ಉತ್ತರಪ್ರಭ

ಗದಗ: ಪ್ರವಾಸೋದ್ಯಮ ಇಲಾಖೆಯಿಂದ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಕಾಯ್ದೆ-2015 ಜಾರಿಯಲ್ಲಿದ್ದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಗಳು ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ನೀಡುವ ರಿಯಾಯತಿಗಳನ್ನು (ತೆರಿಗೆ) ಪಡೆಯಲು ಕೆಟಿಟಿಎಫ್ ನೊಂದಣಿ ಕಡ್ಡಾಯವಾಗಿರುತ್ತದೆ. ಗದಗ ಜಿಲ್ಲೆಯ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ, ಟ್ರಾವೆಲ್ಸ್ ಏಜೆನ್ಸಿ ಮತ್ತು ಟೂರ್ ಆಪರೇಟರ್‌ಗಳು ಮನರಂಜನಾ ಪಾರ್ಕ ಹಾಗೂ ಇತರೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು https://kttfkarnatakatourism.org/  ಅಥವಾ https://www.karantakatourism.org ವೆಬ್‌ಸೈಟ್ ಗೆ ಭೇಟಿ ನೀಡಿ ತಮ್ಮ ಸಂಸ್ಥೆ ಉದ್ಯಮವನ್ನು ನೋಂದಣಿ ಮಾಡಬೇಕಾಗಿದೆ.

ಈಗಾಗಲೇ ಪ್ರವಾಸೋದ್ಯಮ ಇಲಾಖೆಯಲ್ಲಿ ಅನುಮೋದನೆ ಪಡೆದ ಹೋಟೆಲ್ ಮತ್ತು ರೆಸ್ಟಾರ್ಟಗಳು ಸಹ ಕೆ.ಟಿ.ಟಿ.ಎಫ್ ನೋಂದಣಿ ಮಾಡಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೊನಾ ವಾರಿಯರ್ಸ್ ಗೆ ಸಿಗದ ಸಂಬಳ!

ಕೊರೊನಾ ವಿರುದ್ಧ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹೋರಾಡುತ್ತಿದ್ದಾರೆ. ಆದರೆ, ಇವರ ಸಂಬಳಕ್ಕೆ ಕತ್ತರಿ ಹಾಕಿರುವುದು ಬೆಳಕಿಗೆ ಬಂದಿದೆ.

ಮಕ್ಕಳಲ್ಲಿ ಸೋಂಕಿನ ಪ್ರಮಾಣ ಆಧರಿಸಿ ಶಾಲೆಗಳಿಗೆ ರಜೆ ಘೋಷಿಸಲು ತೀರ್ಮಾನ

ಗದಗ:ಜಿಲ್ಲಾದ್ಯಂತ ಕೋವಿಡ್ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಸೋಂಕು ತಗಲುವಿಕೆಯ ಪ್ರಮಾಣ…

ರಾಜ್ಯದಲ್ಲಿಂದು 1105 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 1105 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 14295 ಕ್ಕೆ ಏರಿಕೆಯಾದಂತಾಗಿದೆ.

11 ಎಕರೆ ಹೊಲದಾನ್ ಗೋವಿನ ಜೋಳ ಬೆಂಕಿಗೆ ಆಹುತಿ!

ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳ ಸುಟ್ಟು ಭಸ್ಮಗೊಂಡ ಘಟನೆ ಗದಗ ಜಿಲ್ಲೆಯ ನಾಗಾವಿ ತಾಂಡಾದಲ್ಲಿ ನಡೆದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ನಾಶವಾಗಿದೆ. ಲಕ್ಷ್ಮಣ್ ಪವಾರ್ ಎಂಬುವರಿಗೆ ಸೇರಿದ 11 ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಂದಾಜು 2.5 ಲಕ್ಷ ರೂ. ಮೌಲ್ಯದ ಬೆಳೆ ನಾಶವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದಿಸಲು ಪ್ರಯತ್ನಿಸಿದರು.