ರೋಣ: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಅವ್ಯವಸ್ಥೆಯನ್ನು ಸಾರಿಗೆ ಇಲಾಖೆ ಸಂಚಾರಿ ನಿರೀಕ್ಷಕರಿಗೆ ತೋರಿಸುವ ಮೂಲತ ಜೈ ಭೀಮ ಆರ್ಮಿ ಸಂಘಟನೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.

ಈ ಸಮಸ್ಯೆಗಳ ಬಗ್ಗೆ ಘಟಕ ವ್ಯವಸ್ಥಾಪಕರೊಂದಿಗೆ ಚೆರ್ಚೆ ಮಾಡಿ ಆದಷ್ಟು ಬೇಗನೆ ಪರಿಹಾರ ಮಾಡುತ್ತೇವೆ. ಮತ್ತು ಶೌಚಾಲಯದ ಗುತ್ತಿಗೆದಾರನಿಗೆ ಈ ಬಗ್ಗೆ ತಿಳಿಸಿ ಸ್ವಚ್ಛತೆ ಬಗ್ಗೆ ಗಮನ ಹರಿಸುವಂತೆ ಸೂಚಿಸಲಾಗುವುದು ಎಂದು ಸಂಚಾರಿ ನಿರೀಕ್ಷಕ ಸರ್ಫ್ರಾಜ್ ಡಾಲಾಯತ್ ಭರವಸೆ ನೀಡಿದರು.

ಗಬ್ಬು ನಾರುತ್ತಿರುವ ಬಸ್ ನಿಲ್ದಾಣದ ಸಾರ್ವಜನಿಕ ಮೂತ್ರಾಲಯಗಳು, ಶೌಚಾಲಯಗಳು, ಹೊರಾಂಗಣ ಹಾಗೂ ಚರಂಡಿಗಳನ್ನು ಸಂಚಾರಿ ನಿರೀಕ್ಷಕ ಸರ್ಫ್ರಾಜ್ ಡಾಲಾಯತ್ ಮತ್ತು ಸಂಚಾರಿ ವ್ಯವಸ್ಥಾಪಕರಿಗೆ ಕರೆದೊಯ್ದು ತೋರಿಸಿ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಜೈ ಭೀಮ ಆರ್ಮಿ ಅಧ್ಯಕ್ಷ ಹನಮಂತ ಚಲವಾದಿ ಮಾತನಾಡಿ, ಪಟ್ಟಣದಲ್ಲಿ ಸಾರಿಗೆ ಸೌಲಭ್ಯ ಸರಿಯಾಗಿ ಇರುವದಿಲ್ಲ. ಇಲ್ಲಿ ಸರ್ಕಾರಿ ಸೇವೆಯಲ್ಲಿರುವ ವ್ಯವಸ್ಥಾಪಕರು ಸರಿಯಾಗಿ ಆಡಳಿತ ನಿರ್ವಹಣೆ ಮಾಡುತ್ತಿಲ್ಲ. ಸಂಘಟನೆಯಿದ ಬಸ್ ತಡೆದು ಪ್ರತಿಭಟನೆ ಮಾಡುತ್ತಿದ್ದು, ಒಂದು ಗಂಟೆಯಾದರೂ ನಿಲ್ದಾಣಕ್ಕೆ ಬಂದು ಏನು ಸಮಸ್ಯೆ ಎಂದು ಕೇಳುವಷ್ಟು ಸೌಜನ್ಯ ತೋರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೈಭೀಮ್ ಆರ್ಮಿ ಸಂಚಾಲಕ ಮುತ್ತು ನಂದಿ ಮಾತನಾಡಿ, ಬಸ್ ನಿಲ್ದಾಣವು ಅವ್ಯವಸ್ಥೆಯ ಆಗರವಾಗಿದೆ. ಚರಂಡಿ, ಬಸ್ ತಂಗುವ ಸ್ಥಳ ಕಸದಿಂದ ಕೂಡಿದೆ. ಇನ್ನು ಸುತ್ತಲಿನ ಬಹುತೇಕ ಹಳ್ಳಿಗಳಿಗೆ ಸರಿಯಾದ ಬಸ್ ಸೌಕರ್ಯವೇ ಇಲ್ಲ ಎಂದರು ಆರೋಪಿಸಿದರು.

ಈ ಸಂದರ್ಭದಲ್ಲಿ ಅಶೋಕ ತಾಳದವರು, ಪುಂಡಲೀಕ್ ಮಾದರ, ವಿಜಯ ಮೆಣಸಗಿ ಮುಜ್ಜು ದಳವಾಯಿ, ಸಂತೋಷ್ ಚಲವಾದಿ, ಮಹೇಶ ಮೇಗೂರ್, ಯಚರಪ್ಪ ದೇವಪ್ಪ ಬ್ಯಾಳಿ ಸೇರಿದಂತೆ ಇನ್ನಿತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಎಪಿಎಂಸಿ ಚೆಕ್‌ಪೊಸ್ಟ್ ನಲ್ಲಿ ಹಣ ವಸೂಲಿ ದಂಧೆ?

ಎಪಿಎಂಸಿ ಚೆಕ್‌ಪೊಸ್ಟ್ನಲ್ಲಿ ವಾಹನ ತಪಾಸಣೆ ಹೆಸರಿನಲ್ಲಿ ಭಾರಿ ಪ್ರಮಾಣದಲ್ಲಿ ಹಣ ವಸೂಲಿ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸದ್ಯದ ಆಸ್ತಿ ಎಷ್ಟು ಗೊತ್ತಾ?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷಕ್ಕಿಂತಲೂ ಈ ವರ್ಷ ಶ್ರೀಮಂತರಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಾಗಿದೆ. ಈ ವರ್ಷ ಅವರ ಆಸ್ತಿಯ ಮೌಲ್ಯ ರೂ. 36 ಲಕ್ಷ ಹೆಚ್ಚಳವಾಗಿದೆ.

ಚೀನಾ – ಭಾರತೀಯ ಸೈನಿಕರ ನಡುವೆ ಸಂಘರ್ಷ – 76 ಸೈನಿಕರಿಗೆ ಗಾಯ!

ಹೊಸದೆಹಲಿ: ಲಡಾಖ್‌ನ ಗಲ್ವಾನ್‌ ಕಣಿವೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಕಾಳಗದಲ್ಲಿ 76…