ಮುಂಡರಗಿ: ತಾಲೂಕಿನ ಹಾರೊಗೇರಿ ಗ್ರಾಮದಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮೌಲ್ಯದ ಶೇಂಗಾ ಹೊಟ್ಟಿನ ಬಣವಿಗೆ ದುಷ್ಕರ್ಮಿಗಳಿಂದ ಬೆಂಕಿ.

ಹಾರೊಗೇರಿ ಗ್ರಾಮದ ಶಾಂತಗೌಡ ಹಾಳಕೇರಿ ಎಂಬುವರಿಗೆ ಸಂಬಂಧಪಟ್ಟ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಮೌಲ್ಯದ ಶೇಂಗಾ ಹೊಟ್ಟಿನ ಬಣವಿಗೆ ಇಂದು ರಾತ್ರಿ 8 ಘಂಟೆಯ ಸುಮಾರು ದುಷ್ಕರ್ಮಿಗಳು ಉದ್ದೇಶ ಪೂವ೯ಕ ಬೆಂಕಿ ಹಚ್ಚಿದ್ದು ರೈತನ ಬಾಳಿಗೆ ದಿಕ್ಕಿಲ್ಲದಂತಾಗಿದೆ ಈಗಾಗಲೇ ಹದಿನೈದು ದಿನಗಳ ಹಿಂದೆ ಇವರದೆ ಎತ್ತಿನ ಗುಡಿಸಲಿಗೆ ಬೆಂಕಿ ಹಚ್ಚಿದ್ದು ಎತ್ತುಗಳಿಗೆ ಗಾಯವಾಗಿದೆ ಇದರಿಂದ ಚೆತರಿಸುಕೊಳ್ಳಬೆಕೇಂಬ ಸಮಯದಲ್ಲಿ ಬಣವಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ಕಣ್ಣಿರಿಟ್ಟರು.ನಂತರ ಮುಂಡರಗಿ ತಾಲೂಕಿನ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂಂದಿಸಿದರು ಆಗಲೇ ಪೂರ್ತಿ ಬಣವೆ ಅಗ್ನಗೆ ಆಹುತಿಯಾಗಿದೆ
ಮೂಕ ಪ್ರಾಣಿಗಳ ಮೇಲೆ ಬೆಂಕಿ ಹಚ್ಚಿದ್ದು ಅಲ್ಲದೆ ಈಗ ಪ್ರಾಣಿಗಳ ಹೊಟ್ಟೆಗೆ ಹಾಕಬೆಕ್ಕಿದ್ದ ಬಣವಿಗೆ ಬೆಂಕಿ ಹಚ್ಚಿದ್ದು ಗ್ರಾಮಸ್ಥರ ಮನದಲಿ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