ಆಲಮಟ್ಟಿ : ಸಮೀಪದ ಅರಳದಿನ್ನಿ ಗ್ರಾಮದಲ್ಲಿನ ಸಾರ್ವಜನಿಕ ಮಹಿಳಾ ಶೌಚಾಲಯದ ಗೋಡೆಯನ್ನು ಎತ್ತರಿಸಬೇಕು ಹಾಗು ಹೊಸದೊಂದು ಶೌಚಾಲಯ ನಿಮಿ೯ಸಬೇಕು ಎಂದು ಕನಾ೯ಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗು ಗ್ರಾಮಸ್ಥರು ಆಗ್ರಹಿಸಿದ್ದಾರೆ
ಈ ಕುರಿತು ಇಲ್ಲಿನ ಗ್ರಾಪಂ. ಅದ್ಯಕ್ಷ ಮಂಜುನಾಥ್ ಹಿರೇಮಠ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಆಲಮಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿನ ಅರಳದಿನ್ನಿ ಗ್ರಾಮದಲ್ಲಿ ಮಹಿಳೆಯರು ನಿತ್ಯ ಶೌಚಕ್ಕಾಗಿ ತೀವ್ರ ಪರದಾಟ ನಡೆಸಬೇಕಾಗಿದೆ. ಗ್ರಾಮದಲ್ಲಿನ ಹಳೆ ಶೌಚಾಲಯದ ಪರಸ್ಥಿತಿ ಹದಗೆಟ್ಡಿದೆ. ಮಹಿಳೆಯರು ಹಿಡಿಶಾಪ ಹಾಕುವಂತಾಗಿದೆ. ನಿಸರ್ಗಕ್ರಿಯೆಗೆ ಅತ್ತಇತ್ತ ದೂರದವರೆಗೆ ಅಲೆದಾಡುವಂತಾಗಿದೆ ಎಂದು ದೂರಲಾಗಿದೆ.


ಹಳೆ ಶೌಚಾಲಯ ರಸ್ತೆಗೆ ಹತ್ತಿರವಾಗಿದೆ. ರಸ್ತೆ ನವೀಕರಣದಿಂದಾಗಿ ಶೌಚಾಲಯ ಮಟ್ಟಕ್ಕಿಂತ ರಸ್ತೆ ಎತ್ತರ ಹೆಚ್ಚಾಗಿದೆ. ಇದರಿಂದ ಶೌಚಾಲಯ ಬಳಿಸಲು ಮಹಿಳೆಯರು ಮುಜುಗರ ಪಟ್ಟು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಾತ್ರಿಯವರೆಗೆ ನಿಸರ್ಗಕ್ರಿಯೆ ತಡೆದುಕೊಳ್ಳುವ ದುಸ್ಥಿತಿ ಬಂದೊದಗಿದೆ. ಕತ್ತಲಲ್ಲಿ ಅಥವಾ ಬೆಳಕು ಹರಿಯುವ ಮುನ್ನವೇ ಹೋಗಬೇಕಾದ ದಯನೀಯ ಪರಿಸ್ಥಿತಿ ಇದೆ. ಕಾರಣ ಹಳೆ ಶೌಚಾಲಯದ ಗೋಡೆ ಮತ್ತಿಷ್ಟು ಮೂರನಾಲ್ಕು ಅಡಿ ಎತ್ತರಿಸಿ ಶೌಚಾಲಯ ನವೀಕರಿಸಬೇಕು ಹಾಗು ಹೊಸದಾಗಿ ಇನ್ನೊಂದು ಶೌಚಾಲಯ ಮಹಿಳೆಯರಿಗಾಗಿ ನಿಮಿ೯ಸಿ ಅನುಕೂಲ ಮಾಡಿಕೊಡಬೇಕು. ಮಹಿಳೆಯರಿಗೆ ಇಲ್ಲಿ ಒದಗಿರುವ ಸಂಕಷ್ಟಕ್ಕೆ , ಮಾನ ಮಯಾ೯ದೆ,ಆರೋಗ್ಯ ಗಮನದಲ್ಲಿಟ್ಟುಕೊಂಡು ಸಮಸ್ಯೆ ಪರಿಹಾರಕ್ಕೆ ತುತು೯ ಮುಂದಾಗಬೇಕು. ಅಲ್ಲದೇ ಅರಳದಿನ್ನಿ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿ ರೂಪಿಸಲು ಸಂಬಂಧಿಸಿದವರು ಗಮನ ಹರಿಸಬೇಕು ಎಂದು ಮನವಿ ಮಾಡಲಾಗಿದೆ.
ಈಗಾಗಲೇ ಹೊಸ ಶೌಚಾಲಯ ನಿಮಾ೯ಣಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದಾಗ್ಯೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಳಾವಕಾಶದ ಕೊರತೆ ಸಬೂಬ ಮುಂದಿಡುತ್ತಾ ಜಾರಿಕೊಳ್ಳುತ್ತಿದ್ದಾರೆ ಎಂದು ಸಂಘಟನೆ ದೂರಿದೆ. ಈಗಲಾದರೂ ಎಚ್ಚೆತ್ತುಕೊಂಡು ಹೆಣ್ಣು ಮಕ್ಕಳಿಗೆ ಅಗುತ್ತಿರುವ ಶೌಚಾಲಯ ಸೌಲಭ್ಯ ಇಲ್ಲದ ತೊಂದರೆಯನ್ನು ಪರಿಹರಿಸಬೇಕು. ವಿಳಂಬ ಧೋರಣೆ ತಾಳದೆ ,ಈ ಗಂಭೀರ ವಿಷಯವನ್ನು ಕಡೆಗಣಿಸದೇ ತಕ್ಷಣ ಕಾರ್ಯಪ್ರರ್ವತರಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕಿಳಿಯಬೇಕಾದೀತೆಂದು ವೇದಿಕೆಯ ಅಧ್ಯಕ್ಷ ಪತ್ತೇಸಾಬ ಚಾಂದ, ಉಪಾಧ್ಯಕ್ಷ ಚಂದ್ರಶೇಖರ್ ಹೆರಕಲ್, ಯುವ ಘಟಕ ಅಧ್ಯಕ್ಷ ಯಲಗೂರೇಶ್ ಮೇಟಿ, ನಗರ ಘಟಕ ಅಧ್ಯಕ್ಷ ಮಹಮ್ಮದ್ ಬಸೀರ ಮುಲ್ಲಾ, ಕಾಮಿ೯ಕ ಘಟಕದ ಉಪಾಧ್ಯಕ್ಷ ಶಿವಾನಂದ ಕೊಳ್ಳಾರ, ಕಾರ್ಯದರ್ಶಿ ರಸೂಲಸಾಬ ಹುಸೇನಸಾಬ ಸಿಂಧೆ, ಸಂಚಾಲಕ ಮಹಿಬೂಬ ಡೋಣೂರ, ರಫೀಕ ಅಥಣಿ ಮೊದಲಾದವರು ಎಚ್ಚರಿಸಿದ್ದಾರೆ.
ಪೋಟೋ ಫೈಲ್ : ಆಲಮಟ್ಟಿ ಸನಿಹದ ಅರಳದಿನ್ನಿ ಗ್ರಾಮದಲ್ಲಿ ಮಹಿಳೆಯರ ಸಾರ್ವಜನಿಕ ಶೌಚಾಲಯದ ಗೋಡೆ ಎತ್ತರಿಸಲು ಹಾಗು ಹೊಸದಾಗಿ ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಕನಾ೯ಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಲಮಟ್ಟಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್ ಹಿರೇಮಠ ಅವರಿಗೆ ಮನವಿ ಅಪಿ೯ಸಿದರು.

Leave a Reply

Your email address will not be published. Required fields are marked *

You May Also Like

ಉಡುಪಿಯಲ್ಲಿ ಕ್ವಾರಂಟೈನ್ ಆದವರಿಗೆ ಮಂಗಳೂರಿನಲ್ಲಿ ಸೋಂಕು!

ಮಂಗಳೂರು: ಉಡುಪಿಯಲ್ಲಿ ಕ್ವಾರಂಟೈನ್ ಮುಗಿಸಿ ನಂತರ ಮಂಗಳೂರಿಗೆ ಬಂದಿದ್ದ 7 ಜನರಲ್ಲಿ ಕೊರೊನಾ ಸೋಂಕು ಇರುವುದು…

ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಅವರಿಗೆ ನೀಡಿದ ಸಲಹೆ ಏನು?

ಗ್ರೀನ್ ಝೋನ್‌ಗಳಲ್ಲಿಯೂ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ವಿಧಿಸಲಾಗಿರುವ ನಿಯಮಗಳೇ ಮೇ 17ರ ನಂತರವೂ ಮುಂದುವರಿಯಲಿ ಎಂದು ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಗದಗ ಜಿಲ್ಲೆಯಲ್ಲಿಂದು 19 ಕೊರೊನಾ ಪಾಸಿಟಿವ್ : ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು?

ಜಿಲ್ಲೆಯಲ್ಲಿ ಇಂದು 19 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ಒಟ್ಟು 10241 ಪ್ರಕರಣಗಳು ಪತ್ತೆಯಾದಂತಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 87677 ಆಗಿದೆ.

ಬಿಜೆಪಿ ಸರಕಾರ ಬರಲು ಶ್ರಮಿಸಿ: ಮಾಜಿ ಶಾಸಕ‌ ಪ್ರತಾಪಗೌಡ ಕರೆ

ಮಸ್ಕಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ‌‌ ಬರುವುದಕ್ಕೆ ಕಾರ್ಯಕರ್ತರು ಶ್ರಮಿಸಬೇಕೆಂದು‌ ಮಾಜಿ‌‌…