ಶಿರಹಟ್ಟಿ: ತಾಲೂಕಿನ ಛಬ್ಬಿ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ರಕ್ಷಣಾ ವೇದಿಕೆ ತಾಲೂಕು ಘಟಕ (ನಾರಾಯಣಗೌಡ ಬಣ) ಹಾಗೂ ಛಬ್ಬಿ ಗ್ರಾಮ ಘಟಕದ ವತಿಯಿಂದ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮೂಲಕ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಬಸವರಾಜ ವಡವಿ ಹಾಗೂ ಗ್ರಾಮ ಘಟಕದ ಅಧ್ಯಕ್ಷ ಪ್ರದೀಪ ಬೇವಿನಕಟ್ಟಿ ಮಾತನಾಡಿ, ಗ್ರಾಮವು ಸಮಸ್ಯೆಗಳ ಆಗರವಾಗಿದ್ದು, ಅಭಿವೃದ್ಧಿ ಮರರೀಚಿಕೆಯಾದಂತಾಗಿದೆ. ಗ್ರಾಮದಲ್ಲಿನ ತಲೆದೋರಿದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಸರ್ಕಾರಿ ಶಾಲೆಯ ಆವರಣದಲ್ಲಿನ ಕಲ್ಮಶವನ್ನು ಸ್ವಚ್ಚಗೊಳಿಸಿ ಮಕ್ಕಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕು. ಗ್ರಾಮದ ಹೊರ ಭಾಗದಲ್ಲಿ ಇರುವ ಕೆಂಪಿಗೇರಿ ಕೆರೆಯು ಸಂಪೂರ್ಣವಾಗಿ ಹೂಳು ತುಂಬಿದ್ದು, ಕೂಡಲೇ ಹೂಳನ್ನು ತೆಗೆದು ಕೆರೆ ಸ್ವಚ್ಛಗೊಳಿಸಬೇಕು ಎಂದರು.

ಗ್ರಾಮದಲ್ಲಿ ಸ್ಥಗಿತಗೊಂಡಿರುವ ಬೀದಿ ದೀಪಗಳ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಗ್ರಾಮದಲ್ಲಿ ಅವಶ್ಯವಿರುವ ರಸ್ತೆಗಳಿಗೆ ಸಿಸಿ ರಸ್ತೆಗಳನ್ನು ಆದಷ್ಟು ಬೇಗನೇ ಕಾಮಗಾರಿ ಹಮ್ಮಿಕೊಳ್ಳುವುದು. ಗ್ರಾಮದ ಯುವಕರಿಗೆ ಜ್ಞಾನಾರ್ಜನೆಗೆ ಅವಶ್ಯವಿರುವ ಗ್ರಂಥಾಲಯ ನಿರ್ವಹಣೆ ಮಾಡಬೇಕು. ಗ್ರಾಮವನ್ನು ಸ್ವಚ್ಚಂದವಾಗಿ ಇಟ್ಟುಕೊಳ್ಳಲು ಗ್ರಾಮ ಪಂಚಾಯತಿಯಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳೆಯರು ಬಯಲು ಶೌಚಕ್ಕೆ ಹೋಗುತ್ತಿದ್ದು, ಗ್ರಾಮದ ರಸ್ತೆಗಳ ತುಂಬಾ ಗಲೀಜು ಕಂಡುಬರುತ್ತಿದ್ದು, ಮೂಗು ಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರಿಗೆ ಸಮುದಾಯ ಶೌಚಾಲಯ ಅತ್ಯಅವಶ್ಯಕವಾಗಿದ್ದು ಆದಷ್ಟು ಬೇಗನೇ ನಿರ್ಮಾಣ ಮಾಡಬೇಕು. ಗ್ರಾಮದ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ವಿಳಂಬ ನೀತಿ ಅನುಸರಿದರೇ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ತಾಲೂಕಾ ಪಂಚಾಯತಿ ಕಾರ್ಯಾಲಯದ ಮುಂದೇ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷ ಪ್ರದೀಪ ಬೇವಿನಕಟ್ಟಿ, ಉಪಾಧ್ಯಕ್ಷ ಮಹೇಶ ಹರತಾಳ, ಗಂಗವ್ವ ಅಂಗಡಿ, ಸುನೀಲ ಮಂಡಣ್ಣನವರ, ಬಸವರಾಜ ಮಂಡಣ್ಣನವರ, ಬಸವರಾಜ ನರಗುಂದ, ಮೌನೇಶ ಪಾಟೀಲ, ಸತೀಶ ದಾಸರ, ವೀರೇಶ ಅಂಗಡಿ, ಮಂಜುನಾಥ ಅದ್ರಕಟ್ಟಿ, ಶಿವರಾಜ ಭಂಡಾರಿ, ನಿಂಗಯ್ಯ ಮಠಪತಿ, ರಾಜು ಲಕ್ಷ್ಮೇಶ್ವರ ಸೇರದಂತೆ ಗ್ರಾಮದ ಅನೇಕ ಹಿರಿಯರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *

You May Also Like

ಕೊರೊನಾ ಪಾಸಿಟಿವ್ – ಜೆಡಿಎಸ್ ನಾಯಕನ ಹೈಡ್ರಾಮಾ!

ಮಂಡ್ಯ : ಜೆಡಿಎಸ್ ಮುಖಂಡರೊಬ್ಬರಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಆಸ್ಪತ್ರೆಗೆ ಹೋಗಲು ಕಿರಿಕ್ ಮಾಡಿರುವ ಘಟನೆ…

ಪೆಟ್ರೋಲ್ ಟ್ಯಾಕ್ಸ ಇಳಿಸಿದ ಸರ್ಕಾರ

ಪೆಟ್ರೋಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡು ಪ್ರತಿ ಲೀ. ದರ 100 ರು ಗಡಿ ದಾಟಿದ್ದು, ವಾಹನ ಸವಾರರ ಆಕ್ರೋಶಕ್ಕೆ ಮಣಿದ ರಾಜಸ್ಥಾನ ಸರ್ಕಾರವು ತೆರಿಗೆ ಇಳಿಕೆ ಮಾಡಿದೆ.

ರೈಲು ಹಳಿಗೆ ತಲೆ ಕೊಟ್ಟು ಗದಗ ಜಿಲ್ಲೆ ಯುವಕ ಯಲವಿಗಿಯಲ್ಲಿ ಆತ್ಮಹತ್ಯೆ

ಹುಬ್ಬಳ್ಳಿ: ರೈಲ್ವೆ ಹಳಿಗೆ ತೆಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವಣೂರು ತಾಲೂಕಿನ ಯಲವಿಗಿಯಲ್ಲಿ ನಡೆದಿದೆ.…

ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ ಸಭೆಯಲ್ಲಿ ನೀಡಿದ ಸೂಚನೆಗಳು

ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ 9 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲೆಗಳ ವಿವಿಧ ಅಧಿಕಾರಿಗಳು, ಎಸ್ ಪಿಗಳ ಜೊತೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.