ಗಜೇಂದ್ರಗಡ: ಸ್ಥಳೀಯ ಪೊಲೀಸ್ ಇಲಾಖೆಯಿಂದ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಕರಪತ್ರ ನೀಡುವ ಮೂಲಕ ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ವಾಹನ ಚಲಾವಣೆ ಮಾಡಬೇಕು ಎಂದು ಶುಕ್ರವಾರ ಜಾಗೃತಿ ಮೂಡಿಸಿದರು.

ಈ ವೇಳೆ ಠಾಣೆ ಪಿಎಸ್‌ಐ ಗುರುಶಾಂತ್ ದಾಶ್ಯಾಳ ಮಾತನಾಡಿ, ಹೆಲ್ಮೆಟ್ ಧರಿಸದವರನ್ನು ಹಿಡಿದು ದಂಡ ವಿಧಿಸುವುದು ಪೊಲೀಸರ ಉದ್ದೇಶವಲ್ಲ. ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ತಮ್ಮ ಅಮೂಲ್ಯ ಜೀವ ಕಾಪಾಡಲಿ ಎಂಬ ಸದುದ್ದೇಶ ಇಲಾಖೆಯದ್ದಾಗಿದೆ. ಭಾರತದಲ್ಲಿ ಪ್ರತಿ ವರ್ಷ ರೋಗ, ರುಜಿನಗಳಿಗೆ ಬಲಿಯಾಗುವವರಿಗಿಂತ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಜನಹಿತಾಸಕ್ತಿಯ ಯೋಜನೆ ಸಾಕಾರವಾಗಲು ಜನರ ಸಹಭಾಗಿತ್ವ ಅತಿಮುಖ್ಯ. ಆದ್ದರಿಂದ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸುವ ಮೂಲಕ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಕೈ ಜೋಡಿಸಬೇಕು. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವವರನ್ನು ಎಚ್ಚರಿಸುವುದು ಯುವಕರ ಕರ್ತವ್ಯ. ಮುಖ್ಯವಾಗಿ ಯುವಕರು ಮೊದಲು ಹೆಲ್ಮೆಟ್ ಧರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಈ ದೆಸೆಯಲ್ಲಿ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ತಮ್ಮ ಪ್ರಾಣ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.

ಕಾಲಕಾಲೇಶ್ವರ ವೃತ್ತದಲ್ಲಿ ಸಂಚರಿಸುವ ಪ್ರತಿಯೊಬ್ಬ ಬೈಕ್ ಸವಾರನಿಗೂ ಕರೆದು, ಕರಪತ್ರ ನೀಡಿ, ಹೆಲ್ಮೇಟ್‌ನ ಮಹತ್ವವನ್ನು ಪೊಲೀಸ್ ಸಿಬ್ಬಂದಿಗಳು ಸಾರಿದರು. ಎಎಸ್‌ಐ ಎಸ್.ಬಿ. ದಾಡಿಬಾವಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

You May Also Like

ಭಾವನೆಗಳ ರಸಕಾವ್ಯಕ್ಕೆ ಚಿತ್ರಕಲೆ ಸ್ಪೂರ್ತಿ- ಉಮೇಶ ಶಿರಹಟ್ಟಿಮಠ ಅಭಿಮತ

ಚಿತ್ರ ಬರಹ : ಗುಲಾಬಚಂದ ಜಾಧವವಿಜಯಪುರ : ಚಿತ್ರಕಲೆ ನಮ್ಮ ಸಂಸ್ಕೃತಿಗಳ ಜೀವನಾಡಿ.ಅದು ಜೀವನದ ಒಂದು…

ಮಸ್ಕಿ: ಬಂಜಾರ ಭವನ ನಿರ್ಮಾಣಕ್ಕೆ 2ಕೋಟಿ ಮಂಜೂರು

ತಾಲೂಕ ಬಂಜಾರ ಭವನ ನಿರ್ಮಾಣಕ್ಕೆ 2ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಭರವಸೆ ನೀಡಿದರು.

ಕನ್ನಡ ರಾಜ್ಯೋತ್ಸವ ದಿನದಂದ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಲು ಮುಂದಾದ ಮಹಾರಾಷ್ಟ್ರ ಸಚಿವರು!

ಬೆಳಗಾವಿ : ರಾಜ್ಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ತಯಾರಿ ನಡೆದಿದೆ. ಆದರೆ, ಮಹಾರಾಷ್ಟ್ರ ಸರ್ಕಾರ, ಇದನ್ನು ವಿರೋಧಿಸುವ ಪ್ರಯತ್ನ ನಡೆಸುತ್ತಿದೆ.

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯ ಮೇಲಿನ ದಾಳಿ ಬಗ್ಗೆ ಸಿಸಿಬಿ ಹೇಳಿದ್ದೇನು?

ಬೆಂಗಳೂರು : ನಗರದಲ್ಲಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮಧ್ಯಂತರ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ.