ಉತ್ತರಪ್ರಭ
ಮುಳಗುಂದ: ಪಟ್ಟಣದಲ್ಲಿ ಸಾಂಪ್ರದಾಯಕ ಹೋಳಿ ಹಬ್ಬವನ್ನ ಶಾಂತಿ ಸಂಭ್ರಮದಿoದ ಆಚರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಕಾಮ-ರತಿ ಪ್ರತಿಸ್ಥಾಪಿಸಿ ಶನಿವಾರ ಬೆಳಗಿನಜಾವ ಕಾಮದಹನ ಮಾಡಿದರು.
ಹೋಳಿ ಆಚರಣೆಯಲ್ಲಿ ಎಲ್ಲ ವರ್ಗದ ಯುವಕರು ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದರು. ನಾನಾ ವೇಷದರಿಸಿದ ಚಿಣ್ಣರು, ಯುವಕರು, ಮಹಿಳೆಯರು ಪರಸ್ಪರ ರಂಗು ರಂಗಿನ ಬಣ್ಣದೋಕಳಿಯಲ್ಲಿ ಮಿಂದೆದ್ದರು. ಪ್ರಮುಖವಾಗಿ ಚಿಂದಿಪೇಟಿ ಓಣಿ ಯವಕರು ವಾಹನದ ಮೇಲೆ ಕಾಮ ರತಿ ಪ್ರತಿಕೃತಿ ನಿರ್ಮಿಸಿದ್ದರು.
ಜಗ್ಗಲಿಗೆ ಬಡಿತ, ಕಣಿ ನಾದಕ್ಕೆ ಹೆಜ್ಜೆಹಾಕಿ ಹೋಳಿ ಪದಗಳನ್ನು ಹಾಡುತ್ತ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು. ಪುರದ ಓಣಿ, ಸವಳಭಾವಿ ಓಣಿ, ಚೌಡನಪೇಟಿ, ಕೋಟಿ ಓಣಿ ಯುವಕರು ನಾನಾ ವೇಷ ಧರಿಸಿ, ಹಾಸ್ಯ, ವಿನೋದಾವಳಿಯ ಅಣಕು ಶವ ಯಾತ್ರೆ ಮಾಡಿದರು. ಮಕ್ಕಳ ದಂಡು ಮನೆ ಮನೆಗೆ ತೆರಳಿ ಹೋಳಿಗೆ ತುಪ್ಪದ ಪ್ರಸಾದ ಸವಿದರು. ಓಣಿಯ ಬೀದಿಯಲ್ಲಿ ಚಿಣ್ಣರ ಬಾರಿಸುವ ಹಲಿಗೆ ನಾದ ರಿಂಗಣಿಸಿತು. ಪ್ರಮುಖ ಗಣ್ಯರು ಸೇರಿದಂತೆ ಎಲ್ಲರು ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

