ಲಕ್ಷ್ಮೇಶ್ವರ: ಸರ್ಕಾರ ಅನೇಕ ಯೋಜನೆಗಳನ್ನು ಅದರಲ್ಲೂ ಮುಖ್ಯವಾಗಿ ನೀರಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಕೇವಲ ಪೈಪ್ ಹಾಕಿ ಟ್ಯಾಂಕರ್ ನಿರ್ಮಿಸಿದರೆ ಇಲಾಖೆಯ ಜವಾಬ್ದಾರಿ ಮುಗಿಯುವುದಿಲ್ಲ. ನೀರು ಸರಬರಾಜು ಆಗುತ್ತದೆಯೋ ಇಲ್ಲೋವೋ ಎನ್ನುವುದನ್ನು ಅಧಿಕಾರಿಗಳು ಮನದಟ್ಟ ಮಾಡಿಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಗುರಿಕಾರ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾ.ಪಂ ಸಾಮಾನ್ಯ ಸಭೆಯೂ ಅಧ್ಯಕ್ಷ ಪರಶಪ್ಪ ಇಮ್ಮಡಿ ಅಧ್ಯಕ್ಷತೆಯಲ್ಲಿ ಜರುಗಿತು. ತಾ.ಪಂ ಸದಸ್ಯರಾದ ಗಿರಜವ್ವ ಲಮಾಣಿ, ಸುಶೀಲವ್ವ ಲಮಾಣಿ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಮೊಟ್ಟೆ ಪೂರೈಕೆ ಆಗುತ್ತಿಲ್ಲ. ಕಾರ್ಯಕರ್ತರನ್ನು ಪ್ರಶ್ನಿಸಿದರೆ ನಾವೆ ಕೈಯಿಂದ ಹಣ ಕೊಟ್ಟು ಮೊಟ್ಟೆ ತರಬೇಕಾಗಿದೆ.

ಅನುದಾನ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಿಡಿಪಿಓ ಅವರಿಗೆ ಪ್ರಶ್ನಿಸಿದಾಗ ಗಲಿಬಿಲಗೊಂಡ ಸಿಡಿಪಿಓ, ಅನುದಾನ ಸಮರ್ಪಕವಾಗಿ ಬಿಡುಗಡೆಯಾಗದಿರುವುದರಿಂದ ಈ ಗೊಂದಲ ಉಂಟಾಯಿತು. ಈಗ ಎಲ್ಲವೂ ಸರಿಯಾಗಿದ್ದು ಮುಂಚಿತವಾಗಿ ಮೊಟ್ಟೆ ಖರೀದಿಗೆ ಹಣ ನೀಡಲಾಗುವುದು ಎಂದು ಹೇಳಿದರು.

ಪರಶಪ್ಪ ಇಮ್ಮಡಿ ಮಾತನಾಡಿ, ಪ್ರಮುಖವಾಗಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಮೇಲೆ ನಡೆದ ಚರ್ಚೆಯಲ್ಲಿ ಆದ್ರಳ್ಳಿ, ಬಟ್ಟೂರು, ಬಾಳೆಹೋಸೂರು ಮತ್ತಿತ್ತರ ಗ್ರಾಮಗಳಲ್ಲಿ ಬೇಸಿಗೆ ಪೂರ್ವದಲ್ಲಿಯೇ ನೀರಿನ ಹಾಹಾಕಾರ ತಲೆದೂರಿದೆ. ಸರಕಾರ ನೀರು ಸರಬರಾಜಿಗಾಗಿ ಕೋಟಿ ಕೋಟಿ ಹಣ ವಿನಿಯೋಗಿಸುತ್ತಿದ್ದರು, ಇಲಾಖೆಯು ಜವಾಬ್ದಾರಿಯಿಂದ ಕಾರ್ಯನಿರ್ವಹಿಸದೆ. ಇರೋದರಿಂದ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಜಿಪಂ, ಅರಣ್ಯ ಸಾಮಾಜಿಕ ಅರಣ್ಯ, ಶಿಕ್ಷಣ ಸೇರಿದಂತೆ ಅನೇಕ ಇಲಾಖೆಗಳ ಮೇಲೆ ಚರ್ಚೆ ಜರುಗಿತು.

