ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಕನಾ೯ಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಮಹಿಳಾ ಘಟಕವೊಂದು ನೂತನವಾಗಿ ಇಲ್ಲಿ ಆಸ್ತಿತ್ವಕ್ಕೆ ಬಂದಿದೆ. ಈರಯ್ಯ ಸಾಲಿಮಠ ಸಾನ್ನಿಧ್ಯ ಹಾಗು ರವಿ ಕೋತಿನ ಅಧ್ಯಕ್ಷತೆಯಲ್ಲಿ ಶನಿವಾರ ಆಸ್ತಿತ್ವಕ್ಕೆ ಬಂದ ಮಹಿಳಾ ಘಟಕ ಆಲಮಟ್ಟಿ ಶಾಖೆಯ ಉದ್ಘಾಟನೆ ನೆರವೇರಿತು. ಮಾಧುರಾಯನಗೌಡ ಪಾಟೀಲ, ಮಲ್ಲಯ್ಯ ನಾಗೂರಮಠ, ಯಲಗೂರದಪ್ಪ ಹುಗ್ಗಿ, ವೆಂಕಟೇಶ ವಡ್ಡರ, ಸರಸ್ವತಿ ವಸ್ತ್ರದ,ರೇಣುಕಾ ಕಾರಿ, ಸುಮಿತ್ರಾ ಗಣಿ, ಬಿಬಿಜಾನ್ ವಾಲಿಕಾರ ಮತ್ತಿತರರು ಅತಿಥಿಗಳಾಗಿದ್ದರು.

ಹೊಸದಾಗಿ ರಚಿತವಾಗಿರುವ ಈ ಮಹಿಳಾ ಘಟಕದ ಸದಸ್ಯರು ಕ್ರಿಯಾಶೀಲರಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕು. ಅನ್ನದಾತ ರೈತರ ಕುರಿತಾದ ಸಮಸ್ಯೆಗಳು ಉದ್ಬವಿಸಿದಾಗ ಹೋರಾಟಪರ ಗಟ್ಟಿ ಧ್ವನಿ ಎತ್ತಿ ನ್ಯಾಯ ದೊರಕಿಸಲು ಪ್ರಯತ್ನಿಸಬೇಕು ಎಂದು ನೂತನ ಪದಾಧಿಕಾರಿಗಳಿಗೆ ನಿಡಗುಂದಿ ರೈತ ಸಂಘ, ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಸೀತಪ್ಪ ಗಣಿ ಸಲಹೆ ನೀಡಿದರು.

ರವಿ ಕೋತಿನ, ಮಾದುರಾಯಗೌಡ ಪಾಟೀಲ, ಮಾನಸಿಂಗ್ ಲಮಾಣಿ, ಶೇಖಪ್ಪ ಕೋಳ್ಳಾರ, ರಮೇಶ ವಡ್ಡರ , ಮಂಜು ವಿಶ್ವರ, ರಾಜು ಎಲಿಗಾರ ಉಪಸ್ಥಿತರಿದ್ದರು.

ಪದಾಧಿಕಾರಿಗಳು: ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಆಲಮಟ್ಟಿ ಹೊಸ ಶಾಖೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಕಸ್ತೂರಿ ವಡ್ಡರ, ಪ್ರಧಾನ ಕಾರ್ಯದರ್ಶಿಯಾಗಿ ಸುವಣಾ೯ ಬೇನಸೂರ, ಕೋಶ್ಯಾಧ್ಯಕ್ಷರಾಗಿ ಹಣಮವ್ವ ವಡ್ಡರ, ಸಂಘಟನಾಧ್ಯಕ್ಷರಾಗಿ ಪುಳಿಯವ್ವ ವಡ್ಡರ ನೇಮಕ ಮಾಡಲಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಸೀತಪ್ಪ ಗಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೂ ಕೊರೋನಾ ಭೀತಿ..!

ಗದಗ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೂ ಕೊರೋನಾ ಭೀತಿ..! ಗದಗ: ಪಕ್ಕದ ಬಾಗಲಕೋಟೆ ಜಿಲ್ಲೆಯಿಂದ ಗದಗ ಜಿಲ್ಲೆಯ…

ಹೊಗಳು ಭಟ್ಟರಿಂದ ದೂರವಿರುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ ವಿಶ್ವನಾಥ್!

ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಳ್ಳಿ ಹಕ್ಕಿ ಸಲಹೆ ನೀಡಿದೆ. ಅವರಿಗೆ ಪಕ್ಷದಲ್ಲಿ ಮನ್ನಣೆ ಸಿಗುತ್ತಿಲ್ಲ. ಅವರು ಹೊಗಳು ಭಟ್ಟರಿಂದ ದೂರ ಇರಬೇಕು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣ ಪಂಚಾಯತಿ ಆದೇಶಕ್ಕೂ ಕಿಮ್ಮತ್ತು ನೀಡದ ಹೆಸ್ಕಾಂ…!

ಶಿರಹಟ್ಟಿ ಪಟ್ಟಣದಲ್ಲಿನ 7 ಕಟ್ಟಿಗೆ ಅಡ್ಡೆಗಳದ್ದು ಒಂದೊಂದು ಕಹಾನಿ ಇದೆ. ಆದರೆ ಈ ಕಥೆಯಲ್ಲಿ ಹೆಸ್ಕಾಂ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ 7 ಜನ ಅವಿರೋಧ ಆಯ್ಕೆ: 167 ಸ್ಥಾನಗಳಿಗೆ ಚುನಾವಣೆ

ತಾಲ್ಲೂಕಿನಲ್ಲಿ ಗ್ರಾಮ ಪಂಚಾಯ್ತಿಗಳ ಚುನಾವಣಾ ಕಣ ರಂಗೇರುತ್ತಿದೆ. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು.