ಚಿತ್ರ ವರದಿ : ಗುಲಾಬಚಂದ ಆರ್.ಜಾಧವ

ಆಲಮಟ್ಟಿ :(ವಿಜಯಪುರ ಜಿಲ್ಲೆ) ಬೆಳ್ಳಂ ಬೆಳಿಗ್ಗೆ ತಂಪಾಗಿ ಸೂಸಿ ಬರುತ್ತಿದ್ದ ಚುಮ್ ಚುಮ್ ಚಳಿಯಲ್ಲಿ ಡೊಳ್ಳಿನ ನಿನಾದದ ಸದ್ದು ಜೋರಿತ್ತು ! ಈ ಹಲಿಗೆ, ಡೊಳ್ಳು ಕಂಪಿನ ರಾಗತಾಳಕ್ಕೆ ಹೆಜ್ಜೆಗೆಜ್ಜೆ ಬಳೆಗಳ ಗಲ್ಲಗಲ್ಲ ಸಪ್ಪಳದ ಕಂಪನವೂ ಪರಿಮಳಿಸಿತ್ತು ! ಈ ಹಿತಕರ ಕೂಲ್ ತಂಪಿನಲ್ಲಿ ಗಡಗಡ ಸರಸರ ಪಾದಸ್ಪರ್ಶಗಳ ಸಂಚಲನವೂ ಧೂಳೆಬ್ಬಿಸುತ್ತಾ ಝೇಂಕರಿಸಿತ್ತು ! ಸಂಭ್ರಮೋಲ್ಲಾಸದಿಂದ ಮೆಲ್ಲಗೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಸಹಸ್ರಾರು ಮುತ್ತೈದೆ ಸುಮಂಗಲಿಯರ ಮೊಗಭಾವದಲ್ಲಿ ಸಂಪ್ರೀತಿಯ ಭಕ್ತಿ ಕೃತಜ್ಞತೆ ಅರಳಿ ನಿಂತಿತ್ತು ! ತಲೆ ಮೇಲೆ ಕುಂಭ ಹೊತ್ತು ಜಯಘೋಷದ ಸದ್ದು ಮೊಳಗಿಸಿ ಭಕ್ತಿಯ ಉನ್ಮಾನದ ಸೆಲೆಯಲ್ಲಿ ಲೀನರಾಗಿ ಮಿನುಗಿದ್ದರು ಅವರೆಲ್ಲರು ! ಈ ನಾರಿ ಮಣಿಗಳ ಮೊಗದಲ್ಲಿ ಅಂಬೆಯ ಸಂಪನ್ನಭಾವ ಲೇಪಿಸಿದಂತಾಗಿತ್ತು..! ಇಂಥದೊಂದು ವಿಶೇಷ ವೈಭವೋಪೇತ ಅದ್ದೂರಿ ಭವ್ಯ ನೋಟ ಶನಿವಾರ ಕೃಷ್ಣೆಯ ತಟದಲ್ಲಿ ಅನಾವರಣವಾಗಿತ್ತು!


ಇಲ್ಲಿನ ಚಿಮ್ಮಲಗಿ ಭಾಗ- 1 ಎ ಗ್ರಾಮದಲ್ಲಿರುವ ಕ್ಷತ್ರಿಯ ಸಮಾಜದ ಅಂಬಾಭವಾನಿ ದೇವಿಯ ಜಾತ್ರಾ ಮಹೋತ್ಸವದಂಗವಾಗಿ ಜರುಗಿದ ಮುತ್ತೈದೆಯರ ಕುಂಭ ಮೆರವಣಿಗೆಯ ದೃಶ್ಯ ವೈಭವ ಎಲ್ಲರ ಚಿತ್ತ ಸೆಳೆಯಿತು !
ಅಂಬಾಭವಾನಿ ದೇವಿ ಜಾತ್ರಾ ನಿಮಿತ್ಯ ಅನೇಕ ಧಾಮಿ೯ಕ ಕೈಂಕರ್ಯಗಳು ವಿಜೃಂಭಣೆಯಿಂದ ಸಾಗಿದವು. ಬೆಳಿಗ್ಗೆ ಜಾಗೃತದೇವಿ ಚಂದ್ರಮ್ಮಾ ದೇವಸ್ಥಾನ ಹತ್ತಿರದ ಕೃಷ್ಣಾ ನದಿಯಿಂದ ಅಂಬಾಭವಾನಿ ದೇವಾಲಯದವರೆಗೆ ಸಾಗಿದ್ದ ಕುಂಭ ಮೆರವಣಿಗೆಯಲ್ಲಿ ಅಸಂಖ್ಯ ಮುತ್ತೈದೆ ಭಕ್ತಗಣ ದಾರಿಯುದ್ದಕ್ಕೂ ಜಯಘೋಷ ಹಾಕುತ್ತಾ ಎಲ್ಲೆಲ್ಲೂ ಭಕ್ತಿರಸದ ಪರಾಕಾಷ್ಠೆಯಲ್ಲಿ ಮಿಂದೆದ್ದರು. ಪುನೀತ್ ಭಾವ ತಾಳಿದರು. ಆರಾಧ್ಯ ದೇವಿಗೆ ವಿಶೇಷ ಧಾಮಿ೯ಕ ಪೂಜೆಗಳನ್ನು ಸಲ್ಲಿಸಿ ನಮ್ಯತೆಯ ಧನ್ಯತೆಯಲ್ಲಿ ತೇಲಿದರು.


ಭಕ್ತಿ ಭಾವರಸ ಸಮಪಿ೯ಸಿ ಪೂಜ್ಯತೆ ಮೆರೆದರು.
ಮಹಾಪೂಜೆ, ಪಂಚಾಮೃತ ಅಭಿಷೇಕ್, ಕಳಾಸಾಭಿಷೇಕ್, ಪ್ರಸನ್ನ ಪೂಜಾ, ಸಾಮೂಹಿಕ ಪ್ರಾರ್ಥನೆ, ಶ್ರೀಗುರು ಪೂಜೆ, ಮಹಾಗಣಪತಿ ಪೂಜೆ, ಪುಣ್ಯಾಹವಾಚನೆ, ನಾಂದಿ, ಮಾತೃಕಾ ಪೂಜೆ, ನವಗ್ರಹ ಹೋಮ ಹವನಗಳು, ನವಕ ಪ್ರಧಾನ ಹೋಮ, ದೇವಿಗೆ ಕಳಸಾಭಿಷೇಕ, ಅಲಂಕಾರಿಕ ಪೂಜೆ, ಲಲಿತಾ ಸಹಸ್ರನಾಮ, ಮಹಾಪೂಜೆ, ಅಷ್ಟಾವಧಾನ, ಪ್ರಾರ್ಥನೆ ಹೀಗೆ ನಾನಾ ಧಾಮಿ೯ಕ ವಿಧಿವಿಧಾನಗಳ ಪೂಜಾ ಕಾರ್ಯಗಳು ಶೃದ್ಧಾಪೂರ್ವಕ ಭಕ್ತಿಯಿಂದ ಜರುಗಿದವು. ಜಾತ್ರೆಯಲ್ಲಿ ಭಾಗಿಯಾಗಿ ದೇವಿ ಕೃಪೆಗೆ ಪಾತ್ರರಾದ ಭಕ್ತರಿಗೆಲ್ಲ ಪ್ರಸಾದ ಅನ್ನ ಸಂತರ್ಪಣೆ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.


ಈ ಬಾರಿ ಸಡಗರ ಸಂಭ್ರಮದಿಂದ ಜರುಗಿದ ಅಂಬಾಭವಾನಿ ದೇವಿ ಜಾತ್ರೆಯ ಆರಾಧನಾ ಮಹೋತ್ಸವದಲ್ಲಿ ಅಪಾರ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಳೆದೆರಡು ವರ್ಷದಿಂದ ಜಾತ್ರಾ ಕಳೆ ಇದ್ದಿರಲಿಲ್ಲ.ಬೆಂಬಿಡದೇ ಕಾಡುತ್ತಿರುವ ಕರೋನಾ ಕಾಟದಿಂದ ಉತ್ಸವಕ್ಕೆ ಕಡಿವಾಣ ಹಾಕಲಾಗಿತ್ತು. ಈ ಬಾರಿ ಸೂಕ್ಷ್ಮತೆ ಪಾಲಿಸಿ ಮುಂಜಾಗ್ರತೆ ವಹಿಸಿ ದೇವಿಯ ಆರಾಧನಾ ಉತ್ಸವದಲ್ಲಿ ಭಾಗಿಯಾಗಿ ಕರೋನಾ ಕಂಟಕ ಎಲ್ಲಡೆ ನಿನಾ೯ಮವಾಗಲಿ ಎಂದು ಭಕ್ತರು ಆಶಿಸಿದರು.


ಚಿಮ್ಮಲಗಿ ತಪೋಮಂದಿರದ ಹರಿಶ್ವರ ಹಿರೇಮಠ ಮಾರ್ಗದರ್ಶನದಲ್ಲಿ ನಡೆದ ಜಾತ್ರಾ ಮಹೋತ್ಸವದ ಸಂಪನ್ನತೆಗೆ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರಾದ ಕಾಶೀನಾಥ್ ಮಹೇಂದ್ರಕರ, ನಾಗೇಶ್ ಮಹೇಂದ್ರಕರ, ನರಸಿಂಹ ಮಹೇಂದ್ರಕರ, ತಿಪ್ಪಣ್ಣ ಮಹೇಂದ್ರಕರ, ಬಸಪ್ಪ ಮಹೇಂದ್ರಕರ, ಲಕ್ಷ್ಮಿಕಾಂತ ಮಹೇಂದ್ರಕರ, ರಾಜೇಂದ್ರ ಬೊಮ್ಮಲೇಕರ, ಶಶಿಕಲಾ ಮಹೇಂದ್ರಕರ ಸೇರಿದಂತೆ ಗ್ರಾಮದ ಪ್ರಮುಖರಾದ ಶಿವಾಜಿ ಕಟ್ಟಿಮನಿ, ರವಿ ಕೋತಿನ, ಪ್ರಭು ಕಂಬಾರ, ವಸಂತ ಕಂದಕೂರ,ಗಂಗಾಧರ ಘೋರ್ಪಡೆ ಮೊದಲಾದವರು ಶ್ರಮಿಸಿದರು.

Leave a Reply

Your email address will not be published. Required fields are marked *

You May Also Like

ಪೈಪ್ ಹಾಕಿ ಟ್ಯಾಂಕರ್ ನಿರ್ಮಿಸಿದರೆ ಜವಾಬ್ದಾರಿ ಮುಗಿಯಲ್ಲ

ಸರ್ಕಾರ ಅನೇಕ ಯೋಜನೆಗಳನ್ನು ಅದರಲ್ಲೂ ಮುಖ್ಯವಾಗಿ ನೀರಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಕೇವಲ ಪೈಪ್ ಹಾಕಿ ಟ್ಯಾಂಕರ್ ನಿರ್ಮಿಸಿದರೆ ಇಲಾಖೆಯ ಜವಾಬ್ದಾರಿ ಮುಗಿಯುವುದಿಲ್ಲ. ನೀರು ಸರಬರಾಜು ಆಗುತ್ತದೆಯೋ ಇಲ್ಲೋವೋ ಎನ್ನುವುದನ್ನು ಅಧಿಕಾರಿಗಳು ಮನದಟ್ಟ ಮಾಡಿಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಗುರಿಕಾರ ಅಧಿಕಾರಿಗಳಿಗೆ ತಾಕೀತು ಮಾಡಿದರು

ಪರಿಸರ ಕಾಳಜಿಯಲ್ಲಿ ಯುವಕರ ಪಾತ್ರ ಮಹತ್ವದ್ದು : ವಿ.ಎಫ್.ಅಂಗಡಿ

ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಮ.

ಕಾನೂನು ಲೆಕ್ಕಕ್ಕಿಲ್ಲ ಲಕ್ಕುಂಡಿ ಗ್ರಾಮ ಪಂಚಾಯತಿಗೆ..?: ಜನರ ಆರೋಗ್ಯ ಒತ್ತೆ ಇಡಲು ಹೊರಟಿತ್ತಾ ಗ್ರಾಪಂ..!

ಗದಗ: ಗ್ರಾಮದ ಅಭಿವೃದ್ಧಿಗೆ ಪೂರಕವಾಗಿರಬೇಕಿದ್ದ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಗ್ರಾಮವನ್ನೆ ಮಾರಾಟ ಮಾಡಲು ಹಿಂಜರಿಯುವುದಿಲ್ಲ…

ಕೈಗೆ ಸಿಕ್ಕ ಅಧಿಕಾರಿಗೆ ಟ್ರ‍್ಯಾಕ್ಟರ್ ನಲ್ಲಿ ರಸ್ತೆ ದರ್ಶನ: ಕೆಲವು ತಿಂಗಳಕ್ ಕಿತ್ತು ಹೋಗೈತ್ಯಂತ ದೊಡ್ಡೂರು ರಸ್ತೆ!

ಹೇಳಿ, ಹೇಳಿ ಸಾಕಾಗಿ ಹೋಯ್ತು. ಕಾಮಗಾರಿ ಮುಗಿದ್ ಒಂದ್ ತಿಂಗಳದಾಗ ಮಾಡಿದ್ ರೋಡ್ ಹಳ್ಳಾ ಹಿಡಿದೈತಿ. ಬರ್ರಿ.. ನೀವಾರಾ ನೋಡ್ ಬರ್ರಿ.., ಕೆಲ್ಸಾ ಮಾಡಿದ್ ಗುತ್ತಿಗೆದಾರರಾದ್ರು ಯಾರು? ಹಿಂಗೆಲ್ಲ ಹೇಳಿ ಅಧಿಯಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡ ಘಟನೆ ಲಕ್ಷ್ಮೇಶ್ವರದಲ್ಲಿ ನಡೆಯಿತು.