ಜಿ.ಪಂ ಇಲಾಖೆಯ ಶ್ರೀಧರ, ಆರ್‌ಡ್ಲೂಎಸ್ ಮಲ್ಲಿಕಾರ್ಜುನ, ಸಿ. ತೋಟಗಾರಿಕೆ ಇಲಾಖೆಯ ಸುರೇಶ ಕುಂಬಾರ, ಶಿಕ್ಷಣ ಇಲಾಖೆಯ ಆರ್.ಎಸ್.ಬುರಡಿ ಲೋಕೋಪಯೋಗಿ ಇಲಾಖೆಯ ನರೇಂದ್ರ. ಡಿ.ಬಿ, ಅರಣ್ಯ ಇಲಾಖೆಯ ಎಚ್.ಮುಲ್ಲಾ, ತಾ.ಪಂ. ಉಪಾಧ್ಯಕ್ಷೆ ಜನನಿ ಅತ್ತಿಗೇರಿ, ಸುಶೀಲವ್ವ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಪಿವರ್ಸ್ ಹಾಕದೆ ಕಾಮಗಾರಿ ಪೂರ್ಣ: ಲಕ್ಷ್ಮೇಶ್ವರದಲ್ಲಿ ಅಂಬೇಡ್ಕರ್ ನಗರ ಕಾಮಗಾರಿ ಮುಗಿದು ಐದು ತಿಂಗಳಾತು

ಕಾಂಕ್ರೀಟ್ ರಸ್ತೆ ಇಲ್ಲದೇ ಸಂಚಾರಕ್ಕೆ ಸಂಚಾಕಾರ ಬಂದಿದೆ ಎಂದು ಪಟ್ಟಣದ ಜನರು ಪಟ್ಟು ಹಿಡಿದ ಪರಿಣಾಮ ಕಾಂಕ್ರೀಟ್ ರಸ್ತೆಯೇನೋ ನಿರ್ಮಾಣ ಮಾಡಿದರು. ಆದರೆ ಕಾಮಗಾರಿ ಕಾಟಾಚಾರಕ್ಕೆ ಮಾಡಿದರಾ ಎನ್ನುವ ಪ್ರಶ್ನೆ ಲಕ್ಷ್ಮೇಶ್ವರ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಉದ್ಭವವಾಗಿದೆ.

ಕಲೆಯ ಅಭಿರುಚಿ ಇಲ್ಲದದಿದ್ದರೆ ನಕಾರಾತ್ಮಕ ಅಪಸವ್ಯಗಳು ಮೈದಳೆಯುತ್ತವೆ

ಲಲಿತಕಲೆ, ಸಾಹಿತ್ಯ, ಸಂಗೀತದಥ ಕಲೆಗಳ ಅಭಿರುಚಿ ಇಲ್ಲದಿರುವುದರಿಂದಲೇ ಆಧನಿಕ ಯುವಜನರಲ್ಲಿ ನಕಾರಾತ್ಮಕ ಚಿಂತನೆಗಳು ಮೂಡುತ್ತಿವೆ

ಮಳೆಯ ಸಂಕಷ್ಟ – ಮಣ್ಣಲ್ಲಿ ಮಣ್ಣಾದ ಈರುಳ್ಳಿ…ಮಾರುಕಟ್ಟೆಯಲ್ಲಿ ಗಗನಕ್ಕೆ ಏರಿದ ದರ!

ಬೆಂಗಳೂರು : ವಿಪರೀತ ಮಳೆಯಿಂದಾಗಿ ರೈತರು ಬೆಳೆದ ಈರುಳ್ಳಿ ಹೊಲದಲ್ಲಿಯೇ ಕೊಳೆಯುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಗಗನಕ್ಕೆ ಏರುತ್ತಿದೆ.

ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಉದ್ಘಾಟನೆ

ಉತ್ತರಪ್ರಭ ಸುದ್ದಿ ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ.…