ಸಾಮಾನ್ಯವಾಗಿ ವೈದ್ಯ, ವಕೀಲ, ಪೋಲೀಸ ಮೊದಲಾದ ಒತ್ತಡಭರಿತ ವೃತ್ತಿಯಲ್ಲಿ ಇರುವವರು ಕಥೆ, ಕಾದಂಬರಿ, ಕವಿತೆ, ನಾಟಕ, ಸಂಗೀತ, ಸಾಹಿತ್ಯ ಮೊದಲಾದವುಗಳಿಂದ ದೂರವಿರುತ್ತಾರೆ. ದೈನಂದಿನ ವೃತ್ತಿಯ ಒತ್ತಡ ಹಾಗೂ ಮತ್ತಿತರ ಕಾರಣಗಳಿಂದ ಸಾಹಿತ್ಯಾಭ್ಯಾಸದಿಂದ ದೂರವಿರುತ್ತಾರೆ ಅಥವಾ ಸಾಹಿತ್ಯವನ್ನು ಕಡೆಗಣಿಸಿರುತ್ತಾರೆ.

ಮುಂಡರಗಿ ನಗರದಲ್ಲಿ ಅನ್ನದಾನೀಶ್ವರ ಆಸ್ಪತ್ರೆಯನ್ನು ತೆರೆದು ಕಳೆದ ನಲವತ್ತು ವರ್ಷಗಳಿಂದ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಡಾ.ವಿ.ಕೆ.ಸಂಕನಗೌಡರ ಅವರು ತಾಲ್ಲೂಕಿನ ಒಬ್ಬ ಶ್ರೇಷ್ಟ ವೈದ್ಯರಾಗಿರುವುದರ ಜೊತೆಗೆ ಒಬ್ಬ ಶ್ರೇಷ್ಠ ಸಾಹಿತಿಗಳು ಆಗಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ತಮ್ಮ ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯ ಸೇವೆಯನ್ನೂ ಮಾಡುತ್ತಾ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನರೆಗಲ್ಲ ಗ್ರಾಮದ ಕಳಕನಗೌಡರ ಹಾಗೂ ಪಾರ್ವತಿ ಅವರ ಉದರದಲ್ಲಿ 5.8.1954 ರಂದು ಜನಿಸಿದ ಡಾ.ವಿ.ಕೆ.ಸಂಕನಗೌಡರ ಅವರು ತಮ್ಮ ಉನ್ನತ ವ್ಯಾಸಂಗವನ್ನು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಪೂರ್ಣಗೊಳಿಸಿದರು. ತಮ್ಮ ಇಷ್ಟದ ಗಣಿತಶಾಸ್ತçದ ಜೊತೆಗೆ ವಿಜ್ಞಾನ ವಿಷಯಗಳಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಡಾ.ಸಂಕನಗೌಡರ ಅವರು ಸಾಹಿತ್ಯದಲ್ಲಿಯೂ ಆಸಕ್ತಿ ಹೊಂದಿದ್ದರು. ಕಳೆದ ನಲವತ್ತು ವರ್ಷಗಳಿಂದ ಮಡದಿ-ಮಕ್ಕಳು ಹಾಗೂ ಬಂಧು-ಬಳಗದವರೊAದಿಗೆ ನೆಮ್ಮದಿಯ ಕೌಟುಂಬಿಕ ಜೀವನ ನಿರ್ವಹಿಸುತ್ತಿರುವ ಡಾ.ಸಂಕನಗೌಡರ ಅವರು ಸದಾ ಹಸ್ಮುಖಿ ಹಾಗೂ ವಿನೋದ ಪ್ರಿಯರು.

ಬಾಲ್ಯದಿಂದಲೂ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಸುಧಾ, ಮಯೂರ ಮೊದಲಾದ ಪತ್ರಿಕೆಗಳನ್ನು ಓದುತ್ತಾ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡಿರುವ ಡಾ.ಸಂಕನಗೌಡ ಅವರು ಈಗಲೂ ನಿಯಮಿತವಾಗಿ ಸಾಹಿತ್ಯ ಅಧ್ಯಯನ ಮಾಡುತ್ತಿದ್ದಾರೆ.

ಇತ್ತೀಚಿನ ಹಲವು ವರ್ಷಗಳಲ್ಲಿ ಪ್ರತಿನಿತ್ಯ ರಾತ್ರಿ ತಪ್ಪದೆ ಕವಿತೆ ಬರೆದು ವಾಟ್ಸಅಪ್ ಗ್ರೂಪ್ಪಿಗೆ ಕಳುಹಿಸುವುದು ಅವರ ದೈನಂದಿನ ಹವ್ಯಾಸವಾಗಿದೆ. ಪಟ್ಟಣದ ಉತ್ತಮ ಸಂಘಟನಾಕಾರರು, ಸಾಹಿತಿಗಳು, ಶಿಕ್ಷಣ ತಜ್ಞರಾದ ಭಾಗ್ಯಲಕ್ಷ್ಮೀ ಇನಾಮತಿ ಅವರು ಆರು ವರ್ಷಗಳ ಹಿಂದೆ ಮೊಬೈಲಿನಲ್ಲಿ ‘ಸಾಹಿತ್ಯ ಲೋಕ’ ಎಂಬ ಸಾಹಿತ್ಯಾಸಕ್ತರ ಒಂದು ವಾಟ್ಸಾಪ್ ಗ್ರುಪ್ ಪ್ರಾರಂಭಿಸಿದ್ದರು. ಡಾ.ಸಂಕನಗೌಡರ ಅವರು ಪ್ರತಿನಿತ್ಯ ಅದರಲ್ಲಿ ಒಂದು ಸುಂದರ ಕವಿತೆಯನ್ನು ಬರೆದು ಅದರಲ್ಲಿ ಹಾಕತೊಡಗಿದರು. ಅಂದಿನಿAದ ಡಾ.ಸಂಕನಗೌಡರ ಅವರಿಗೆ ಜಿಲ್ಲೆಯಾಧ್ಯಂತ ಸಾವಿರಾರು ಓದುಗರು ಹುಟ್ಟಿಕೊಂಡರು.

ಡಾ.ವಿ.ಕೆ. ಸಂಕನಗೌಡ ಅವರು ಬರೆದ ಹಲವಾರು ಕವಿತೆಗಳು ಈಗಲೂ ನಾಡಿನ ಪ್ರಖ್ಯಾತ ದಿನ, ವಾರ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲಿವೆ. ವೈದ್ಯ ವೃತ್ತಿಯ ಒತ್ತಡದ ನಡುವೆಯೂ ಅವರು  ಸಾವಿರಾರು ಕವಿತೆಗಳನ್ನು ಬರೆದಿದ್ದಾರೆ. ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಲವಾರು ಕವಿತೆಗಳು ಪ್ರಕಟಗೊಳ್ಳುತ್ತಲಿವೆ.  ಇದೇ ಫೆಬ್ರವರಿ ೨೮ರಂದು ಅವರ ಪ್ರಥಮ ಕವನ ಸಂಕಲನ ‘ಅಪ್ಪನ ಕೊಡೆ’ ಬಿಡುಗಡೆಯಾಗುತ್ತಲಿದೆ.

ಡಾ.ವಿ.ಕೆ.ಸಂಕನಗೌಡರ ಅವರು ನಾಡಿನ ಒಬ್ಬ ಉತ್ತಮ ವೈದ್ಯರಾಗಿದ್ದು, ನಿತ್ಯ ನೂರಾರು ಜನರ ರೋಗಗಳನ್ನು ಗುಣಪಡಿಸುತ್ತಿದ್ದಾರೆ. ಅದರ ಜೊತೆಗೆ ಉತ್ತಮ ಕವನಗಳನ್ನು ಬರೆಯುತ್ತಿರುತ್ತಾರೆ.  ಅವರ ಪ್ರಥಮ ಕವನ ಸಂಕಲನ ಅಪ್ಪನ ಕೊಡೆ ಬಿಡುಗಡೆಗೊಳ್ಳುತ್ತಿದೆ. ಅವರು ಇನ್ನೂ ಹೆಚ್ಚಿನ ಸಾಹಿತ್ಯ ಸೇವೆ ದೊರೆಯಬೇಕು ಎಂದು ನಿವೃತ ಉಪನ್ಯಾಸಕ ಆರ್.ಎಲ್.ಪೊಲೀಸಪಾಟೀಲ ತಿಳಿಸಿದರು.

ಭಾಗ್ಯಲಕ್ಷ್ಮೀ ಇನಾಮತಿ

ಶಿಕ್ಷಕ ಸಾಹಿತಿ ಹಾಗೂ ಸಂಚಾಲಕರು ಸಾಹಿತ್ಯ ಲೋಕ

Leave a Reply

Your email address will not be published. Required fields are marked *

You May Also Like

ಸಿಲಿಂಡರ್ ಸ್ಫೋಟ: ಇಬ್ಬರಿಗೆ ಸಣ್ಣದಾಗಿ ಗಾಯ

ಪಟ್ಟಣದ 11 ನೆಯ ವಾರ್ಡ್ ನ ಕುಷ್ಠಗಿಯವರ ಓಣಿಯಲ್ಲಿ ರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ ಹಾಗೂ ಮನೆ ಕುಸಿದಿರುವ ಘಟನೆ ನಡೆದಿದೆ.

ಕೂತುಹಲ ಕೆರಳಿಸಿದ ಸಿದ್ದರಾಮಯ್ಯ ದೆಹಲಿ ಬೇಟಿ

ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಿಢೀರ್‌ ದೆಹಲಿ ಭೇಟಿಗೆ ಮುಂದಾಗಿದ್ದಾರೆ.