ಗದಗ: ಬಗರಹೂಕುಮ ಸಾಗುವಳಿದಾರರಿಗೆ ಅರಣ್ಯ ಇಲಾಖೆ ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ ಕೊಡುತ್ತಾ ಬಂದಿದೆ.ಅದರಲ್ಲೂ ಮುಂಡರಗಿ ವ್ಯಾಪ್ತಿಯಲ್ಲಿ ಬರುವ ಬಗರ ಹೂಕುಮ ಸಾಗುವಳಿದಾರರಿಗೆ ಅರಣ್ಯ ಇಲಾಖೆ ಕೊಡುತ್ತಿರುವ ಕಿರುಕುಳಕ್ಕೆ ಜನರು ಬೆಸತ್ತು ಹೋಗಿದ್ದಾರೆ.
ಯಾವ ಜನ ಕಪ್ಪತ್ತಗುಡ್ಡವನ್ನು ಉಳಿಸಿದ್ದಾರೆ ಅವರಿಗೆ ಅನ್ಯಾಯ ಮಾಡುವ ನಿಟ್ಟಿನಲ್ಲಿ ಹೊರಟ ಅರಣ್ಯ ಇಲಾಖೆಯ ನಡೆಗೆ ಹಿಡಿಶಾಪಹಾಕುತ್ತಿದ್ದಾರೆ.
ಮುಂಡರಗಿ ತಾಲೂಕಿನ ಶಿಂಗಟರಾಯನ ಕೆರೆ ತಾಂಡಾದಲ್ಲಿ ತಲೆತಲಾಂತರದಿಂದ ಜಮೀನನ್ನು ಉಳುಮೆ ಮಾಡುತ್ತಾ ಬಂದಿದ್ದ ಹಾಮೇಶ ರಾಮಪ್ಪ ಚವ್ಹಾಣ ಇವರ ಜಮೀನಿಗೆ ತಂತಿ ಬೇಲಿ ಹಾಕಲು ಬಂದಿದ್ದ ಮುಂಡರಗಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಪರಿಪರಿಯಾಗಿ ಮಹಿಳೆಯರು ಮಕ್ಕಳು ಬೇಡಿಕೊಂಡರು ಅವರ ಮೇಲೆ ದೌರ್ಜನ್ಯ ಮಾಡಿ ಬೇಲಿ ಹಾಕಲು ಯತ್ನಿಸಿದ ಪರಿಣಾಮ ಅದರಿಂದ ಮನನೊಂದು ಸೊನವ್ವ ರಾಮಜಿ ಕಾರಭಾರಿ ಇಂದು ನಿಧನ ಹೊಂದಿದ್ದಾರೆ ಎಂದು ಸ್ಥಳೀಯರಿಂದ ತಿಳಿದುಬಂದಿದೆ.
ಅರಣ್ಯ ಇಲಾಖೆಯು ಯಾರು ಬಡವರಿದ್ದಾರೆ, ನಿರ್ಗತಿಕರಿದ್ದಾರೆ ತಮ್ಮ ತುತ್ತಿನ ಚೀಲವನ್ನು ತುಂಬೋಗೋಸ್ಕರ ಅರಣ್ಯಭೂಮಿ ಮೇಲೆ ಅವಲಂಭಿತರಾಗಿದ್ದಾರೆ ಅವರನ್ನೆ ಶೋಷಣೆ ಮಾಡುತ್ತಾ ಬಂದಿದೆ ಎನ್ನುವುದಕ್ಕೆ ಇದೋಂದು ತಾಜಾ ಉದಾಹರಣೆ ಎನ್ನಬಹುದು.
ಅರಣ್ಯ ಇಲಾಖೆಯ ಈ ಕ್ರಮಕ್ಕೆ ಜನರು ಬೆಸತ್ತು ಹೋಗಿದ್ದಾರೆ ಮ್ರತ ಮಹಿಳೆಯ ಶವವನ್ನು ಇಟ್ಟು ನ್ಯಾಯ ಸಿಗುವವರೆಗೆ ಪ್ರತಿಭಟನೆ ಮುಂದುವರೆಯುತ್ತದೆಂದು ತಿಳಿದು ಬಂದಿದೆ. ಈಗಲಾದರು ಅರಣ್ಯ ಇಲಾಖೆಯು ಬಗರಹುಕೂಮ ಸಾಗುವಳಿದಾರರಿಗೆ ನೆಮ್ಮದಿಯಿಂದ ಜೀವನ ನಡೆಸಲು ಅನೂವು ಮಾಡಿಕೊಡಬೇಕಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಟ್ರಾಕ್ಟರ್ ಮತ್ತು ಕಾರು ಮುಖಾಮುಖಿ :ಟ್ರಾಕ್ಟರ್ ಪಿಸ್ ಪಿಸ್..!

ಉತ್ತರಪ್ರಭಗದಗ:ಟ್ರ್ಯಾಕ್ಟರ್ ಮತ್ತು ಕಾರ ನಡುವೆ ಮುಖಾಮುಖಿ ನಡೆದು ಟ್ರ್ಯಾಕ್ಟರ್ ತುಂಡಾದ ಘಟನೆ ಗದಗ ಸಮೀಪದ ಚಿಕ್ಕಟ್ಟಿ…

ಲಾಕ್ ಡೌನ್ ನಿಂದಾಗಿ ಹಣ ಕಳೆದುಕೊಂಡವರಿಗೆ ಸಿಕ್ಕ ನೆಮ್ಮದಿ!

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ರೂ. 10 ಸಾವಿರಗಳನ್ನು ಹಿಂದಿರುಗಿಸುವ ಮೂಲಕ…

ಶಿಕ್ಷಕರಿಗೆ ರಜೆ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಿಎಂ!

ಬೆಂಗಳೂರು : ರಾಜ್ಯ ಸರ್ಕಾರ, ಶಿಕ್ಷಕರಿಗೆ ಮಧ್ಯಂತರ ರಜೆ ನೀಡಿದ್ದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.