ಉತ್ತರಪ್ರಭ
ಗದಗ:ದಿನಾಂಕ: 19.02.2022 ರಂದು ಶಿವಾಜಿ ಮಹಾರಾಜರ ಜಯಂತಿಯನ್ನು ಮುನ್ಸಿಪಲ್ ಹೈ-ಸ್ಕೂಲ್ ಮೈದಾನದಲ್ಲಿ ಆಚರಿಸಲು ಷರತ್ತು ಬದ್ದ ಅನುಮತಿಯನ್ನು ನೀಡಿದೆ.
ರಾಜ್ಯದಲ್ಲಿ ಓಮಿಕ್ರಾನ್ ಕೋವಿಡ್ ರೂಪಾಂತರಿ ವೈರಾಣು ಹರಡುವಿಕೆಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 2022ನೇ ಜನವರಿ, ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಆಚರಿಸಲ್ಪಡುವ ಜಯಂತಿಗಳನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡಲು ಸರಕಾರದ ನಿರ್ದೇಶನವಿರುತ್ತದೆ.
ಅದರಂತೆ, ಓಮಿಕ್ರಾನ್ ಕೋವಿಡ್ ರೂಪಾಂತರಿ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಸರಕಾರವು ಜ್ಯಾರಿಗೊಳಿಸಿದ ಮಾರ್ಗಸೂಚಿಗಳನ್ವಯ ರಾಜ್ಯಾದ್ಯಂತ ಎಲ್ಲ ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಷ್ಕರಗಳು, ಮರವಣಿಗೆಗಳು ಒಳಗೊಂಡಂತೆ ಎಲ್ಲ ರೀತಿಯ ಜನರ ಒಗ್ಗೂಡುವಿಕೆಯನ್ನು ನಿರ್ಬಂಧಿಸಲಾಗಿರುತ್ತದೆ.
ದಿನಾಂಕ: 19-02-2022 ರಂದು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಗದಗ ನಗರದ ಮುನ್ಸಿಪಲ್ ಹೈ-ಸ್ಕೂಲ್ ಮೈದಾನದಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲು ಈ ಕೆಳಗಿನ ಷರತ್ತುಗಳನ್ನು ವಿಧಿಸಿ, ಷರತ್ತುಬದ್ಧ ಅನುಮತಿ ನೀಡಿದೆ.

  1. ಕಾಲೇಜಿನ ಆಡಳಿತ ಮಂಡಳಿ / ಕಾಲೇಜಿನ ಸ್ಥಾಯಿ ಸಮಿತಿಯವರಿಂದ ಕಾರ್ಯಕ್ರಮವನ್ನು ನಡೆಸಲು ಅನುಮತಿಯನ್ನು ಪಡೆದುಕೊಳ್ಳುವುದು,
  2. ಸಂಚಾರ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು.
  3. ಕಾರ್ಯಕ್ರಮ ಸ್ಥಳದಲ್ಲಿ ಡಿಜಿ ಮತ್ತು ಇನ್ನಿತರ ಕರ್ಕಶ ಶಬ್ದವಿರುವ ಸೌಂಡ್ ಸಿಸ್ಟಮ್ ಉಪಯೋಗಿಸಲು ಅವಕಾಶವಿಲ್ಲ. ಪೊಲೀಸ್ ಇಲಾಖೆಯಿಂದ ಧ್ವನಿವರ್ಧಕ ಪರವಾನಿಗೆಯನ್ನು ಪಡೆದುಕೊಂಡು ಬಳಸುವುದು.
  4. ಕಾರ್ಯಕ್ರಮವನ್ನು ರಾತ್ರಿ 10:00 ಗಂಟೆಯೊಳಗಾಗಿ ಮುಕ್ತಾಯಗೊಳಿಸುವುದು.
  5. ಜಯಂತಿಯ ಆಚರಣೆ ಕಾರ್ಯಕ್ರಮದ ವೇಳೆಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ಭಾಷಣ ಮಾಡುವ ಯಾವುದೇ ಪ್ರಚೋದನಕಾರಿ ಭಾಷಣಕಾರರಿಗೆ ಅವಕಾಶ ಇರುವುದಿಲ್ಲ.
  6. ಕಾರ್ಯಕ್ರಮದ ಕಾಲಕ್ಕೆ ಯಾವುದೇ ರೀತಿ ಆಯುಧ ಮದ್ದು ಸಿಡಿಮದ್ದುಗಳನ್ನು ಬಳಸಲು ಅವಕಾಶವಿಲ್ಲ.
  7. ಸದ್ಯ ಜ್ಯಾರಿಯಲ್ಲಿರುವ ಕೇಂದ್ರ/ರಾಜ್ಯ ಸರಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸತಕ್ಕದ್ದು.
  8. ರಾಜ್ಯದಲ್ಲಿ ಒಮಿಶ್ರಾನ್ ಕೋವಿಡ್ ರೂಪಾಂತರಿ ವೈರಾಣು ಹರಡುವಿಕೆಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸದರಿ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡುವುದು.
    ಮೇಲಿನ ಷರತ್ತುಗಳು ಪಾಲನೆಯಾಗದ ಪಕ್ಷದಲ್ಲಿ ಉದ್ದೇಶಿತ ಕಾರ್ಯಕ್ರಮದ ಸಂಘಟಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ರ ಪ್ರಕಾರ ಹಾಗೂ ಅನ್ವಯಿಸುವ ಕಾನೂನಿನ ಇತರ ಉಪಬಂಧಗಳಡಿ ಕ್ರಮ ಜರುಗಿಸಲಾಗುವುದು ಎಂದು ಅನುಮತಿ ಪತ್ರದಲ್ಲಿ ಷರತ್ತುಗಳನ್ನು ಜಿಲ್ಲಾಡಳಿತ ನೀಡಿದೆ.
Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ ಬಳಿ ಟ್ರ್ಯಾಕ್ಟರ್ ಪಲ್ಟಿ: ಸ್ಥಳದಲ್ಲಿಯೇ ಇಬ್ಬರ ಸಾವು

ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಏಳು ಜನ ಗಾಯ‌ಗೊಂಡ ಘಟನೆ ಲಕ್ಷೇಶ್ವರ ತಾಲೂಕಿನ ಗುಂಜಳ ರಸ್ತೆಯಲ್ಲಿ ನಡೆದಿದೆ.

ಆಲಮಟ್ಟಿ ಗಾರ್ಡನ್ ದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟನೆ

ಆಲಮಟ್ಟಿ : ಇಲ್ಲಿನ ಬಹು ವೈವಿಧ್ಯಮಯ ನಾನಾ ಬಗೆಯ ಉದ್ಯಾನವನಗಳ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ…

ಫೆ. 24ರಿಂದ ಮುಳಗುಂದ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ

ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದದ ಕಾರಣಿಕ ಶಿಶು ಬಾಲಲೀಲಾ ಮಹಾಂತ ಶಿವಯೋಗಿಗಳ 162 ನೇ ಸ್ಮರಣೋತ್ಸವದಂಗವಾಗಿ ಇದೇ ಫೆ 24 ರಿಂದ 26 ವರೆಗೆ ಗವಿಮಠಾಧ್ಯಕ್ಷರಾದ ಮಲ್ಲಿಕಾರ್ಜುನ ಶ್ರೀಗಳ ನೇತ್ರತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ, ಎಂದು ಜಾತ್ರಾ ಸಮಿತಿ ಅಧ್ಯಕ್ಷ ಸಂಜಯ ನೀಲಗುಂದ ಹೇಳಿದರು.