ಉತ್ತರಪ್ರಭ ಸುದ್ದಿ
ಗದಗ:
ಗದಗ ಬೆಟಗೇರಿ ನಗರ ಸಭೆಯ ಅಧ್ಯಕ್ಷರಾಗಿ ಬಿಜೇಪಿಯ ಉಷಾ ಮಹೇಶ ದಾಸರ ಆಯ್ಕೆಯಾಗಿದ್ದರು ಮತ್ತು ಉಪಾಧ್ಯಕ್ಷರಾಗಿ ಸುನಂದಾ ಬಾಕಳೆಯವರು ಆಯ್ಕೆಯಾಗುವ ಮೂಲಕ ನಗರಸಭೆಯಲ್ಲಿ ಮಹಿಳಾ ಅಧಿಪತ್ಯಕ್ಕೆ ಅಣಿಯಾಗಿರುವ ಬೆನ್ನಲ್ಲೇ, ಇತ್ತ ಕಾಂಗ್ರೇಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯು ಪಾರದರ್ಶಕತೆಯಿಂದ ಆಗಿಲ್ಲ ಎಂದು ಆರೋಪ ಮಾಡಿ , 19 ಮತಗಳನ್ನು ಕಾಂಗ್ರೇಸ್ ಅಭ್ಯರ್ಥಿ ತೆಗೆದುಕೊಂಡಿದ್ದಾರೆ ಆದರೂ ಬಿಜೆಪಿಯ ಅಭ್ಯರ್ಥಿಯಾದ ಉಷಾ ಮಹೇಶ ದಾಸರವರನ್ನು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆಂದು ಆರೋಪಿಸಿದ್ದರು.
ತದನಂತರ ಕಾಂಗ್ರೇಸ್‌ನಿAದ ಮಾನ್ಯ ಕರ್ನಾಟಕ ಉಚ್ಚನಾಯಾಯಾಲಯದಲ್ಲಿ ತನಗಾದ ಅನ್ಯಾಯದ ಬಗ್ಗೆ ಕೋರ್ಟ ಮೊರೆಹೊಗಿದ್ದರು, ಕಾಂಗ್ರೇಸ್ ಪಕ್ಷದ ಮನವಿಯನ್ನು ಪುರಷ್ಕರಿಸಿದ ಮಾನ್ಯ ನ್ಯಾಯಾಲಯ ದಿನಾಂಕ:21.02.2022 ರಂದು ವಿಚಾರಣೆ ಕಾಯ್ದಿರಿಸಿತ್ತು. ಇಂದು ವಾಧ ಆಲಿಸಿದ ನ್ಯಾಯಾಲಯ, ಉಪಾಧ್ಯಕ್ಷರಾಗಿ ಸುನಂದಾ ಬಾಕಳೆ ಮುಂದುವರೆಯಲಿದ್ದಾರೆ ಏಕೆಂದರೆ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ವಿರೋಧವಿದ್ದಿಲ್ಲ ಹಾಗಾಗಿ ಉಪಾಧ್ಯಕ್ಷರಾಗಿ ಸುನಂದಾ ಬಾಕಳೆ ಮುಂದುವರಿಯಲಿದ್ದಾರೆ.
ಆದರೆ ಅಧ್ಯಕ್ಷ ಸ್ಥಾನದ ಬಗ್ಗೆ ಆಕ್ಷೇಪಣೆ ಇರುವುದರಿಂದ ಮಾರ್ಚ 2ಕ್ಕೆ ತೀರ್ಪನ್ನು ಕಾಯ್ದಿರಿಸಿ ಹೈ ಕೋರ್ಟ ಆದೇಶ ಮಾಡಿದೆ. ಬಿಜೆಪಿಯ 19 ಸದಸ್ಯರು ಬಿಜೆಪಿಯ ಉಷಾ ಮಹೇಶ ದಾಸರ ಪರವಾಗಿ ಮತ ಚಲಾಯಿಸಿದ್ದೇವೆೆಂದು ಮುಚ್ಚಳಿಪತ್ರ ಬರೆದುಕೊಟ್ಟಿದ್ದಾರೆಂದು ತಿಳಿದು ಬಂದಿದೆ. ಮಾರ್ಚ 2ರ ತನಕ ಕಾಯಲೇಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ರೈತ ಸಂಘ, ಹಸಿರು ಸೇನೆ: ಮಹಿಳಾ ಘಟಕ ಉದ್ಘಾಟನೆ

ಉತ್ತರಪ್ರಭ ಸುದ್ದಿಆಲಮಟ್ಟಿ: ಕನಾ೯ಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಮಹಿಳಾ ಘಟಕವೊಂದು ನೂತನವಾಗಿ…

ಛಬ್ಬಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಕರವೇ ಮನವಿ

ಶಿರಹಟ್ಟಿ: ತಾಲೂಕಿನ ಛಬ್ಬಿ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ರಕ್ಷಣಾ ವೇದಿಕೆ ತಾಲೂಕು ಘಟಕ…

ದೋತರಾ ಹರಿದು ಮಾಸ್ಕ್ ಮಾಡಿನಿ: ಎಸ್.ಎಸ್.ಪಾಟೀಲ್

ನಾನು ನನ್ನ ಧೋತರ ಹರಿದು ಮಾಸ್ಕ್ ಮಾಡಿಕೊಂಡಿದ್ದೇನೆ. ಇವುಗಳನ್ನೆ ನಮ್ಮ ಹೊಲದಲ್ಲಿ ಕೆಲಸ ಮಡುವ ಕಾರ್ಮಿಕರಿಗೂ ನೀಡಿದ್ದೇನೆ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ್