
ವರದಿ: ವಿಠಲ ಕೆಳೂತ್
ಉತ್ತರಪ್ರಭ
ಮಸ್ಕಿ: ಜಿಲ್ಲೆಯ ಪ್ರಗತಿಪರ, ದಲಿತ ಸಂಘಟನೆ ಒಕ್ಕೂಟ ಫೆ. 10ರಂದು ರಾಯಚೂರು ಸಂಪೂರ್ಣ ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ರಾಯಚೂರಿನ ಜಿಲ್ಲಾಧಿಕಾರಿ ಡಾ. ಅವಿನಾಶ ಮೇನನ್ ರಾಜೇಂದ್ರನ ಅವರು ತಿಳಿಸಿದ್ದಾರೆ.
ಪ್ರಗತಿಪರ ಸಂಘಟನೆ ಒಕ್ಕೂಟದ ವತಿಯಿಂದ ರಾಯಚೂರು ನಗರ ಸಂಪೂರ್ಣ ಬಂದ್ ಮಾಡಬೇಕೆಂದು ಕರೆ ನೀಡಿರುವುದರಿಂದ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ತಾಲೂಕಿನಲ್ಲಿನ
ಫೆ. 9ರಂದು ರಾತ್ರಿ 8ಗಂಟೆಯಿಂದ ಫೆ. 10 ರಾತ್ರಿ 8ಗಂಟೆಯವರೆಗೆ ಬ್ರಾಂಡಿ, ಬಾರ್ ಅಂಗಡಿಗಳನ್ನು ಮುಚ್ಚಬೇಕು, ಮಧ್ಯ ಸಾಗಾಣಿಕೆ ಮಾರಾಟ ನಿಲ್ಲಿಸಬೇಕು, ಒಂದು ವೇಳೆ ಮಧ್ಯ ಮಾರಾಟ ಮಾಡಿದರೆ,ಅಬಕಾರಿ 1965ರ ಕಾಯ್ದೆ, ಕಲಾಂ 21ರ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಲಾಗಿದೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.