ವರದಿ: ವಿಠಲ ಕೆಳೂತ್


ಮಸ್ಕಿ: ದೇವನಾಂಪ್ರಿಯ ಅಶೋಕ ಮೋಟಾರ ರಿವೈಂಡಿಗ್ ಕಾರ್ಮಿಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಸರ್ವ ಸದಸ್ಯರ ಒಮ್ಮತ್ತದಿಂದ ಹುಸೇನಸಾಬ ಇಲಕಲ್ಲ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕರಿಯಪ್ಪ(ಉಪಾಧ್ಯಕ್ಷ) ಮಲ್ಲಿಕಾರ್ಜುನ(ಗೌರವಧ್ಯಕ್ಷ) ಶಂಕರಸಿಂಗ್(ಪ್ರಧಾನ ಕಾರ್ಯದರ್ಶಿ) ಚಂದು ಮುರಾರಿ(ಜಂಟಿ ಕಾರ್ಯದರ್ಶಿ) ಚಂದ್ರಸ್ವಾಮಿ(ಖಜಾಂಚಿ) ಇರ್ಫಾನ್( ಜಂಟಿ ಖಜಾಂಚಿ) ಕಾರ್ಯಕಾರಣಿ ಸದಸ್ಯರನ್ನಾಗಿ ಮೆಹಬೂಬ್ ಸಾಬ, ಮಾಲಸಾಬ ಗಾದಿ, ಸದ್ದಾಂ ಜಂಡಕಟ್ಟೆ, ಮೌಲಸಾಬ ಛತ್ತಿ ಅವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ನೂತನವಾಗಿ ಆಯ್ಕೆಯಾದ ತಾಲೂಕು ಅಧ್ಯಕ್ಷ ಹುಸೇನಸಾಬ ಇಲಕಲ್ಲ ಅವರು ಮಾತನಾಡಿ, ರಾಜ್ಯದಲ್ಲಿನ ಮೋಟಾರ ರಿವೈಂಡಿಗ್ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಕೆಲಸದಲ್ಲಿ ನಿರತರಾದ ಕಾರ್ಮಿಕರಿಗೆ ಭದ್ರತೆ ಇಲ್ಲ. ಸರಕಾರದಿಂದ ಯಾವುದೇ ರೀತಿ ಸೌಲಭ್ಯ ಸಿಗುತ್ತಿಲ್ಲ.‌ ಹೀಗಾಗಿ ನಾವೆಲ್ಲರೂ ಒಗ್ಗಟ್ಟು ಆಗೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ರಿವೈಂಡಿಗ್ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ,ಕಾರ್ಯಕಾರಿ ಸದಸ್ಯ ಈಶ್ವರಪ್ಪ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *

You May Also Like

ಶನಿವಾರವೂ ಶಿಕ್ಷಣ ಇಲಾಖೆಗೆ ರಜೆ

ಎರಡು ಮತ್ತು ನಾಲ್ಕನೇ ಶನಿವಾರ ಮಾತ್ರ ಶಿಕ್ಷಣ ಇಲಾಖೆ ನೌಕರರಿಗೆ ರಜೆ ಘೋಶಿಸಲಾಗಿತ್ತು. ಆದರೆ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ತಿಂಗಳ ಎಲ್ಲ ಶನಿವಾರವೂ ರಜೆ ಘೋಷಣೆ ಮಾಡಿದೆ.

ರಾಜ್ಯ ವಿಧಾನಪರಿಷತ್ ಚುನಾವಣೆಗೆ ಮುಹೂರ್ತ ನಿಗದಿ

ದೆಹಲಿ/ಬೆಂಗಳೂರು: ಇದೇ ಜೂನ್ 30ರಂದು ಅವಧಿ ಮುಕ್ತಾಯವಾಗಲಿರುವ 7 ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಯಲಿದೆ. ಈ ವಿಷಯವನ್ನು ಚುನಾವಣಾ ಆಯೋಗ ಘೋಷಿಸಿದೆ.

ಜಮೀನು ವಿವಾದ ಕೊಲೆಯಲ್ಲಿ ಅಂತ್ಯ.

ಜಮೀನು ವಿವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾವೆರಿ ಜಿಲ್ಲೆಯಲ್ಲಿ ನಡೆದಿದೆ.

ಸದಾಶಿವ ಯೋಗ ವರದಿ ವಿಚಾರ ಕಟೀಲ್ ಹೇಳಿಕೆ ಹಿಂಪಡೆಯಲು ಒತ್ತಾಯ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರಕಾರ ಬದ್ದವಾಗಿದೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿರುವ ಹೇಳಿಕೆಯನ್ನು ಹಿಂದೆ ಪಡಿಯಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಬಂಜಾರ ಸಮಾಜದ ಯುವ ಮುಖಂಡ ರಮೇಶ ಲಮಾಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ.