಿದ್ಯಾರ್ಥಿ ಘಟಕದಿಂದ ಉಪ‌ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

ವಿವಿಧ ರಂಗಗಳಲ್ಲಿ ಮಹಿಳೆಯರ ಪಾತ್ರ ವಿಶಿಷ್ಟ : ಮೂಲಿಮನಿ

ಎಲ್ಲಾ ರಂಗದಲ್ಲಿ ಮಹಿಳೆಯರ ಪಾತ್ರ ವಿಶಿಷ್ಠವಾದದು, ಹಾಗೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ರೇಷ್ಠತೆಯನ್ನುತೊರಿಸುತ್ತದೆಎಂದು ಎಂಜನೀಯರಿಂಗ್‌ ಕಾಲೇಜನ ಸಹಾಯಕ ಉಪನ್ಯಾಸಕ ಪ್ರಶಾಂತ ಮೂಲಿಮನಿ ಹೇಳಿದರು.